Virat Kohli and Rohit Sharma : ಬಾರ್ಬೆಡೋಸ್: ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಮತ್ತು ನಾಯಕ ರೋಹಿತ್ ಶರ್ಮಾ (Rohit Sharma) ಶನಿವಾರ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಕಟ್ಟ ಕಡೆಯ ಟಿ20 ಪಂದ್ಯವನ್ನಾಡಲಿದ್ದಾರೆ. ನಾಳೆ (ಶನಿವಾರ) ಬಾರ್ಬೆಡೋಸ್’ನ ಕೆನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ (ICC t20 World Cup final 2024) ಪಂದ್ಯವೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪಾಲಿಗೆ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕೊನೆಯ ಟಿ20 ಪಂದ್ಯವಾಗಲಿದೆ.

ಶನಿವಾರ ರಾತ್ರಿ 8 ಗಂಟೆಗೆ ಆರಂಭವಾಗಲಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ (India Vs South Africa final) ಭಾರತ 3ನೇ ಬಾರಿ ಟಿ20 ವಿಶ್ವಕಪ್’ನಲ್ಲಿ ಫೈನಲ್ ಪ್ರವೇಶಿಸಿದ್ದರೆ, ದಕ್ಷಿಣ ಆಫ್ರಿಕಾ ತನ್ನ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ವಿಶ್ವಕಪ್ ಫೈನಲ್ ತಲುಪಿದೆ. ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕನಾಗಿ ಆಡುತ್ತಿರುವ ವಿರಾಟ್ ಕೊಹ್ಲಿ ದಯನೀಯ ವೈಫಲ್ಯ ಎದುರಿಸಿದ್ದಾರೆ. ಆಡಿರುವ ಏಳು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕೇವಲ 75 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೇವಲ 9 ರನ್ ಗಳಿಸಿ ಔಟಾಗಿದ್ದರು. ಈ ವಿಶ್ವಕಪ್’ನಲ್ಲಿ ನಿರಂತರ ವೈಫಲ್ಯ ಎದುರಿಸಿರುವ ವಿರಾಟ್ ಕೊಹ್ಲಿ ಶನಿವಾರ ನಡೆಯುವ ಫೈನಲ್ ಪಂದ್ಯದಲ್ಲಿ ಮಿಂಚುವರೇ ಎಂಬುದು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ : India vs England : 10 ವರ್ಷಗಳ ನಂತರ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ಭಾರತ
ಟಿ20 ವಿಶ್ವಕಪ್-2024: ವಿರಾಟ್ ಕೊಹ್ಲಿ ಸಾಧನೆ
ಪಂದ್ಯ: 07
ಎಸೆತ: 75
ರನ್: 75
ಸರಾಸರಿ: 10.71
ಸ್ಟ್ರೈಕ್’ರೇಟ್: 100
ಬೌಂಡರಿ: 02
ಸಿಕ್ಸರ್: 05
ಇದನ್ನೂ ಓದಿ :Women’s Test: ಹರಿಣ ಬೇಟೆಗೆ ರೆಡಿಯಾದ ಭಾರತದ ವನಿತೆಯರು, ಮಿಂಚುತ್ತಾಳಾ ಮೈಸೂರು ಹುಡುಗಿ ?
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ನಾಳೆಯೇ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವಾಡಲಿದ್ದಾರೆ. ಪ್ರಸಕ್ತ ವಿಶ್ವಕಪ್’ನಲ್ಲಿ ಅಮೋಘ ಆಟ ಪ್ರದರ್ಶಿಸುತ್ತಿರುವ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಸೂಪರ್-8 ಪಂದ್ಯದಲ್ಲಿ ಸಿಡಿಲಬ್ಬರದ 92 ರನ್ ಗಳಿಸಿದ್ದರೆ, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸ್ಫೋಟಕ 57 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಟಿ20 ವಿಶ್ವಕಪ್’ನಲ್ಲಿ ರೋಹಿತ್ ಶರ್ನಾ ಆಡಿರುವ ಏಳು ಪಂದ್ಯಗಳಿಂದ 248 ರನ್ ಕಲೆ ಹಾಕಿದ್ದಾರೆ.

ಟಿ20 ವಿಶ್ವಕಪ್-2024: ರೋಹಿತ್ ಶರ್ಮಾ ಸಾಧನೆ
ಪಂದ್ಯ: 07
ಎಸೆತ: 159
ರನ್: 248
ಸರಾಸರಿ: 41.33
ಸ್ಟ್ರೈಕ್’ರೇಟ್: 155.97
ಬೌಂಡರಿ: 22
ಸಿಕ್ಸರ್: 15
ಇದನ್ನೂ ಓದಿ : India Vs Zimbabwe Series : ಜಿಂಬಾಬ್ವೆ ವಿರುದ್ಧದ ಟಿ20 ಸರಣಿ : ಭಾರತ ತಂಡಕ್ಕೆ ಗಿಲ್ ನಾಯಕ
ICC World Cup 2024 Last T20I for Virat Kohli and Rohit Sharma tomorrow