Neeraj Chopra: ನೀರಜ್ ಚೋಪ್ರಾ ಜಾವೆಲಿನ್ ಗೆ ಚಿನ್ನದ ಬೆಲೆ: 10ಕೋಟಿ ದಾಟಿ ಸಾಗಿದ ಬಿಡ್

ಭಾರತದ ಒಲಿಂಪಿಕ್ಸ್ ಮತ್ತು  ಪ್ಯಾರಾಒಲಿಂಪಿಕ್ಸ್ ತಾರೆಯರು ಇತ್ತೀಚಿಗೆ  ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೆ  ತಮ್ಮ ಕ್ರೀಡೆಗೆ ಸಂಬಂಧಿಸಿದ ಒಂದೊಂದು ವಸ್ತುವನ್ನು ಪ್ರಧಾನಿಗೆ ಕೊಡುಗೆಯಾಗಿ ನೀಡಿದ್ದರು. ಕ್ರೀಡಾಪಟುಗಳು ನೀಡಿದ ಕೊಡುಗೆ ಹರಾಜಿಗೆ ನಿರ್ಧರಿಸಿರುವ ಕೇಂದ್ರ ಸರ್ಕಾರಕ್ಕೆ ನೀರಜ್ ಚೋಫ್ರಾ ನೀಡಿದ ಜಾವೆಲಿನ್  ಚಿನ್ನದ ಬೆಲೆ ತಂದುಕೊಟ್ಟಿದೆ.

 ಟೋಕಿಯೋದಲ್ಲಿ ನಡೆದ  ಒಲಿಂಪಿಕ್ಸ್ ಮತ್ತು ಪ್ಯಾರಾಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ ಪ್ರಧಾನಿ ಔತಣಕೂಟದಲ್ಲಿ  ಪ್ರಧಾನಿಗೆ ಜಾವೆಲಿನ್ ಗಿಫ್ಟ್ ಆಗಿ ನೀಡಿದ್ದರು. ಈಗ ಕೇಂದ್ರ ಸರ್ಕಾರ ಪ್ರಧಾನಿಗೆ ಕ್ರೀಡಾಪಟುಗಳು ನೀಡಿದ ವಸ್ತುಗಳ ಹರಾಜಿಗೆ ನಿರ್ಧರಿಸಿದೆ.

ಸ್ಮರಣಿಕೆಗಳನ್ನು  ಇ-ಹರಾಜಿನ ಮೂಲಕ ಮಾರಾಟಕ್ಕಿಡಲಾಗಿದ್ದು, ಬಂದ ಹಣವನ್ನು ನಮಾಮಿ ಗಂಗೆ ಯೋಜನೆಗೆ ಬಳಸುವುದಾಗಿ ಹೇಳಿದೆ. ಹೀಗಾಗಿ ನೀರಜ್ ಚೋಫ್ರಾ ಜಾವೆಲಿನ್, ಲವ್ಲಿನಾ ಬೊರಗೋಹೈನ್ ಕೈಗವಸು,ಪಿ.ವಿ.ಸಿಂಧು ರಾಕೆಟ್ ಗಳನ್ನು ಹರಾಜಿಗಿಡಲಾಗಿದೆ.

ನಿನ್ನೆಯಿಂದ ಬಿಡ್ ಆರಂಭವಾಗಿದ್ದು, ಅಕ್ಟೋಬರ್ 7 ರ ವರೆಗೆ ಬಿಡ್ ಇರಲಿದೆ. ಸದ್ಯ ಬಿಡ್ ನಲ್ಲಿ ಲವ್ಲಿನಾ ಅವರ ಗ್ಲೌಸ್ 10 ಕೋಟಿ ಸಮೀಪದಲ್ಲಿದ್ದರೇ, ನೀರಜ್ ಚೋಫ್ರಾ ಜಾವೆಲಿನ್ 10 ಕೋಟಿ ಮೊತ್ತ ದಾಟಿ ಸಾಗಿದೆ.

ಈ ಹರಾಜಿನಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳು ಪಾಲ್ಗೊಳ್ಳಬಹುದಾಗಿದ್ದು, ತಮಗಿಷ್ಟವಾದ ವಸ್ತುವಿಗೆ ಬೆಲೆ ನೀಡಿ ಖರೀದಿಸಲು ಅವಕಾಶವಿದೆ. ಅಕ್ಟೋಬರ್ 7 ರವರೆಗೆ ನಡೆಯೋ ಹರಾಜಿನಲ್ಲಿ https://pmmementos.gov.in ವೆಬ್ ಸೈಟ್ ಮೂಲಕ ಭಾಗವಹಿಸಬಹುದಾಗಿದೆ.

Neeraj Chopra’s Javelin Gifts To PM Modi, Receive 10cr Bids

Comments are closed.