India A Squad: ಹುಬ್ಬಳ್ಳಿಯಲ್ಲಿ ಭಾರತ ‘ಎ‘ Vs ನ್ಯೂಜಿಲೆಂಡ್ ‘ಎ‘ ಟೆಸ್ಟ್ ಮ್ಯಾಚ್; ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಸ್ಥಾನ

ಬೆಂಗಳೂರು: (India A Squad) ನ್ಯೂಜಿಲೆಂಡ್ ‘ಎ‘ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ‘ಎ‘ ತಂಡವನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದಾರೆ. ಭಾರತ ‘ಎ‘ ತಂಡವನ್ನು ಗುಜರಾತ್‘ನ ಆರಂಭಿಕ ಆಟಗಾರ ಪ್ರಿಯಾಂಕ್ ಪಾಂಚಾಲ್ ಮುನ್ನಡೆಸಲಿದ್ದಾರೆ. ತಂಡದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ರಜತ್ ಪಾಟಿದಾರ್ ಕೂಡ ಸ್ಥಾನ ಪಡೆದಿದ್ದಾರೆ.

ಪ್ರವಾಸಿ ನ್ಯೂಜಿಲೆಂಡ್ ‘ಎ‘ ತಂಡದ ವಿರುದ್ಧ ಭಾರತ ‘ಎ‘ ನಾಲ್ಕು ದಿನಗಳ 3 ಟೆಸ್ಟ್ ಪಂದ್ಯಗಳನ್ನಾಡಲಿದೆ. ಮೊದಲ ಮತ್ತು 3ನೇ ಟೆಸ್ಟ್ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಿದ್ರೆ, 2ನೇ ಟೆಸ್ಟ್ ಪಂದ್ಯ ಹುಬ್ಬಳ್ಳಿಯ KSCA ರಾಜನಗರ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೆಸ್ಟ್ ಸರಣಿಯ ನಂತರ ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿವೆ.

ನ್ಯೂಜಿಲೆಂಡ್ ‘ಎ‘ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ‘ಎ‘ ತಂಡ
ಪ್ರಿಯಾಂಕ್ ಪಾಂಚಾಲ್ (ನಾಯಕ), ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ತಿಲಕ್ ವರ್ಮಾ, ಕೆ.ಎಲ್ ಭರತ್ (ವಿಕೆಟ್ ಕೀಪರ್), ಉಪೇಂದ್ರ ಯಾದವ್ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಸೌರಭ್ ಕುಮಾರ್, ರಾಹುಲ್ ಚಹರ್, ಪ್ರಸಿದ್ಧ್ ಕೃಷ್ಣ, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್, ಯಶ್ ದಯಾಳ್, ಅರ್ಝಾನ್ ನಾಗಸ್ವಾಲಾ.

ಭಾರತ ‘ಎ‘ Vs ನ್ಯೂಜಿಲೆಂಡ್ ‘ಎ‘ಟೆಸ್ಟ್ ಸರಣಿಯ ವೇಳಾಪಟ್ಟಿ
ಪ್ರಥಮ ಟೆಸ್ಟ್: ಸೆಪ್ಟೆಂಬರ್ 1-4 (ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)
ದ್ವಿತೀಯ ಟೆಸ್ಟ್: ಸೆಪ್ಟೆಂಬರ್ 8-11 (KSCA ರಾಜನಗರ ಕ್ರೀಡಾಂಗಣ, ಹುಬ್ಬಳ್ಳಿ)
ತೃತೀಯ ಟೆಸ್ಟ್: ಸೆಪ್ಟೆಂಬರ್ 15-18 (ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು)

ಇದನ್ನೂ ಓದಿ : Rohit Sharma Batting : 7 ಇನ್ನಿಂಗ್ಸ್, 2 ಡಕ್ 4 ಸಿಂಗಲ್ ಡಿಜಿಟ್ ; ಪಾಕ್ ವಿರುದ್ಧ ಮುಗ್ಗರಿಸೋದ್ಯಾಕೆ ಹಿಟ್‌ಮ್ಯಾನ್ ?

ಇದನ್ನೂ ಓದಿ : Rishabh Pant Sister Sakshi Pant : ಕ್ರಿಕೆಟರ್ ನಿತೀಶ್ ರಾಣಾ ಜೊತೆ ಲಂಡನ್‌ನಲ್ಲಿ ಕಾಣಿಸಿಕೊಂಡ ರಿಷಭ್ ಪಂತ್ ತಂಗಿ

India A Vs New Zealand A Test Match at Hubli India A Squad place for Parshid Krishna Entry Team india

Comments are closed.