IPL 2020 : ಹ್ಯಾಟ್ರಿಕ್ ಗೆಲುವು ದಾಖಲಿಸಿದ ಪಂಜಾಬ್

ದುಬೈ : ಸತತ ಸೋಲಿನಿಂದ ಕಂಗೆಟ್ಟಿದ್ದ ಕನ್ನಡಿಗ ಕೆ.ಎಲ್.ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇದೀಗ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.

ದುಬೈನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಡೇರ್ ಕ್ಯಾಪಿಟಲ್ಸ್ ತಂಡಕ್ಕೆ ನಿಶಮ್ ಆರಂಭಿಕ ಆಘಾತ ನೀಡಿದ್ರು. 7 ರನ್ ಗಳಿಸಿದ್ದ ಪ್ರಥ್ವಿ ಶಾ ಔಟಾದ್ರು.

ನಂತರ ಬ್ಯಾಟಿಂಗ್ ಗೆ ಇಳಿದ ನಾಯಕ ಶ್ರೇಯಸ್ ಅಯ್ಯರ್ ಕೂಡ ಜಾಸ್ತಿ ಹೊತ್ತು ಕ್ರೀಸ್ ಗೆ ಕಚ್ಚಿಕೊಂಡು ಆಡಲು ಸಾಧ್ಯವಾಗಿಲ್ಲ. ಕೇವಲ 14 ರನ್ ಗಳಿಸಿ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದ್ರು.

ಒಂದೆಡೆ ಸಾಲು ಸಾಲು ವಿಕೆಟ್ ಪತನವಾಗುತ್ತಿದ್ದರು ಕೂಡ, ಇನ್ನೊಂದೆಡೆ ಶಿಖರ್ ಧವನ್ ಒಬ್ಬಂಟಿ ಆಟ ಪ್ರದರ್ಶಿಸುತ್ತಲೇ ಸಾಗಿದ್ರು. ಕೇವಲ 61 ಎಸೆತಗಳಲ್ಲಿ 12 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ನೆರವಿನಿಂದ ಧವನ್ 106 ರನ್ ಗಳಿಸುವ ಮೂಲಕ ಶತಕ ಬಾರಿಸಿದ್ದಾರೆ.

ವೃಷಭ್ ಪಂಥ್ 14, ಸ್ಟೋನಿಸ್ 9 ಹಾಗೂ ಹೆಟ್ಮಯರ್ 10 ರನ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು. ಪಂಜಾಬ್ ಪರ ಶೆಮಿ 2, ಅಶ್ವಿನ್, ಮ್ಯಾಕ್ಸ್ ವೆಲ್ ಹಾಗೂ ನಿಶಮ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಗುರಿಯನ್ನು ಬೆನ್ನತ್ತಿದ ಕಿಂಗ್ಸ್ ಇಲೆವೆನ್ ತಂಡಕ್ಕೆ ಕನ್ನಡಿಗ ಜೋಡಿ ಕೆ.ಎಲ್.ರಾಹುಲ್ ಹಾಗೂ ಮಾಯಂಕ್ ಅಗರ್ ವಾಲ್ ಉತ್ತಮ ಆರಂಭವೊದಗಿಸುವ ಭರವಸೆಯನ್ನು ನೀಡಿದ್ರು. ಆದರೆ 5 ರನ್ ಗಳಿಸಿದ್ದ ಮಾಯಂಕ್ ಅಗರ್ ವಾಲ್ ರನೌಟ್ ಆದ್ರೆ, 15 ರನ್ ಗಳಿಸಿದ್ದ ನಾಯಕ ರಾಹುಲ್ ಅಕ್ಷರ್ ಪಟೇಲ್ ಗೆ ವಿಕೆಟ್ ಒಪ್ಪಿಸಿದ್ರು.

ನಂತರ ಕ್ರೀಸ್ ಗೆ ಇಳಿದ ಕ್ರಿಕೆಟ್ ದೈತ್ಯ ಕ್ರಿಸ್ ಗೇಲ್ ಭರ್ಜರಿ ಹೊಡೆತಕ್ಕೆ ಮುಂದಾದ್ರು. 2 ಸಿಕ್ಸರ್ ನೆರವಿನಿಂದ 13 ಎಸೆತಗಳಲ್ಲಿ 29ರನ್ ಸಿಡಿಸಿದ್ರು. ಈ ಮೂಲಕ ಪಂಜಾಬ್ ತಂಡಕ್ಕೆ ಗೆಲುವಿನ ಆಸೆಯನ್ನು ಚಿಗುರಿಸಿದ್ರು. ಆದರೆ ಅಶ್ವಿನ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದ್ರು.

ನಂತರ ಮ್ಯಾಕ್ಸ್ ವೆಲ್ ಗೆ ಜೊತೆಯಾದ ಪೂರಾನಾ ಉತ್ತಮ ಜೊತೆಯಾಟ ನಡೆಸಿದ್ರು. ಮ್ಯಾಕ್ಸ್ ವೆಲ್ 32 ರನ್ ಗಳಿಸಿದ್ರೆ ನಿಕೋಲಸ್ ಪೂರಾನ 28 ಎಸೆತಗಳಲ್ಲಿ 58 ರನ್ ಗಳಿಸುವ ಮೂಲಕ ಅರ್ಧ ಶತಕ ಸಿಡಿಸಿದ್ರು.

ನಂತರದಲ್ಲಿ ದೀಪಕ್ ಹೂಡ 15 ಹಾಗೂ ಜೇಮ್ಸ್ ನಿಶಮ್ 10 ರನ್ ನೆರವಿನಿಂದ ಕಿಂಗ್ಸ್ ಇಲೆವೆನ್ ತಂಡ 19 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿದೆ.

ಸಂಕ್ಷೀಪ್ತ ಸ್ಕೋರ್ :
ಡೆಲ್ಲಿ ಕ್ಯಾಪಿಟಲ್ಸ್ :ಶಿಖರ್ ಧವನ್ 106 (61), ಶ್ರೇಯಸ್ ಅಯ್ಯರ್ 14 (12), ವೃಷಬ್ ಪಂಥ್ 14 (20) ಹೆಟ್ಮಯರ್ 10 (6), ಸ್ಟೋನಿಸ್ 9 (10), ಪ್ರಥ್ವಿ ಶಾ 7 (11), ಮೊಹಮ್ಮದ್ ಶೆಮಿ 2/28, ಗ್ಲೇನ್ ಮ್ಯಾಕ್ಸ್ ವೆಲ್ 1/31, ಜೇಮ್ಸ್ ನಿಶಮ್ 1/17. ಮುರುಗನ್ ಅಶ್ವಿನ್ 1/33

ಕಿಂಗ್ಸ್ ಇಲೆವೆನ್ ಪಂಜಾಬ್ : ನಿಕೋಲಸ್ ಪೂರಾನಾ 53 (28), ಗ್ಲೇನ್ ಮ್ಯಾಕ್ಸ್ ವೆಲ್ 32 (24), ಕ್ರಿಸ್ ಗೇಲ್ 29 (13), ಕೆ.ಎಲ್.ರಾಹುಲ್ 15 (11). ದೀಪಕ್ ಹೂಡಾ 15 (22). ಜೇಮ್ಸ್ ನಿಶಮ್ 10 (8), ಮಾಯಂಕ್ ಅಗರ್ ವಾಲ್ 5 (9), ಕಗಿಸೋ ರಬಾಡ 2/27, ಅಕ್ಷರ್ ಪಟೇಲ್ 1/27, ರವಿಚಂದ್ರನ್ ಅಶ್ವಿನ್ 1/27

Comments are closed.