ಸೋಮವಾರ, ಏಪ್ರಿಲ್ 28, 2025
HomeSportsCricketವಿಶ್ವಕಪ್ 2023 ಬೆನ್ನಲ್ಲೇ ಕ್ರಿಕೆಟ್‌ಗೆ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಿವೃತ್ತಿ

ವಿಶ್ವಕಪ್ 2023 ಬೆನ್ನಲ್ಲೇ ಕ್ರಿಕೆಟ್‌ಗೆ ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಿವೃತ್ತಿ

- Advertisement -

ಅಕ್ಟೋಬರ್ 5 ರಿಂದ ವಿಶ್ವಕಪ್ 2023  (ICC ODI World Cup 2023) ಪಂದ್ಯಾವಳಿ ಆರಂಭಗೊಳ್ಳಲಿದೆ. ಈಗಾಗಲೇ ತಂಡಗಳು ಅಭ್ಯಾಸ ಪಂದ್ಯ ವನ್ನು(world cup WarmUp match)  ಆಡುತ್ತಿವೆ. ಈ ಬಾರಿ ಕೊನೆಯ ಕ್ಷಣದಲ್ಲಿ ಟೀಂ ಇಂಡಿಯಾ ರ್ಪಡೆಯಾಗಿರುವ ಭಾರತ ಕ್ರಿಕೆಟ್‌ ತಂಡದ (Indian Cricket Team) ಖ್ಯಾತ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ (Ravichandran Ashwin) ವಿಶ್ವಕಪ್‌ ಬೆನ್ನಲ್ಲೇ ಕ್ರಿಕೆಟ್‌ ನಿವೃತ್ತಿ ಘೋಷಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದ್ದಾರೆ.

ಬಿಸಿಸಿಐ ಈ ಬಾರಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಆಯೋಜನೆಯನ್ನು ಮಾಡಿದೆ. ರೋಹಿತ್‌ ಶರ್ಮಾ (Rohit Sharma) ನೇತೃತ್ವದಲ್ಲಿ ಭಾರತ ತಂಡ ಈಗಾಗಲೇ ವಿಶ್ವಕಪ್‌ಗೆ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಅಕ್ಟೋಬರ್ 8 ರಂದು ಭಾರತ ತಂಡ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ದ (India vs Australia) ಮೊದಲ ಪಂದ್ಯವನ್ನು ಆಡಲಿದೆ.

ICC Odi World Cup 2023 Team India Spinner Ravichandran Ashwin Retirement
Image Credit : Twitter

ವಿಶ್ವಕಪ್‌ ಆರಂಭಕ್ಕೂ ಮೊದಲೇ ಭಾರತ ತಂಡದಿಂದ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಟೀಂ ಇಂಡಿಯಾದ ಸ್ಟಾರ್‌ ಆಟಗಾರ ರವಿಚಂದ್ರನ್‌ ಅಶ್ಚಿನ್‌ ಈ ಬಾರಿಯ ವಿಶ್ವಕಪ್‌ನಲ್ಲಿ ಭಾಗಿಯಾಗಲಿದ್ದಾರೆ. ಆದರೆ ವಿಶ್ವಕಪ್‌ ಬೆನ್ನಲ್ಲೇ ಆರ್‌.ಅಶ್ವಿನ್‌ (Ravi Chandran Ashwin Retirement ) ಕ್ರಿಕೆಟ್‌ಗೆ ನಿವೃತ್ತಿ ಘೋಷಣೆಯ ಮಾತು ಕೇಳಿಬಂದಿದೆ.‌

ಇದನ್ನೂ ಓದಿ : ವಿರುಷ್ಕಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ : 2 ನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್‌ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿ

ಬರೋಬ್ಬರಿ 12 ವರ್ಷಗಳ ಬಳಿಕ ಭಾರತ ತಂಡಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ಅವಕಾಶವೊಂದು ದೊರೆತಿದೆ. 2011ರಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸಿ ಟೀಂ ಇಂಡಿಯಾ ವಿಶ್ವಕಪ್‌ ಗೆದ್ದುಕೊಂಡಿತ್ತು. ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ತಂಡ ಪ್ರಶಸ್ತಿ ಜಯಿಸಿದ್ದು, ಇಂದು ರೋಹಿತ್‌ ಶರ್ಮಾ ಟೀಂ ಇಂಡಿಯಾದ ನಾಯಕರಾಗಿದ್ದಾರೆ.

ರವಿಚಂದ್ರನ್ ಅಶ್ವಿನ್ ನಿವೃತ್ತಿ (R Ashwin Retirement):

ವಿಶ್ವಕಪ್‌ ಆರಂಭಕ್ಕೂ ಮೊದಲೇ ಭಾರತ ತಂಡ ಇಂಗ್ಲೆಂಡ್‌ ವಿರುದ್ದ ಅಭ್ಯಾಸ ಪಂದ್ಯವನ್ನು ಆಡಬೇಕಾಗಿತ್ತು. ಆದರೆ ಈ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಅಭ್ಯಾಸ ಪಂದ್ಯಕ್ಕೂ ಮೊದಲು ಸಂದರ್ಶನ ನೀಡಿದ್ದ ರವಿಚಂದ್ರನ್‌ ಅಶ್ಚಿನ್‌ ಕ್ರಿಕೆಟ್‌ ಭವಿಷ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ICC Odi World Cup 2023 Team India Spinner Ravichandran Ashwin Retirement
Image Credit : DK/Twitter

ಮಾಜಿ ಕ್ರಿಕೆಟಿಗ ದಿನೇಶ್‌ ಕಾರ್ತಿಕ್‌ ಅವರ ಜೊತೆಗೆ ಮಾತನಾಡಿದ ರವಿಚಂದ್ರನ್‌ ಅಶ್ವಿನ್‌, ನಾನು 2023 ರ ವಿಶ್ವಕಪ್‌ನಲ್ಲಿ ಆಡುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ನನ್ನ ಜೀವನವು ಹಲವು ಆಶ್ಚರ್ಯಗಳಿಂದ ತುಂಬಿದೆ. ಟೀಮ್ ಮ್ಯಾನೇಜ್ ಮೆಂಟ್ ನನ್ನ ಮೇಲೆ ವಿಶ್ವಾಸ ತೋರಿದ್ದಕ್ಕೆ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ : ಶುಭಮನ್‌ ಗಿಲ್‌ ಆಕರ್ಷಕ ಅರ್ಧ ಶತಕ : ಕೊನೆಗೂ ಈಡೇರಿತು ಗಿಲ್‌ ಕನಸು

ಇದು ನನ್ನ ಕೊನೆಯ ವಿಶ್ವಕಪ್‌. ಈ ಟೂರ್ನಮೆಂಟ್‌ನಲ್ಲಿ ಒತ್ತಡವನ್ನು ಎದುರಿಸುವುದು ಅತ್ಯಂತ ಪ್ರಮುಖವಾದುದು. ಭಾರತಕ್ಕೆ ಇದು ನನ್ನ ಕೊನೆಯ ವಿಶ್ವಕಪ್‌ ಆಗಿರಬಹುದು. ಈ ಪಂದ್ಯಾವಳಿಯನ್ನು ನಾನು ಆನಂದಿಸುವುದು ಮುಖ್ಯವಾಗಿದೆ ಎಂದು ಹೇಳುವ ಮೂಲಕ ವಿಶ್ವಕಪ್‌ ಬೆನ್ನಲ್ಲೇ ತಮ್ಮ ನಿವೃತ್ತಿಯ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.

ರವಿಚಂದ್ರನ್‌ ಅಶ್ವಿನ್‌ ಸಾಧನೆ : 

ರವಿಚಂದ್ರನ್‌ ಅಶ್ವಿನ್‌ ಇದುವರೆಗೆ 94 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು3185 ರನ್‌ ಗಳಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 124ರನ್‌ ವೈಯಕ್ತಿಕ ಸಾಧನೆಯನ್ನು ಮಾಡಿದ್ದಾರೆ. ಅಲ್ಲದೇ 489 ವಿಕೆಟ್‌ ಕಬಳಿಸುವ ಮೂಲಕ ಭಾರತದ ಮಹಾನ್‌ ಸಾಧಕರ ಸಾಲಿನಲ್ಲಿ ನಿಂತಿದ್ದಾರೆ. ಇನ್ನಿಂಗ್ಸ್‌ವೊಂದರಲ್ಲಿ ಗರಿಷ್ಟ 7 ವಿಕೆಟ್‌ ಪಡೆದುಕೊಂಡಿದ್ದಾರೆ.

ICC Odi World Cup 2023 Team India Spinner Ravichandran Ashwin Retirement
image Credit : twitter

ಇನ್ನು 115 ಏಕದಿನ ಪಂದ್ಯಗಳನ್ನು ಆಡಿದ್ದು, 707 ರನ್‌ ಗಳಿಸಿದ್ದಾರೆ. 65 ರನ್‌ ಪಂದ್ಯವೊಂದರ ಅತೀ ಹೆಚ್ಚು ವೈಯಕ್ತಿಕ ರನ್‌ ಆಗಿದೆ. ಇನ್ನು 155 ವಿಕೆಟ್‌ ಪಡೆದಿದ್ದಾರೆ. 25 ರನ್‌ ನೀಡಿ 4 ವಿಕೆಟ್‌ ಪಡೆದಿರುವುದು ಗರಿಷ್ಠ ಸಾಧನೆಯಾಗಿದೆ.

ಟಿ೨೦ ಪಂದ್ಯಾವಳಿಯಲ್ಲಿಯೂ ರವಿಚಂದ್ರನ್‌ ಅತ್ಯುತ್ತಮ ಸಾಧನೆಯನ್ನು ಮಾಡಿದ್ದಾರೆ. ಒಟ್ಟು 65 ಪಂದ್ಯಗಳನ್ನು ಆಡಿರುವ ಅಶ್ವಿನ್‌ 184 ರನ್‌ ಗಳಿಸಿದ್ದಾರೆ. ಆದರೆ 72 ವಿಕೆಟ್‌ ಕಬಳಿಸಿದ್ದಾರೆ. ಅದ್ರಲ್ಲೂ ಪಂದ್ಯವೊಂದರಲ್ಲಿ 8 ರನ್‌ ನೀಡಿ 4 ವಿಕೆಟ್‌ ಪಡೆದ ದಾಖಲೆ ಇವರ ಹೆಸರಿನಲ್ಲಿದೆ.

ಇನ್ನು ಐಪಿಎಲ್‌ ಪಂದ್ಯಾವಳಿಯಲ್ಲಿಯೂ ಅಶ್ವಿನ್‌ ಹೆಚ್ಚು ಬೇಡಿಕೆಯ ಆಟಗಾರ ಎನಿಸಿಕೊಂಡಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಅತೀ ಹೆಚ್ಚು ಬಾರಿ ಪ್ರತಿನಿಧಿಸಿದ್ದಾರೆ. ಒಟ್ಟು 197 ಐಪಿಎಲ್‌ ಪಂದ್ಯಗಳನ್ನು ಆಡಿದ್ದು ಈ ಪೂಕಿ 714 ರನ್‌ ಬಾರಿಸಿದ್ದಾರೆ. ಅಲ್ಲದೇ 171 ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ.

ICC Odi World Cup 2023 Team India Spinner Ravichandran Ashwin Retirement

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular