Gujarat Giants Vs Dabang Delhi K.C : ದಬಾಂಗ್ ಡೆಲ್ಲಿ, ಗುಜರಾತ್ ಟೈಂಟ್ಸ್ ಪ್ಲೇ ಆಫ್ ಕನಸು ಜೀವಂತ

ಹೈದರಾಬಾದ್: ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಮತ್ತು ಎರಡು ಬಾರಿಯ ರನ್ನರ್ಸ್ ಅಪ್ ಗುಜರಾತ್ ಜೈಂಟ್ಸ್ ತಂಡಗಳು (Gujarat Giants Vs Dabang Delhi K.C) ಮಂಗಳವಾರ ನಡೆದ ಪಂದ್ಯಗಳಲ್ಲಿ ಗೆಲ್ಲುವುದರೊಂದಿಗೆ ಪ್ರೊ ಕಬಡ್ಡಿ ಲೀಗ್ 9ನೇ (Pro Kabaddi League) ಆವೃತ್ತಿಯಲ್ಲಿ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿವೆ. ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯು ಮುಂಬಾ ವಿರುದ್ಧ 41-24ರ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದ ದಬಾಂಗ್ ಡೆಲ್ಲಿ 10ನೇ ಗೆಲುವಿನೊಂದಿಗೆ 60 ಅಂಕಗಳನ್ನು ಕಲೆ ಹಾಕಿತು.

ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಗುರುವಾರ ನಡೆಯುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಗೆದ್ದರೆ ಪ್ಲೇ ಆಫ್ ಹಂತಕ್ಕೇರಲಿದೆ. ಒಂದು ವೇಳೆ ಸೋತರೆ ದಬಾಂಗ್ ಪಡೆಯ ಪ್ಲೇ ಆಫ್ ಕನಸು ನುಚ್ಚುನೂರಾಗಲಿದೆ. ಮತ್ತೊಂದೆಡೆ ದಬಾಂಗ್ ಡೆಲ್ಲಿ ವಿರುದ್ಧ ದೊಡ್ಡ ಅಂತರದಲ್ಲಿ ಸೋತ ಯು ಮುಂಬಾ ತಂಡದ ಪ್ಲೇ ಆಫ್ ಹಾದಿ ಬಹುತೇಕ ಬಂದ್ ಆಗಿದೆ. ದಿನದ ಮತ್ತೊಂದು ಮಹತ್ವದ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವನ್ನು 44-30ರಲ್ಲಿ ಬಗ್ಗು ಬಡಿದ ಗುಜರಾತ್ ಜೈಂಟ್ಸ್ ಅಂಕ ಗಳಿಕೆಯನ್ನು 56ಕ್ಕೆ ಏರಿಸಿಕೊಂಡು ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿತು.

ಬುಧವಾರ ನಡೆಯುವ ಪಂದ್ಯದಲ್ಲಿ ಈಗಾಗಲೇ ಪ್ಲೇ ಆಫ್ ಹಂತಕ್ಕೇರಿರುವ ಬೆಂಗಳೂರು ಬುಲ್ಸ್ ತಂಡ ಪ್ಲೇ ಆಫ್ ರೇಸ್’ನಿಂದ ಹೊರ ಬಿದ್ದಿರುವ ಪಾಟ್ನಾ ಪೈರೇಟ್ಸ್ ತಂಡವನ್ನು ಎದುರಿಸಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಯು.ಪಿ ಯೋಧಾ ವಿರುದ್ಧ ಗೆದ್ದರೆ ಅಥವಾ ಪಂದ್ಯವನ್ನು ಟೈ ಮಾಡಿಕೊಂಡರೆ ತಮಿಳ್ ತಲೈವಾಸ್ ತಂಡ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಡಲಿದೆ. ಯು.ಪಿ ಯೋಧಾ ಈಗಾಗ್ಲೇ ಪ್ಲೇ ಆಫ್ ಪ್ರವೇಶಿಸಿದ್ದರೆ, 20 ಪಂದ್ಯಗಳಿಂದ 61 ಅಂಕ ಕಲೆ ಹಾಕಿರುವ ತಮಿಳ್ ತಲೈವಾಸ್ ಪ್ಲೇ ಆಫ್ ಪ್ರವೇಶಿಸುವ ಹೊಸ್ತಿಲಲ್ಲಿದೆ.

ಪ್ರೊ ಕಬಡ್ಡಿ ಲೀಗ್-9: ಬುಧವಾರದ ಪಂದ್ಯಗಳು (Pro Kabaddi League) :

  1. ಬೆಂಗಳೂರು ಬುಲ್ಸ್ Vs ಪಾಟ್ನಾ ಪೈರೇಟ್ಸ್
  2. ತಮಿಳ್ ತಲೈವಾಸ್ Vs ಯು.ಪಿ ಯೋಧಾ

ಇದನ್ನೂ ಓದಿ : Puneri Paltan vs Jaipur Pink Panthers : ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟ ಪುಣೇರಿ ಪಲ್ಟನ್, ಜೈಪುರ ಪಿಂಕ್ ಪ್ಯಾಂಥರ್ಸ್

ಇದನ್ನೂ ಓದಿ : Bengaluru Bulls enters play off : ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು ಬುಲ್ಸ್, ಯು.ಪಿ ಯೋಧಾ

ಇದನ್ನೂ ಓದಿ : Pro Kabaddi League: ದಕ್ಷಿಣ ಭಾರತ ಡರ್ಬಿಯಲ್ಲಿ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Gujarat Giants Vs Dabang Delhi K.C : Dabang Delhi, Gujarat Titans play off dream is alive

Comments are closed.