IND vs SL series ಭಾರತ ತಂಡ ಪ್ರಕಟ : ವಿರಾಟ್ ಕೊಹ್ಲಿ, ರಾಹುಲ್, ರಹಾನೆ, ಪೂಜಾರ, ಪಂತ್ ಗೆ ಕೋಕ್‌

ಮುಂಬೈ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶನಿವಾರದಂದು ಶ್ರೀಲಂಕಾ ವಿರುದ್ಧದ (IND vs SL series )ಮುಂಬರುವ T20I ಮತ್ತು ಟೆಸ್ಟ್ ಸರಣಿಗೆ ಭಾರತದ 18 ಸದಸ್ಯರ ತಂಡವನ್ನು ಪ್ರಕಟಿಸಿದೆ. ಏಕದಿನ ಕ್ರಿಕೆಟ್‌ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನೇ ಟೆಸ್ಟ್ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಇನ್ನು ಜಸ್ಪ್ರೀತ್ ಬುಮ್ರಾ ಟೆಸ್ಟ್‌ ಹಾಗೂ T20 ತಂಡಕ್ಕೆ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ. ಆದರೆ ಮಾಜಿ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ಕೆಎಲ್ ರಾಹುಲ್, ಅಜಿಂಕ್ಯಾ ರಹಾನೆ, ಚೇತೇಶ್ವರ ಪೂಜಾರ ಹಾಗೂ ವಿಕೆಟ್‌ ಕೀಪರ್‌ ರಿಷಬ್‌ ಪಂತ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.

ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಭಾರತ ತಂಡವನ್ನು ಆಯ್ಕೆ ಮಾಡಿದೆ. ವಿರಾಟ್‌ ಕೊಹ್ಲಿ ಹಾಗೂ ರಿಷಬ್‌ ಪಂತ್‌ ವೆಸ್ಟ್‌ ಇಂಡಿಸ್‌ ವಿರುದ್ದದ ಮೂರನೇ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಪಂದ್ಯಕ್ಕೂ ಮುನ್ನವೇ ಈ ಇಬ್ಬರು ಆಟಗಾರರು ತಂಡವನ್ನು ತೊರೆದಿದ್ದಾರೆ.

ವಿರಾಟ್‌ ಕೊಹ್ಲಿ ಹಾಗೂ ರಿಷಬ್‌ ಪಂತ್‌ ಅವರಿಗೆ ವಿಶ್ರಾಂತಿಯನ್ನು ನೀಡಲಾಗಿದ್ರೆ, ಅಜಿಂಕ್ಯಾ ರಹಾನೆ ಹಾಗೂ ಚೇತೇಶ್ವರ ಪೂಜಾರ ಅವರಿಗೆ ಕೋಕ್‌ ನೀಡಲಾಗಿದೆ. ಬಿಸಿಸಿಐ ಈಗಾಗಲೇ ಇಬ್ಬರೂ ಕೂಡ ರಣಜಿ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ರೆ ಮಾತ್ರವೇ ರಾಷ್ಟ್ರೀಯ ತಂಡದಲ್ಲಿ ಅವಕಾಶ ನೀಡಲಾಗುತ್ತದೆ ಅನ್ನುವ ಕುರಿತು ಪರೋಕ್ಷ ಸೂಚನೆಯನ್ನು ನೀಡಿದೆ. ಇನ್ನು ಕನ್ನಡಿಗ ಕೆ.ಎಲ್.ರಾಹುಲ್‌ ಗಾಯಗೊಂಡು ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ಇದೀಗ ಆಲ್‌ರೌಂಡರ್‌ ರವೀಂದ್ರಾ ಜಡೇಜಾ ತಂಡಕ್ಕೆ ಮರಳಿದ್ರೆ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ ಪಂತ್‌ ಬದಲಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಶ್ರೀಲಂಕಾ ಟೆಸ್ಟ್ ತಂಡಕ್ಕೆ ಭಾರತ ತಂಡ:

ಟಿ20 ತಂಡ: ರೋಹಿತ್ ಶರ್ಮಾ (ನಾಯಕ ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ (ಉಪನಾಯಕ ), ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್. ಸಿರಾಜ್, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅವೇಶ್ ಖಾನ್

ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ ), ಮಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭಮನ್ ಗಿಲ್, ರಿಷಭ್ ಪಂತ್, ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್ (ಫಿಟ್ನೆಸ್‌ ಟೆಸ್ಟ್‌ಗೆ ಒಳಪಡಬೇಕು), ರವೀಂದ್ರ ಜಡೇಜಾ, ಜಯಂತ್ ಯಾದವ್, ಕುಲ್ದೀಪ್ ಯಾದವ್, ಕುಲ್ದೀಪ್ ಯಾದವ್ ಜಸ್ಪ್ರೀತ್ ಬುಮ್ರಾ (ಉಪನಾಯಕ ), ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಸೌರಭ್ ಕುಮಾರ್

ವೇಳಾಪಟ್ಟಿ:

T20 ಪಂದ್ಯಗಳು :
ಭಾರತ vs ಶ್ರೀಲಂಕಾ 1 ನೇ T20: ಫೆಬ್ರವರಿ 24 ಲಕ್ನೋ
ಭಾರತ vs ಶ್ರೀಲಂಕಾ 2 ನೇ T20: ಫೆಬ್ರವರಿ 26 ಧರ್ಮಶಾಲಾ
ಭಾರತ vs ಶ್ರೀಲಂಕಾ 3 ನೇ T20 : ಫೆಬ್ರವರಿ 27 ಧರ್ಮಶಾಲಾ

ಟೆಸ್ಟ್‌ ಪಂದ್ಯಗಳು :
ಮಾರ್ಚ್ 4-8 : ಭಾರತ vs ಶ್ರೀಲಂಕಾ 1 ನೇ ಟೆಸ್ಟ್: ಮೊಹಾಲಿ

ಮಾರ್ಚ್ 12-16 : ಭಾರತ vs ಶ್ರೀಲಂಕಾ 2 ನೇ ಟೆಸ್ಟ್ ( ಹಗಲು ರಾತ್ರಿ) ಬೆಂಗಳೂರು

ಇದನ್ನೂ ಓದಿ : ಕನ್ನಡಿಗ ಆಟಗಾರನನ್ನು ಮಡಿಲಿಗೆ ಹಾಕಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು: ಯಾರೀ ಆಟಗಾರ? ಇವರ ಕೌಶಲವೇನು?

ಇದನ್ನೂ ಓದಿ : ಐಪಿಎಲ್‌ ಮೆಗಾ ಹರಾಜು : ಯಾವ ಆಟಗಾರರು ಯಾವ ತಂಡಕ್ಕೆ ; ಇಲ್ಲಿದೆ ಎಲ್ಲಾ 10 ತಂಡಗಳ ಪೂರ್ಣ ವಿವರ

(IND vs SL series team announced, Virat Kohli, KL Rahul, Rahane, Pujara, Pant dropped)

Comments are closed.