ಅಲ್ಪ ಮೊತ್ತಕ್ಕೆ ಕುಸಿದ ಭಾರತ : ಇಂಗ್ಲೆಂಡ್ 3ನೇ ವಿಕೆಟ್ ಪತನ, 2ನೇ ಇನ್ನಿಂಗ್ಸ್ ನಲ್ಲೂ ಸಂಕಷ್ಟಕ್ಕೆ ಸಿಲುಕಿದ ಆಂಗ್ಲರು

ಅಹಮದಾಬಾದ್ : ಇಂಗ್ಲೆಂಡ್ ವಿರುದ್ದ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿರುವ ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಗೆ ಆರಂಭಿಕ ಆಘಾತ ನೀಡಿದೆ. ಅಕ್ಷರ್ ಪಟೇಲ್ ಸ್ಪೀನ್ ಮೋಡಿಗೆ ಇಂಗ್ಲೆಂಡ್ 3 ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 112 ರನ್ ಗಳಿಗೆ ಕಟ್ಟಿ ಹಾಕಿದ್ದ ಭಾರತ, ಬ್ಯಾಟಿಂಗ್ ನಲ್ಲಿ ಮುಗ್ಗರಿಸಿದೆ. ಕೇವಲ 145 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿರುವ ಭಾರತ ಕಡಿಮೆ ಮೊತ್ತಕ್ಕೆ ಆಲೌಟಾಗಿತ್ತು. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭದಲ್ಲಿಯೇ ಭಾರತದ ಸ್ಪೀನ್ನರ್ ಅಕ್ಷರ್ ಪಟೇಲ್ ಜಾಕ್ ಕ್ರಾವ್ಲಿ, ಜಾನಿ ಬ್ರೆಸ್ಟೋ ಅವರನ್ನು ಸೊನ್ನೆಗೆ ಔಟ್ ಮಾಡಿದ್ರೆ 7 ರನ್ ಗೆ ಡೊಮಿನಿಕ್ ಸಿಬ್ಲಿ ಅವರನ್ನು ಔಟ್ ಮಾಡುವ ಮೂಲಕ ಇಂಗ್ಲೆಂಡ್ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಇಂಗ್ಲೆಂಡ್ ತಂಡದ ಪರ ನಾಯಕ ಜಾಯ್ ರೂಟ್ ಹಾಗೂ ಬೆನ್ ಸ್ಟೋಕ್ ಬ್ಯಾಟಿಂಗ್ ನಡೆಸುತ್ತಿದ್ದಾರೆ. 16 ರನ್ ಗಳಿಸಿರುವ ಇಂಗ್ಲೆಂಡ್ ತಂಡ ಮುನ್ನಡೆ ಸಾಧಿಸಬೇಕಾದ್ರೆ ಇನ್ನೂ 17 ರನ್ ಗಳಿಸಬೇಕಾಗಿದೆ. ಮೊದಲ ಇನ್ನಿಂಗ್ಸ್ ನಂತೆಯೇ ಭಾರತದ ಸ್ಪೀನ್ ಜಾದೂಗಾರರಾರ ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಮೋಡಿ ಮಾಡಿದ್ರೆ ಭಾರತ ಗೆಲುವಿನ ನಗೆ ಬೀರಲಿದೆ.

Comments are closed.