ಇಶಾನ್ ಕಿಶನ್, ಪೊಲಾರ್ಡ್ ಹೋರಾಟ ವ್ಯರ್ಥ : ಸೂಪರ್ ಓವರ್ ನಲ್ಲಿ ಗೆದ್ದ ರಾಯಲ್ ಚಾಲೆಂಜರ್ಸ್

0

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲಿ ಸೂಪರ್ ಗೆಲುವು ದಾಖಲಿಸಿದೆ. ಪೊಲಾರ್ಡ್, ಇಶಾನ್ ಕಿಶನ್ ಅಬ್ಬರದ ನಡುವಲ್ಲೂ ಬೆಂಗಳೂರು ಮುಂಬೈ ವಿರುದ್ದ ಸೇಡು ತೀರಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಬೆಂಗಳೂರು ತಂಡಕ್ಕೆ ಆರೋನ್ ಪಿಂಚ್ ಹಾಗೂ ದೇವದತ್ತ ಪಡಿಕ್ಕಲ್ ಉತ್ತಮ ಆರಂಭವೊದಗಿಸಿದ್ರು.

ದೇವದತ್ ಪಡಿಕಲ್ (54ರನ್, 40 ಎಸೆತ, 5 ಬೌಂಡರಿ, 2 ಸಿಕ್ಸರ್), ಆರಂಭಿಕ ಆರನ್ ಫಿಂಚ್ (52 ರನ್, 35 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ಅನುಭವಿ ಎಬಿ ಡಿವಿಲಿಯರ್ಸ್ (55ರನ್, 24 ಎಸೆತ, 4 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 3 ವಿಕೆಟ್​ಗೆ 201 ರನ್ ಕಲೆಹಾಕಿತು.

ರಾಯಲ್ ಚಾಲೆಂಜರ್ಸ್ ತಂಡ ನೀಡಿದ್ದ ಬೃಹತ್ ಮೊತ್ತವನ್ನು ಬೆನ್ನತ್ತಿದ ಮುಂಬೈ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಇಶಾನ್ ಕಿಶನ್ ಹಾಗೂ ಪೊಲಾರ್ಡ್ ಅಬ್ಬರದಿಂದಾಗಿ ಮುಂಬೈ ಗೆಲುವು ಖಚಿತವೆನ್ನಲಾಗಿತ್ತು.

ಮುಂಬೈ ಇಂಡಿಯನ್ಸ್​ ಕೂಡ ಇಶಾನ್ ಕಿಶನ್ ( 99ರನ್, 58 ಎಸೆತ, 2 ಬೌಂಡರಿ, 9 ಸಿಕ್ಸರ್) ಹಾಗೂ ಸ್ಪೋಟಕ ಬ್ಯಾಟ್ಸ್​ಮನ್ ಕೈರಾನ್ ಪೊಲ್ಲಾರ್ಡ್ (60ರನ್, 24 ಎಸೆತ, 3 ಬೌಂಡರಿ, 5 ಸಿಕ್ಸರ್) ಜೋಡಿ 5 ವಿಕೆಟ್​ಗೆ 201 ರನ್​ ಗಳಿಸಿತು.

ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸುತ್ತಿದ್ದಂತೆಯೇ ಫಲಿತಾಂಶ ನಿರ್ಣಾಯಕ್ಕಾಗಿ ಸೂಪರ್ ಓವರ್ ಮೊರೆಹೋಗಲಾಯಿತು.

ಈ ವೇಳೆ ಮುಂಬೈ ತಂಡ 7 ರನ್ ಪೇರಿಸಿದರೆ, ಪ್ರತಿಯಾಗಿ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೋಡಿ 11 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟಿತು.

Leave A Reply

Your email address will not be published.