ಸಿಡ್ನಿ: (India Practice session) ಪಾಕಿಸ್ತಾನ ವಿರುದ್ಧದ ರೋಚಕ ಗೆಲುವಿನೊಂದಿಗೆ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಟೀಮ್ ಇಂಡಿಯಾ, ನೆದರ್ಲೆಂಡ್ಸ್ (India Vs netherlands) ವಿರುದ್ಧದ 2ನೇ ಪಂದ್ಯಕ್ಕೆ (India Practice session) ಸಜ್ಜಾಗುತ್ತಿದೆ.
ಭಾರತ Vs ನೆದರ್ಲೆಂಡ್ಸ್ ಪಂದ್ಯ ಗುರುವಾರ (ಅಕ್ಟೋಬರ್ 27) ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯಲಿದ್ದು, ಭಾರತ ತಂಡದ ಆಟಗಾರರು ಮಂಗಳವಾರ ಅಭ್ಯಾಸ(India Practice session) ನಡೆಸಿದ್ದಾರೆ.
ಇದನ್ನೂ ಓದಿ : Yash – Radhika :ಯಶ್ – ರಾಧಿಕಾ ನಿವಾಸದಲ್ಲಿ ಬೆಳಕಿನ ಹಬ್ಬದ ಸಂಭ್ರಮ ಬಲು ಜೋರು
ಪಾಕಿಸ್ತಾನ ವಿರುದ್ಧ ಅಜೇಯ 82 ರನ್ ಸಿಡಿಸಿ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟ ವಿರಾಟ್ ಕೊಹ್ಲಿ (Virat Kohli), ಪಾಕ್ ವಿರುದ್ಧ ವಿಫಲರಾಗಿದ್ದ ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಉಪನಾಯಕ ಕೆ.ಎಲ್ ರಾಹುಲ್ (KL Rahul) ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ಮಂಗಳವಾರ ಸುದೀರ್ಘ ಬ್ಯಾಟಿಂಗ್ ತಾಲೀಮು ನಡೆಸಿದರು.
ಇದನ್ನೂ ಓದಿ : Dhoni and Kohli : “ಧೋನಿ ಆ ಕೆಲಸ ಮಾಡಿರದಿದ್ದರೆ ನಾನು ಇಲ್ಲಿ ಇರುತ್ತಲೇ ಇರಲಿಲ್ಲ”, ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?
ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರ ಹದ್ದಿನಕಣ್ಣಿನಡಿ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸಿದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇವಲ 4 ರನ್ನಿಗೆ ಔಟಾಗಿದ್ದ ನಾಯಕ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ನೆದರ್ಲೆಂಡ್ಸ್ ವಿರುದ್ಧ ಫಾರ್ಮ್’ಗೆ ಮರಳುವ ಪಣತೊಟ್ಟಿದ್ದು, ನೆಟ್ಸ್’ನಲ್ಲಿ ಬೆವರು ಹರಿಸಿದರು.
ಮಂಗಳವಾರದ ಅಭ್ಯಾಸಕ್ಕೆ ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ವೇಗದ ಬೌಲರ್’ಗಳದಾ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಚಕ್ಕರ್ ಹಾಕಿದ್ದರು. ಭಾರತ ತಂಡದ ಎಲ್ಲಾ ಆಟಗಾರರು ಬುಧವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ಅಭ್ಯಾಸ ನಡೆಸಲಿದ್ದಾರೆ.
ಟಿ20 ವಿಶ್ವಕಪ್ ಸೂಪರ್-12 ಹಂತದಲ್ಲಿ ಭಾರತ ತಂಡ ತನ್ನ 2ನೇ ಲೀಗ್ ಪಂದ್ಯವನ್ನು ನೆದರ್ಲೆಂಡ್ಸ್ ವಿರುದ್ಧ ಆಡಲಿದ್ದು, ಈ ಪಂದ್ಯ ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ (Sydney Cricket Ground) ಭಾರತೀಯ ಕಾಲಮಾನ ಮಧ್ಯಾಹ್ನ 12.30ಕ್ಕೆ ಆರಂಭವಾಗಲಿದೆ.
ಟಿ2 ವಿಶ್ವಕಪ್ 2022: ಭಾರತ ತಂಡದ ಮುಂದಿನ ಪಂದ್ಯಗಳ ವೇಳಾಪಟ್ಟಿ
ಅಕ್ಟೋಬರ್ 27: ಭಾರತ Vs ನೆದರ್ಲೆಂಡ್ಸ್ (ಸಿಡ್ನಿ, 12.30 pm)
ಅಕ್ಟೋಬರ್ 30: ಭಾರತ Vs ದಕ್ಷಿಣ ಆಫ್ರಿಕಾ (ಪರ್ತ್, 4.30 pm)
ನವೆಂಬರ್ 02: ಭಾರತ Vs ಬಾಂಗ್ಲಾದೇಶ (ಅಡಿಲೇಡ್, 1.30 pm)
ನವೆಂಬರ್ 06: ಭಾರತ Vs ಜಿಂಬಾಬ್ವೆ (ಮೆಲ್ಬೋರ್ನ್, 1.30 pm)