ಸೋಮವಾರ, ಏಪ್ರಿಲ್ 28, 2025
HomeSportsCricketGive me 20 mins with Virat Kohli : “ಜಸ್ಟ್ 20 ನಿಮಿಷದಲ್ಲಿ...

Give me 20 mins with Virat Kohli : “ಜಸ್ಟ್ 20 ನಿಮಿಷದಲ್ಲಿ ಕೊಹ್ಲಿ ಸಮಸ್ಯೆಗೆ ಪರಿಹಾರ..” ಸುನೀಲ್ ಗವಾಸ್ಕರ್ ಕೈಯಲ್ಲಿದ್ಯಂತೆ ವಿರಾಟ್ ಯಶಸ್ಸಿನ ಮಂತ್ರ

- Advertisement -

ಮುಂಬೈ: ಕ್ರಿಕೆಟ್ ಜಗತ್ತಿನ ಮಾರ್ಡರ್ನ್ ಡೇ ಗ್ರೇಟ್ ವಿರಾಟ್ ಕೊಹ್ಲಿ (Give me 20 mins with Virat Kohli) ರನ್ ಗಳಿಸಿದ್ರೂ ಸುದ್ದಿ, ರನ್ ಗಳಿಸದಿದ್ರೂ ಸುದ್ದಿ. ಕಳೆದ ಎರಡೂವರೆ ವರ್ಷಗಳಿಂದ ವಿರಾಟ್ ಕೊಹ್ಲಿ ಶತಕ ಸಿಡಿಸದೆ ಸುದ್ದಿಯಲ್ಲಿದ್ದಾರೆ. 2019ರ ನವೆಂಬರ್”ನಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ನಂತರ, ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಗಳಿಸಿಲ್ಲ.

ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಟಿ20 ಹಾಗೂ ಏಕದಿನ ಸರಣಿಯಲ್ಲೂ ವಿರಾಟ್ ಕೊಹ್ಲಿ ದಯನೀಯ ವೈಫಲ್ಯ ಎದುರಿಸಿದ್ದರು. ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ 6 ಇನ್ನಿಂಗ್ಸ್’ಗಳಲ್ಲಿ ಕೊಹ್ಲಿ 11, 20, 01, 11, 16 ಮತ್ತು 17 ರನ್ ಗಳಿಸಿದ್ದರು. ಕೊಹ್ಲಿ ಅವರ ಈ ಕಳಪೆ ಫಾರ್ಮ್ ವಿರುದ್ಧ ಮಾಜಿ ಕ್ರಿಕೆಟಿಗರು ಕಿಡಿ ಕಾರುತ್ತಿದ್ದಾರೆ. ಕೊಹ್ಲಿಯನ್ನು ಟೀಮ್ ಇಂಡಿಯಾದಿಂದ ಡ್ರಾಪ್ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಆದರೆ ಟೀಮ್ ಇಂಡಿಯಾದ ಮಾಜಿ ನಾಯಕ, ಬ್ಯಾಟಿಂಗ್ ದಂತಕಥೆ ಸುನೀಲ್ ಗವಾಸ್ಕರ್ (Sunil Gavaskar), ವಿರಾಟ್ ಕೊಹ್ಲಿ ಬೆಂಬಲಕ್ಕೆ ನಿಂತಿದ್ದಾರೆ. ನನಗೆ ಕೊಹ್ಲಿ ಜೊತೆ ಮಾತನಾಡಲು 20 ನಿಮಿಷಗಳು ಸಿಕ್ಕರೆ ಸಾಕು, ಅವರ ಬ್ಯಾಟಿಂಗ್ ಸಮಸ್ಯೆಗೆ ಪರಿಹಾರ ನೀಡುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ ಗವಾಸ್ಕರ್. “ನನಗೆ ಕೊಹ್ಲಿ ಜೊತೆ 20 ನಿಮಿಷಗಳು ಸಿಕ್ಕರೆ, ಅವರು ಏನು ಮಾಡಬೇಕೆಂಬುದನ್ನು ನಿಖರವಾಗಿ ಹೇಳಬಲ್ಲೆ. ನನ್ನ ಸಲಹೆ ಅವರಿಗೆ ಸಹಕಾರಿಯಾಗಿಯೇ ಬಿಡುತ್ತದೆ ಎಂದು ಹೇಳಲಾರೆ. ಆದರೆ ಅದರಿಂದ ಅವರಿಗೆ ಪ್ರಯೋಜನವಂತೂ ಇದೆ. ವಿಶೇಷವಾಗಿ ಆಫ್ ಸ್ಟಂಪ್ ಲೈನ್’ನಲ್ಲಿ ವಿರಾಟ್ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಒದಗಿಸುವ ಪ್ರಯತ್ನ ಮಾಡುತ್ತೇನೆ”.

  • ಸುನೀಲ್ ಗವಾಸ್ಕರ್, ಮಾಜಿ ಕ್ರಿಕೆಟಿಗ.

ಆಟಗಾರನೊಬ್ಬ ಫಾರ್ಮ್’ನಲ್ಲಿ ಇಲ್ಲದೇ ಇದ್ದಾಗ, ಪ್ರತೀ ಎಸೆತವನ್ನೂ ಆಡಲು ಕಾತರಿಸುತ್ತಾನೆ. ವಿರಾಟ್ ಕೊಹ್ಲಿಗೆ (Virat Kohli) ಈಗ ಆಗುತ್ತಿರುವ ಸಮಸ್ಯೆ ಇದೇ. ಆಫ್ ಸ್ಟಂಪ್ ಲೈನ್’ನಲ್ಲಿ ಬೀಳುವ ಎಸೆತಗಳನ್ನು ಪದೇ ಪದೇ ಅಟ್ಟಿಸಿಕೊಂಡು ಹೋಗಿ ಆಡುತ್ತಿರುವ ವಿರಾಟ್ ಕೊಹ್ಲಿ, ಆ ಎಸೆತಗಳಿಗೆ ವಿಕೆಟ್ ಒಪ್ಪಿಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಲ್ಲಿ ವಿರಾಟ್ ಇದೇ ರೀತಿ ಔಟಾಗಿದ್ದರು. ಈ ಸಮಸ್ಯೆಗೆ ನಾನು ಪರಿಹಾರ ಹೇಳುತ್ತೇನೆ ಎಂದು ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.

‘’ನಾನೊಬ್ಬ ಆರಂಭಿಕ ಬ್ಯಾಟರ್ ಆಗಿ ಆಫ್ ಸ್ಟಂಪ್ ಲೈನ್’ನಲ್ಲಿ ವಿರಾಟ್ ಕೊಹ್ಲಿ ಈಗ ಎದುರಿಸುತ್ತಿರುವ ಸಮಸ್ಯೆಯನ್ನೇ ಎದುರಿಸಿದ್ದೆ. ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಆಡಲೇಬೇಕು. ನನಗೆ 20 ನಿಮಿಷ ಸಿಕ್ಕರೆ, ಆ ವಿಚಾರಗಳೇನು ಎಂಬುದನ್ನು ವಿರಾಟ್ ಕೊಹ್ಲಿಗೆ ತಿಳಿಸಬಲ್ಲೆ’’.

  • ಸುನೀಲ್ ಗವಾಸ್ಕರ್, ಮಾಜಿ ಕ್ರಿಕೆಟಿಗ.

ಇದನ್ನೂ ಓದಿ : ಮದುವೆಗೂ ಮುನ್ನವೇ ಮಗು ; ಆ್ಯಟಿಟ್ಯೂಡ್ ಸಮಸ್ಯೆ, ಸಾಲು ಸಾಲು ವಿವಾದ, ಪಾಂಡ್ಯ ಬದುಕು ಬದಲಿಸಿದ್ದು ‘ಆಕೆ’

ಇದನ್ನೂ ಓದಿ : Sunil Shetty Praises Hardik Pandya : ಕಂಬ್ಯಾಕ್ ಸ್ಟಾರ್ ಹಾರ್ದಿಕ್ ಪಾಂಡ್ಯನನ್ನು ಹೊಗಳಿದ ಕೆ.ಎಲ್ ರಾಹುಲ್ ಭಾವೀ ಮಾವ

Give me 20 mins with Virat Kohli Requested Sunil Gavaskar

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular