ಅಕ್ಕಿ ಕಾಳಿನ ಮೇಲೆ ಮೂಡಿದೆ ಭಗವದ್ಗೀತೆ…! ಕಾನೂನು ವಿದ್ಯಾರ್ಥಿನಿಯ ಅದ್ಭುತ ಸಾಧನೆ…!!

ತೆಲಂಗಾಣ : ಭಗವದ್ಗೀತೆ ನಮ್ಮ ಧರ್ಮ ಗ್ರಂಥವಾಗಿದ್ದರೂ ಅದರ ಕ್ಲಿಷ್ಟತೆಯಿಂದ ಬಹುತೇಕ ರಿಗೆ ಅದು ಕಬ್ಬಿಣದ ಕಡಲೆ. ಆದರೆ ಈ ಹೆಣ್ಣುಮಗಳು ಮಾತ್ರ ಅಕ್ಕಿ ಕಾಳಿನ ಮೇಲೆ ಭಗವದ್ಗೀತೆಯ ಸಾಲುಗಳನ್ನು ಬರೆದು ಸೈ ಎನ್ನಿಸಿಕೊಂಡಿದ್ದಾರೆ.

ಹೈದ್ರಾಬಾದ್ ನ ತೆಲಂಗಾಣ ಮೂಲದ ರಾಮಗಿರಿ ಸ್ವಾರಿಕಾ ಇಂತಹದೊಂದು ವಿಶಿಷ್ಟವಾದ ಹಾಗೂ ಅತ್ಯಂತ ಶ್ರಮದಾಯಕವಾದ ಸೂಕ್ಷ್ಮ ಸಾಹಸ ಮಾಡಿದ ಯುವತಿ.

ಪ್ರಸ್ತುತ ಕಾನೂನು ವಿದ್ಯಾರ್ಥಿನಿಯಾಗಿರುವ ಸ್ವಾರಿಕಾ ಬರೋಬ್ಬರಿ ೪.೦೪೨ ಅಕ್ಕಿ ಕಾಳುಗಳನ್ನು ಬಳಸಿಕೊಂಡು ಅವುಗಳ ಮೇಲೆ ಭಗವದ್ಗೀತೆ ಶ್ಲೋಕಗಳನ್ನು ಬರೆದು ಸಾಧನೆ ಮಾಡಿದ್ದಾರೆ. ಇದಕ್ಕಾಗಿ ಅವರು ಒಟ್ಟು ೧೫೦ ಗಂಟೆ ಶ್ರಮವಹಿಸಿದ್ದಾರಂತೆ.

ಸ್ವಾರಿಕಾ ಭಾರತದ ಮೊದಲ ಮೈಕ್ರೋ ಆರ್ಟಿಸ್ಟ್ ಆಗಿದ್ದು, ತಮ್ಮ ಇದೇ ಕಲೆಯಿಂದ ಅನ್ನವಾಗಿ ಹಸಿವು ತಣಿಸುವ ಅಕ್ಕಿಕಾಳಿನ ಮೇಲೆ ಭಗವದ್ಗೀತೆಯ ಸಾರ ಮೂಡಿಸಿದ್ದಾರೆ.

ಇದೇ ರೀತಿ ಅಂದಾಜು ೨ ಸಾವಿರಕ್ಕೂ ಅಧಿಕ ವಿಧದ ಕಲಾಕೃತಿಗಳನ್ನು ರಚಿಸಿರುವ ಸ್ವಾರಿಕಾ ಎಳ್ಳಿನ ಮೇಲೂಚಿತ್ರ ಅಕ್ಷರ ಮೂಡಿಸಿ ಗಮನ ಸೆಳೆದಿದ್ದಾರೆ.

ಈಗಾಗಲೇ ಕೂದಲ ಎಳೆ ಮೇಲೆ ಸಂವಿಧಾನದ ಪೀಠಿಕೆ ಬರೆದು ಅಚ್ಚರಿ ಮೂಡಿಸಿರುವ ಸ್ವಾರಿಕಾಗೆ ತೆಲಂಗಾಣ ಸರ್ಕಾರ ತಮಿಳಿಸೈ ಸೌಂದರರಾಜನ್ ಪುರಸ್ಕಾರ ನೀಡಿ ಗೌರವಿಸಿದೆ.

ಕಳೆದ ವರ್ಷ ರಾಷ್ಟ್ರ ರಾಜಧಾನಿ ದೆಹಲಿಯ ಸಾಂಸ್ಕೃತಿಕ ಅಕಾಡೆಮಿ ಇವರಿಗೆ ರಾಷ್ಟ್ರ ಪ್ರಶಸ್ತಿ ನೀಡಿದ್ದು, ಮೈಕ್ರೋ ಆರ್ಟಿಸ್ಟ್ ಎಂಬ ಗೌರವ ನೀಡಿದೆ.

ಕಳೆದ ನಾಲ್ಕು ವರ್ಷದಿಂದ ಈ ಹವ್ಯಾಸ ರೂಢಿಸಿಕೊಂಡಿರುವ ರಾಮಗಿರಿ ಸ್ವಾರಿಕಾ ಅಕ್ಕಿ ಕಾಳಿನ ಮೇಲೆ ಇಂಗ್ಲೀಷ್ ನ ಅಲ್ಫಾಬೇಟ್ ಹಾಗೂ ಗಣೇಶನನ್ನು ಚಿತ್ರಿಸಿದ್ದಾರಂತೆ.

Comments are closed.