ಮೊಹಾಲಿ : ಆಸ್ಟ್ರೇಲಿಯಾ (India Vs Australia) ವಿರುದ್ದ ನಡೆಯುತ್ತಿರುವ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿಯೇ ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ (Shubman Gill) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಆಕರ್ಷಕ ಅರ್ಧ ಶತಕ ಸಿಡಿಸುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಇನ್ನೊಂದೆಡೆಯಲ್ಲಿ ಏಕದಿನ ಕ್ರಿಕೆಟ್ ರಾಂಕಿಂಗ್‌ನಲ್ಲಿ (ODI Cricket Ranking) ಅಗ್ರಸ್ಥಾನಕ್ಕೇರಲು ಇನ್ನೊಂದೇ ಮೆಟ್ಟಿಲು.

ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭಮನ್ ಗಿಲ್ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ನಾಯಕ ರೋಹಿತ್ ಶರ್ಮಾ ಜೊತೆಗೆ ಉತ್ತಮ ಇನ್ನಿಂಗ್ಸ್‌ಗಳನ್ನು ನೀಡಿರುವ ಶುಭಮನ್ ಗಿಲ್, ಇಂದು ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ್ದರು.
ಇದನ್ನೂ ಓದಿ : ಆಸ್ಟ್ರೇಲಿಯಾ ವಿರುದ್ದದ ಸರಣಿ : ವಿರಾಟ್ ಕೊಹ್ಲಿ, ಪಾಂಡ್ಯ, ರೋಹಿತ್, ಬುಮ್ರಾಗೆ ವಿಶ್ರಾಂತಿ !
ಶುಭಮನ್ ಗಿಲ್ 63 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 74 ರನ್ ಬಾರಿಸಿದ್ದಾರೆ. ಇನ್ನೊಂದೆಡೆಯಲ್ಲಿ ರುತುರಾಜ್ ಗಾಯಕ್ವಾಡ್ 77 ಎಸೆತಗಳಲ್ಲಿ 10 ಬೌಂಡರಿ ನೆರವಿನಿಂದ 77 ರನ್ ಸಿಡಿಸುವ ಮೂಲಕ ಮೊದಲ ವಿಕೆಟ್‌ಗೆ 142 ರನ್ ಜೊತೆಯಾಟ ಆಡಿದ್ದಾರೆ. ಶುಭಮನ್ ಗಿಲ್ ಆಟವನ್ನು ನೋಡುವುದಕ್ಕೆ ಖುದ್ದು ಶುಭಮನ್ ಗಿಲ್ ಫ್ಯಾಮಿಲಿ ಮೊಹಾಲಿ ಕ್ರೀಡಾಂಗಣದಲ್ಲಿ ನೆರೆದಿತ್ತು.

ಮಗ ಅರ್ಧ ಶತಕ ಬಾರಿಸುತ್ತಿದ್ದಂತೆಯೇ ಕುಟುಂಬಸ್ಥರು ಸಂಭ್ರಮಿಸಿದ್ದರು. ಆಸ್ಟ್ರೇಲಿಯಾ ವಿರುದ್ದದ ಅರ್ಧ ಶತಕ ಸಿಡಿಸಿರುವುದಕ್ಕೆ ಕ್ರಿಕೆಟ್ ಅಭಿಮಾನಿ ಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಯುವ ಆಟಗಾರ ಶುಭಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ ಇದುವರೆಗೆ ಒಟ್ಟು 34 ಪಂದ್ಯಗಳನ್ನು ಆಡಿದ್ದು, 34 ಇನ್ನಿಂಗ್ಸ್‌ಗಳಲ್ಲಿ ಒಟ್ಟು 9 ಅರ್ಧಶತಕಗಳು, 5 ಶತಕ ಹಾಗೂ 1 ದ್ವಿಶತಕ ಬಾರಿಸುವ ಮೂಲಕ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ.
Shubman Gill's family is watching their boy bat at their home.
– What a beautiful moment. pic.twitter.com/g6byp4ySEB
— Johns. (@CricCrazyJohns) September 22, 2023
ಅದ್ರಲ್ಲೂ 2023ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 1000 ರನ್ ಬಾರಿಸಿದ ಏಕೈಕ ಆಟಗಾರ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದಾರೆ. 23 ವರ್ಷ ವಯಸ್ಸಿನ ಶುಭಮನ್ ಗಿಲ್ ಈ ವರ್ಷ 18 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 71ರ ಸರಾಸರಿಯಲ್ಲಿ 1000 ರನ್ ಗಳಿಸಿದ್ದಾರೆ. ಅದ್ರಲ್ಲೂ 6 ಶತಕ ಒಳಗೊಂಡಿದೆ. ಈ ಮೂಲಕ ಪಾಕಿಸ್ತಾನ ಬಾಬರ್ ಅಜಮ್ ಅರ ದಾಖಲೆಯನ್ನು ಅಳಿಸುವತ್ತ ಮುನ್ನಡೆದಿದ್ದಾರೆ.

ಶುಭಮನ್ ಇದುವರೆಗೆ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 9 ಅರ್ಧಶತಕ ಬಾರಿಸಿದ್ದಾರೆ. ಆದರೆ ತವರು ನೆಲದಲ್ಲಿ ಅರ್ಧ ಶತಕ ಬಾರಿಸಿರುವುದು ಇದೇ ಮೊದಲು. ಈ ಮೂಲಕ ಶುಭಮನ್ ಗಿಲ್ ಅವರು ತವರು ನೆಲದಲ್ಲಿ ಅರ್ಧ ಶತಕ ಬಾರಿಸಬೇಕು ಅನ್ನೋ ಕನಸು ನನಸಾಗಿದೆ. ಶುಭಮನ್ ಗಿಲ್‌ಗೆ ಏಕದಿನ ಕ್ರಿಕೆಟ್ ರಾಂಕಿಂಗ್‌ನಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಅವರನ್ನು ಹಿಂದಿಕ್ಕಲು ಉತ್ತಮ ಅವಕಾಶವಿದೆ.
ಇದನ್ನೂ ಓದಿ : ಸಿರಾಜ್ ಮಾರಕ ದಾಳಿಗೆ ಶ್ರೀಲಂಕಾ ತತ್ತರ, 8ನೇ ಬಾರಿಗೆ ಏಷ್ಯಾಕಪ್ ಗೆದ್ದ ಭಾರತ
ಇನ್ನು ಕೇವಲ 200 ರನ್ ಬಾರಿಸಿದ್ರೆ ಏಕದಿನ ರಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕ ಏರಲಿದ್ದಾರೆ. ಸದ್ಯ ಬಾಬರ್ ಅಜಮ್ 857 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಇನ್ನು ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭಮನ್ ಗಿಲ್ 814 ಅಂಕಗಳಿಸಿದ್ದು ಎರಡನೇ ಸ್ಥಾನದಲ್ಲಿದ್ದಾರೆ. ಬಾಬರ್ ಅಜಂ ವಿಶ್ವಕಪ್ ವರೆಗೂ ಯಾವುದೇ ಏಕದಿನ ಪಂದ್ಯಗಳನ್ನು ಆಡುವುದಿಲ್ಲ.

ಆದರೆ ಶುಭಮನ್ ಗಿಲ್ ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಯಲ್ಲಿ ಎರಡು ಶತಕ ಬಾರಿಸಿದ್ರೆ ಏಕದಿನ ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರುವುದು ಖಚಿತ. ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ 3ನೇ ಸ್ಥಾನದಲ್ಲಿದ್ರೆ, ಪಾಕಿಸ್ತಾನದ ಇಮಾಂ ಉಲ್ ಹಕ್ 4ನೇ ಸ್ಥಾನ, ಹರ್ರಿ ಟೆಕ್ಟರ್ 5ನೇ ಸ್ಥಾನ, ಆಸ್ಟ್ರೇಲಿಯಾದ ಡೇವಿಡ್ ವಾರ್ಕರ್ 6ನೇ ಸ್ಥಾನ, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ 7ನೇ ಸ್ಥಾನ ಪಡೆದುಕೊಂಡಿದ್ದಾರೆ.
All class from @ShubmanGill 👏👏
Live – https://t.co/F3rj8GI20u… #INDvAUS@IDFCFIRSTBank pic.twitter.com/8w74aRpaCI
— BCCI (@BCCI) September 22, 2023
ಭಾರತ ವಿರಾಟ್ ಕೊಹ್ಲಿ 8ನೇ ಸ್ಥಾನ, ದಕ್ಷಿಣ ಆಫ್ರಿಕಾದ ಹೆನ್ರಿಕ್ ಕ್ಲಸೇನ್ 9 ಹಾಗೂ ಭಾರತ ತಂಡದ ನಾಯಕ ರೋಹಿತ್ ಶರ್ಮಾ 10ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನ ರಾಂಕಿಂಗ್ ಪಟ್ಟಿಯಲ್ಲಿ ಟಾಪ್ 10 ನಲ್ಲಿ ಒಟ್ಟು ಮೂವರು ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ದ ಸರಣಿ ಭಾರತ ತಂಡ : ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ನಾಯಕ/ ವಿಕೆಟ್ ಕೀಪರ್), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ
India vs Australia ODi Series Shubman Gill 9th fifty New Record and gill Dreams Come fulfilled