India playing 200th t20 : ಇಂದಿನಿಂದ ಭಾರತ vs ವಿಂಡೀಸ್ ಟಿ20 ಸರಣಿ, ಟೀಮ್ ಇಂಡಿಯಾಗೆ 200 ಟಿ20 ಪಂದ್ಯ

ಟ್ರಿನಿಡಾಡ್: ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಗೆದ್ದುಕೊಂಡಿರುವ ಟೀಮ್ ಇಂಡಿಯಾದ ಮುಂದಿನ (India playing 200th t20) ಗುರಿ ಟಿ20 ಸರಣಿ. ವಿಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ (India Vs West Indies t20 series) ಮೊದಲ ಪಂದ್ಯ ಇಂದು (ಗುರುವಾರ) ಟ್ರಿನಿಡಾಡ್’ನಲ್ಲಿರುವ ಬ್ರಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಭಾರತದ ಪಾಲಿಗೆ 200ನೇ ಟಿ20 ಅಂತರಾಷ್ಟ್ರೀಯ ಪಂದ್ಯವಾಗಿದೆ. ಹೀಗಾಗಿ 200ನೇ ಪಂದ್ಯವನ್ನು ಭಾರತ ತಂಡ ಸ್ಮರಣೀಯವಾಗಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಇದುವರೆಗೆ ಒಟ್ಟು 199 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ, 127 ಪಂದ್ಯಗಳನ್ನು ಗೆದ್ದಿದ್ದು, 63 ಪಂದ್ಯಗಳಲ್ಲಿ ಸೋಲು ಕಂಡಿದೆ. 4 ಪಂದ್ಯಗಳು ಟೈಗೊಂಡಿದ್ದು, ಉಳಿದ 5 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ. 2006ರಲ್ಲಿ ಮೊದಲ ಬಾರಿ ಟಿ20 ಪಂದ್ಯವಾಡಿದ್ದ ಭಾರತ, 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ನಂತರ ಭಾರತ ಒಮ್ಮೆಯೂ ಟಿ20 ವಿಶ್ವಕಪ್ ಗೆದ್ದಿಲ್ಲ.

ಟಿ20 ಕ್ರಿಕೆಟ್’ನಲ್ಲಿ ಭಾರತ ತಂಡದ ಸಾಧನೆ :

 • ಪಂದ್ಯ- 199
 • ಗೆಲುವು- 127
 • ಸೋಲು- 63
 • ಟೈ- 04
 • ನೋ ರಿಸಲ್ಟ್- 04

200ನೇ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸುತ್ತಿದ್ದು, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜ ಸಹಿತ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇದನ್ನೂ ಓದಿ : Ishan Kishan – Sanju Samson : ಸಂಜು ಸ್ಯಾಮ್ಸನ್ ವಿಶ್ವಕಪ್ ಕನಸಿಗೆ ಕೊಳ್ಳಿ ಇಟ್ಟ ಇಶಾನ್ ಕಿಶನ್

ಇದನ್ನೂ ಓದಿ : R Ashwin : ಕಮಿಟ್ಮೆಂಟ್‌ಗೆ ಮತ್ತೊಂದು ಹೆಸರೇ ಅಶ್ವಿನ್, ತಮಿಳುನಾಡು ಡಿವಿಜನ್ ಲೀಗ್’ನಲ್ಲಿ ಆಡುತ್ತಿದ್ದಾರೆ ಸ್ಪಿನ್ ಮಾಂತ್ರಿಕ

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI

 1. ಇಶಾನ್ ಕಿಶನ್ (ವಿಕೆಟ್ ಕೀಪರ್)
 2. ಶುಭಮನ್ ಗಿಲ್
 3. ಸೂರ್ಯಕುಮಾರ್ ಯಾದವ್ (ಉಪನಾಯಕ)
 4. ಸಂಜು ಸ್ಯಾಮ್ಸನ್
 5. ಹಾರ್ದಿಕ್ ಪಾಂಡ್ಯ (ನಾಯಕ)
 6. ತಿಲಕ್ ವರ್ಮಾ
 7. ಅಕ್ಷರ್ ಪಟೇಲ್
 8. ಕುಲ್ದೀಪ್ ಯಾದವ್
 9. ಮುಕೇಶ್ ಕುಮಾರ್
 10. ಅರ್ಷದೀಪ್ ಸಿಂಗ್
 11. ಉಮ್ರಾನ್ ಮಲಿಕ್ / ಆವೇಶ್ ಖಾನ್

ಭಾರತ Vs ವೆಸ್ಟ್ ಇಂಡೀಸ್ ಮೊದಲ ಟಿ20 ಪಂದ್ಯ
ಪಂದ್ಯ ಆರಂಭ: ರಾತ್ರಿ 8ಕ್ಕೆ
ಸ್ಥಳ: ಬ್ರಯಾನ್ ಲಾರಾ ಕ್ರೀಡಾಂಗಣ, ಟ್ರಿನಿಡಾಡ್
ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್
ಲೈವ್ ಸ್ಟ್ರೀಮ್: ಫ್ಯಾನ್ ಕೋಡ್/ ಜಿಯೊ ಸಿನಿಮಾ

India playing 200th t20 : India vs Windies T20 series from today, 200th T20 match for Team India

Comments are closed.