ಗುಜರಾತ್ ಟೈಟಾನ್ಸ್ (ಜಿಟಿ) ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಐಪಿಎಲ್ ಟ್ರೋಫಿ ಗೆಲ್ಲುವ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ದ ಗೆಲುವು ದಾಖಲಿಸಿದ ಬೆನ್ನಲ್ಲೇ ಚೊಚ್ಚಲ ಐಪಿಎಲ್‌ನಲ್ಲಿಯೇ ಟ್ರೋಫಿ ಗೆದ್ದ ಸಾಧನೆಯನ್ನು ಪಾಂಡ್ಯ ಪಡೆ ಮಾಡಿದೆ. ಈ ನಡುವಲ್ಲೇ ಗುಜರಾತ್ ತಂಡವನ್ನು ಗೆಲುವಿನ ದಡ ತಲುಪಿಸಿದ ನಾಯಕನ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಮಾತ್ರವಲ್ಲ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಮುಂದಿನ ನಾಯಕ (Team India captain) ಅನ್ನೋ ಘೋಷಣೆಗಳು ಕೇಳಿಬರುತ್ತಿದೆ.
ಟೀಂ ಇಂಡಿಯಾದ ಖ್ಯಾತ ಆಲ್‌ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಹಲವು ಸಮಯಗಳಿಂದಲೂ ಗಾಯದ ಸಮಸ್ಯೆಯಿಂದ ಬಳಲಿದ್ದಾರೆ. ಇದೇ ಕಾರಣಕ್ಕೆ ಹಲವು ಸರಣಿ ಗಳನ್ನೂ ಮಿಸ್ ಮಾಡಿಕೊಂಡಿದ್ದರು. ಕಳೆದ ವಿಶ್ವಕಪ್ ಪಂದ್ಯದ ವೇಳೆಯಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದೇ ಇರೋದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಆದ್ರೆ ಹಾರ್ದಿಕ್ ಪಾಂಡ್ಯ ಇದೀಗ ಐಪಿಎಲ್ ಪಂದ್ಯಾವಳಿಯ ಮೂಲಕ ತನ್ನ ವಿರುದ್ದದ ಎಲ್ಲಾ ಟೀಕೆಗೆಳಿಗೆ ಬ್ಯಾಟ್ ಹಾಗೂ ಬೌಲ್ ಮೂಲಕ ಉತ್ತರ ಕೊಟ್ಟಿದ್ದಾರೆ.
ಗುಜರಾತ್ ಟೈಟಾನ್ಸ್‌ಗೆ ಐಪಿಎಲ್ 2022 ರಲ್ಲಿ ಜಯಗಳಿಸಿದ ನಂತರ ಅವರು ಹಾರ್ದಿಕ್ ಪಾಂಡ್ಯ ಅವರನ್ನು ಭವಿಷ್ಯದ ಟೀಂ ಇಂಡಿಯಾ ನಾಯಕನಾಗಿ ನೋಡುತ್ತಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್ ಘೋಷಣೆ ಮಾಡಿದ್ದಾರೆ. ಟೈಟಾನ್ಸ್ ರಾಜಸ್ಥಾನ್ ರಾಯಲ್ಸ್ ಅನ್ನು ಏಳು ವಿಕೆಟ್‌ಗಳಿಂದ ಸೋಲಿಸಿ ಪ್ರತಿಷ್ಠಿತ ಐಪಿಎಲ್ ಅನ್ನು ಎತ್ತಿ ಹಿಡಿದಿದೆ. 2022 ರ ಐಪಿಎಲ್ ಟ್ರೋಫಿಯ ಲೀಗ್ ಹಂತದ ಪಾಯಿಂಟ್ಸ್ ಟೇಬಲ್‌ನಲ್ಲೂ ಅಗ್ರ ಸ್ಥಾನವನ್ನು ಗಳಿಸಿ ಕೊಂಡಿತ್ತು.
ಹಾರ್ದಿಕ್ ಪಾಂಡ್ಯ ನಾಯಕತ್ವದ ಕೌಶಲ್ಯವನ್ನು ಹಲವು ಖ್ಯಾತ ಕ್ರಿಕೆಟಿಗರು, ಕ್ರಿಕೆಟ್ ವಿಶ್ಲೇಷಕರು ಕೂಡ ಕೊಂಡಾಡಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ರೋಹಿತ್ ಶರ್ಮಾ ಮೂರು ಮಾದರಿಯ ಪಂದ್ಯಕ್ಕೂ ನಾಯಕರಾಗಿದ್ದಾರೆ. ಆದರೆ ರೋಹಿತ್ ಶರ್ಮಾ ಐಪಿಎಲ್ ಪಂದ್ಯಾವಳಿಯಲ್ಲಿ ಸಂಪೂರ್ಣವಾಗಿ ಮಂಕಾಗಿದ್ದರು. ಜೊತೆಗೆ ಐಪಿಎಲ್ ಲೀಗ್ ಹಂತದಲ್ಲಿಯೇ ಮುಂಬೈ ತಂಡ ಸೋಲನ್ನು ಕಂಡು ಹೊರಬಿದ್ದಿತ್ತು. ಈ ನಡುವಲ್ಲೇ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಗೆ ಕನ್ನಡಿಗ ಕೆ.ಎಲ್.ರಾಹುಲ್‌ಗೆ ನಾಯಕತ್ವ ನೀಡಲಾಗಿದೆ. ರೋಹಿತ್ ಶರ್ಮಾಗೆ ಈಗಾಗಲೇ 35 ವರ್ಷ ಹೀಗಾಗಿ ಸುದೀರ್ಘ ಅವಧಿಯ ವರೆಗೆ ಅವರು ನಾಯಕರಾಗಿ ಮುಂದುವರಿಯುವುದು ಕಷ್ಟಸಾಧ್ಯ. ಹೀಗಾಗಿ ಯುವ ಆಟಗಾರನಿಗೆ ಟೀಂ ಇಂಡಿಯಾದ ನಾಯಕತ್ವ ನೀಡುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬಂದಿದೆ.
Fantastic achievement for a new franchise … If India need a captain in a couple of years I wouldn’t look past @hardikpandya7 … Well done Gujurat .. #IPL2022
— Michael Vaughan (@MichaelVaughan) May 29, 2022
ಟೀಂ ಇಂಡಿಯಾದ ಉಪ ನಾಯಕನಾಗಿರುವ ಕೆ.ಎಲ್.ರಾಹುಲ್ ಈಗಾಗಲೇ ಹಲವು ಬಾರಿಗೆ ಟೀಂ ಇಂಡಿಯಾವನ್ನು ಮುನ್ನೆಡೆಸಿದ್ದಾರೆ. ಆದರೆ ಈ ಬಾರಿಯ ಐಪಿಎಲ್ ಪಂದ್ಯಾವಳಿ ಮುಗಿಯುತ್ತಿದ್ದಂತೆಯೇ ಪಾಂಡ್ಯ ಹೆಸರು ನಾಯಕನ ಸ್ಥಾನಕ್ಕೆ ಕೇಳಿಬಂದಿದೆ. ಜೊತೆಗೆ ಹಾರ್ದಿಕ್ ಪಾಂಡ್ಯ ಒಂದನೇ ಕ್ರಮಾಂಕದಲ್ಲಿ ತೋರಿದ ಸಾಧನೆಯ ಹಿನ್ನೆಲೆಯಲ್ಲಿ ಟೀಂ ಇಂಡಿಯಾದಲ್ಲಿಯೂ ಹಾರ್ದಿಕ್ ಪಾಂಡ್ಯ ಕ್ರಮಾಂಕವನ್ನು ಬದಲಾವಣೆ ಮಾಡಬೇಕೆಂಬ ಮಾತುಗಳು ಕೇಳಿಬಂದಿದೆ.
ಗುಜರಾತ್ ಟೈಟಾನ್ಸ್‌ನ ಮುಖ್ಯ ಕೋಚ್ ಆಶಿಶ್ ನೆಹ್ರಾ ಕೂಡ ಹಾರ್ದಿಕ್ ಪಾಂಡ್ಯ ಸಾಧನೆಯನ್ನು ಕೊಂಡಾಡಿದ್ದಾರೆ. ಯಾವುದೇ ತಂಡವು ಪ್ರಾರಂಭದ ಮೊದಲ ವರ್ಷದಲ್ಲಿ ವೇದಿಕೆಯ ಮೇಲೆ ಮುಗಿಸುವುದು ಸುಲಭವಲ್ಲ, ಆದರೆ “ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ” ಹುಡುಗರು “ನಿಜವಾಗಿಯೂ ಚೆನ್ನಾಗಿ ಗೆದ್ದಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : BCCI : ಐಪಿಎಲ್ 2022ರ ಫೈನಲ್‌ಗೆ ಮುನ್ನ ಮಹತ್ವದ ಘೋಷಣೆ ಮಾಡಿದ ಬಿಸಿಸಿಐ : ಆಟಗಾರರು ಪುಲ್ ಖಷ್
ಇದನ್ನೂ ಓದಿ : Gujarat Titans WIN IPL 2022 : ಐಪಿಎಲ್ ಟ್ರೋಫಿ ಗೆದ್ದ ಗುಜರಾತ್ ಟೈಟಾನ್ಸ್
Hardik Pandya is the next Team India captain, Big Announcement