IND VS SL 3rd ODI : ಇಂದು ಅಂತಿಮ ಏಕದಿನ ಪಂದ್ಯ : ಕನ್ನಡಿಗ ಪಡಿಕ್ಕಲ್‌ಗೆ ಸಿಗುತ್ತಾ ಅವಕಾಶ ?

ಕೊಲಂಬೋ : ಶ್ರೀಲಂಕಾ ವಿರುದ್ದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯ ಇಂದು ನಡೆಯಲಿದೆ. ಪ್ರೇಮದಾಸ್‌ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಕ್ಕೆ ಟೀಂ ಇಂಡಿಯಾ ಹಲವು ಬದಲಾವಣೆಗೆ ಮಾಡಲು ಮುಂದಾಗಿದ್ದು, ಕನ್ನಡಿಗ ಪಡಿಕ್ಕಲ್‌ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಮೂರು ಪಂದ್ಯಗಳ ಏಕದಿನ ಸರಣಿಯನ್ನು ತನ್ನ ಕೈವಶ ಮಾಡಿಕೊಂಡಿರುವ ಶಿಖರ್‌ ಧವನ್‌ ಸಾರಥ್ಯದ ಟೀಂ ಇಂಡಿಯಾ ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಜಯದ ಕನಸು ಕಾಣುತ್ತಿದೆ. ಆದರೆ ಟೀಂ ಇಂಡಿಯಾದಲ್ಲಿ ಪ್ರಮುಖವಾಗಿ ಎರಡು ಬದಲಾವಣೆಯನ್ನು ನಿರೀಕ್ಷಿಸಲಾಗುತ್ತಿದೆ. ಆರಂಭಿಕ ಪ್ರಥ್ವಿ ಶಾ ಎರಡನೇ ಪಂದ್ಯದ ವೇಳೆಯಲ್ಲಿ ಗಾಯ ಮಾಡಿಕೊಂಡಿದ್ದು, ಅವರಿಗೆ ಅಂತಿಮ ಪಂದ್ಯಕ್ಕೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.

ಒಂದೊಮ್ಮೆ ಪ್ರಥ್ವಿ ಶಾ ಆಡುವ ಬಳಗದಿಂದ ಹೊರಗೆ ಉಳಿದ್ರೆ ಆಗ ಕನ್ನಡಿಗ ದೇವದತ್ತ ಪಡಿಕ್ಕಲ್‌ಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಪಡಿಕ್ಕಲ್‌ ಏಕದಿನ ತಂಡಕ್ಕೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ. ಈಗಾಗಲೇ ಐಪಿಎಲ್‌ ಹಾಗೂ ದೇಶೀಯ ಪಂದ್ಯಗಳಲ್ಲಿ ಮಿಂಚು ಹರಿಸಿರುವ ದೇವದತ್ತ ಪಡಿಕ್ಕಲ್‌ ಏಕದಿನ ಪಂದ್ಯದಲ್ಲಿ ಆಡುವುದನ್ನು ಕನ್ನಡಿಗರು ಕಾಯುತ್ತಿದ್ದಾರೆ.

ಇನ್ನೊಂದೆಡೆಯಲ್ಲಿ ಗಾಯದ ಸಮಸ್ಯೆಯ ಹಿನ್ನೆಲೆಯಲ್ಲಿ ಮೊದಲೆರಡು ಪಂದ್ಯಗಳನ್ನು ಮಿಸ್‌ ಮಾಡಿಕೊಂಡಿದ್ದ ಸಂಜು ಸ್ಯಾಮ್ಸನ್‌ ಮೂರನೇ ಪಂದ್ಯದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಇಶಾಕ್‌ ಕಿಶನ್‌ ಮೊದಲ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಆದರೆ ಹಾರ್ದಿಕ್‌ ಪಾಂಡ್ಯ ಹಾಗೂ ಮನೀಷ್‌ ಪಾಂಡೆ ನಿರೀಕ್ಷಿತ ಆಟದ ಪ್ರದರ್ಶನ ನೀಡಿಲ್ಲ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್‌ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಆದರೆ ಬೌಲಿಂಗ್‌ ವಿಭಾಗದಲ್ಲಿ ಕುಲದೀಪ್‌ ಯಾದವ್‌ ಬದಲು ವರುಣ್‌ ಚಕ್ರವರ್ತಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಯಾದವ್‌ ಏಕದಿನ ಸರಣಿಯಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಆದರೆ ದೀಪಕ್‌ ಚಹರ್‌, ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಹಲ್‌ ಸ್ಥಾನ ಭದ್ರವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌ ಈಗಾಗಲೇ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ರೆ, ಕೃನಾಲ್‌ ಪಾಂಡ್ಯ ಆಡುವ ಬಳಗದಲ್ಲಿ ಸ್ಥಾನ ಪಡೆಯೋದು ಖಚಿತ.

ಟೀಂ ಇಂಡಿಯಾ ಸಂಭಾವ್ಯ ತಂಡ : ಶಿಖರ್‌ ಧವನ್‌ ( ನಾಯಕ) ಪ್ರಥ್ವಿ ಶಾ/ದೇವದತ್ತ ಪಡಿಕ್ಕಲ್‌, ಇಶಾನ್‌ ಕಿಶನ್‌, ಮನೀಶ್‌ ಪಾಂಡೆ/ಸಂಜು ಸ್ಯಾಮ್ಸನ್‌ (ವಿ.ಕೀ), ಸೂರ್ಯ ಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ದೀಪಕ್‌ ಚಹರ್‌, ಯಜುವೇಂದ್ರ ಚಹಲ್‌, ಕುಲದೀಪ್‌ ಯಾದವ್‌/ ವರುಣ್‌ ಚಕ್ರವರ್ತಿ.

ಪಿಚ್‌ ರಿಪೋರ್ಟ್‌ : ಪಿಚ್‌ ಬ್ಯಾಟಿಂಗ್‌ಗೆ ಹೆಚ್ಚು ಸಹಕಾರಿಯಾಗಿದ್ದು, ವೇಗಿಗಳಿಗಿಂತ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗುವ ಸಾಧ್ಯತೆಯಿದೆ. ಬ್ಯಾಟಿಂಗ್‌ಗೆ ಸಹಕಾರಿಯಾಗಿದ್ದು ಶೇ.೬೦ ರಷ್ಟು ಪಂದ್ಯಗಳು ಚೇಸಿಂಗ್‌ ಮಾಡಿದ ತಂಡ ಗೆಲುವು ಕಂಡಿವೆ.

Comments are closed.