IND vs SL : ಕೊನೆಗೂ ಗೆದ್ದು ಬೀಗಿದ ಶ್ರೀಲಂಕಾ, ಸರಣಿ ಜಯಿಸಿದ ಭಾರತ

ಕೋಲಂಬೋ : ಶ್ರೀಲಂಕಾ ಹಾಗೂ ಭಾರತ ನಡುವಿನ ಏಕದಿನ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಗೆದ್ದು ಬೀಗಿದೆ. ಈ ಮೂಲಕ ವೈಟ್‌ವಾಶ್‌ನಿಂದ ತಪ್ಪಿಸಿಕೊಂಡಿದೆ. ಆದರೆ ಭಾರತ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಭಾರತ ಪರ ಆರಂಭಿಕರಾಗಿ ಕಣಕ್ಕಿಳಿದ ಧವನ್ 13ರನ್(11 ಎಸೆತ, 3 ಬೌಂಡರಿ) ಸಿಡಿಸಿ ನಿರಾಸೆ ಮೂಡಿಸಿದರು. ಬಳಿಕ ಬಂದ ಸಂಜು ಸ್ಯಾಮ್ಸನ್, ಪೃಥ್ವಿ ಶಾ ಜೊತೆ 80ರನ್ ಜೊತೆಯಾಟವಾಡಿದ್ರು.

ಆದರೆ ಪ್ರಥ್ವಿ ಶಾ 49ರನ್( 49 ಎಸೆತ, 8ಬೌಂಡರಿ) ಸಿಡಿಸಿ ಔಟ್ ಅದರು. ಉತ್ತಮವಾಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ 46ರನ್(46 ಎಸೆತ, 5 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಒಪ್ಪಿಸಿದರು. ಕೆಲ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 40ರನ್( 37 ಎಸೆತ, 7ಬೌಂಡರಿ) ಗಳಿಸಿದ್ದನ್ನು ಬಿಟ್ರೆ ಉಳಿದ ಯಾವ ಆಟಗಾರರು ನಿರೀಕ್ಷಿತ ಆಟದ ಪ್ರದರ್ಶನ ನೀಡಲಿಲ್ಲ. ಭಾರತ ತಂಡ 46 ರನ್ ಅಂತರದಲ್ಲಿ ಇನ್ನೂಳಿದ 6 ವಿಕೆಟ್ ಕಳೆದುಕೊಂಡು 43.1 ಓವರ್‍ ಗಳಲ್ಲಿ 225ರನ್‍ಗೆ ಆಲ್‍ಔಟ್ ಆಯಿತು.

ಮಳೆಯ ಹಿನ್ನೆಲೆಯಲ್ಲಿ ಪಂದ್ಯವನ್ನು 47 ಓವರ್‌ಗೆ ನಿಗದಿ ಪಡಿಸಲಾಯಿತು. ಭಾರತ ನೀಡಿದ್ದ 224 ರನ್‌ ಬೆನ್ನತ್ತಲು ಹೊರಟ ಶ್ರೀಲಂಕಾಕ್ಕೆ ಆರಂಭಿಕ ವಿನೋದ್ ಭಾನುಕ 7ರನ್(17 ಎಸೆತ, 1 ಬೌಂಡರಿ) ಬಾರಿಸಿ ವಿಕೆಟ್ ಒಪ್ಪಿಸಿದರು. ಆದರೆ ಅವಿಷ್ಕಾ ಫರ್ನಾಂಡೊ ಮತ್ತು ಭಾನುಕ ರಾಜಪಕ್ಷ 109ರನ್(105 ಎಸೆತ) ಉತ್ತಮ ಜೊತೆಯಾಟದ ನೆರವಿನಿಂದ ತಂಡವನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿದ್ದಾರೆ. ಭಾನುಕ ರಾಜಪಕ್ಷ 65ರನ್(56 ಎಸೆತ, 12 ಬೌಂಡರಿ), ಅವಿಷ್ಕಾ ಫರ್ನಾಂಡೊ 76ರನ್( 98 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಅಂತಿಮವಾಗಿ ಶ್ರೀಲಂಕಾ ತಂಡ 39 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 227 ರನ್‌ ಗಳಿಸುವ ಮೂಲಕ ಗೆಲುವನ್ನು ದಾಖಲಿಸಿದೆ.

ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 6 ಪ್ರಮುಖ ಬದಲಾವಣೆ ಗಳನ್ನು ಮಾಡಿಕೊಂಡಿತ್ತು. ಭಾರತ ಪರ ಸಂಜು ಸ್ಯಾಮ್ಸನ್, ನಿತೇಶ್ ರಾಣಾ, ಕೃಷ್ಣಪ್ಪ ಗೌತಮ್, ರಾಹುಲ್ ಚಹರ್ ಮತ್ತು ಚೇತನ್ ಸಕಾರಿಯಾ ಏಕದಿನ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದರು. ಅಲ್ಲದೇ ಮೊದಲ ಪಂದ್ಯದಲ್ಲಿಯೇ ರಾಹುಲ್ ಚಹರ್ 3 ವಿಕೆಟ್, ಚೇತನ್ ಸಕಾರಿಯಾ 2 ವಿಕೆಟ್ ಮತ್ತು ಸಿ.ಎಂ ಗೌತಮ್ 1 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

Comments are closed.