Hardik Pandya Captain : ಕೊಹ್ಲಿ, ರಾಹುಲ್‌, ರೋಹಿತ್‌ ಶರ್ಮಾಗೆ ಕೋಕ್‌ : ಹಾರ್ದಿಕ್‌ ಪಾಂಡ್ಯ ಟೀಂ ಇಂಡಿಯಾ ನಾಯಕ

ಮುಂಬೈ : ಐರ್ಲೆಂಡ್‌ ವಿರುದ್ದದ T20 ಸರಣಿಗೆ ಬಿಸಿಸಿಐಗೆ ಭಾರತ ತಂಡವನ್ನು ಆಯ್ಕೆ ಮಾಡಿದೆ. ಹಿರಿಯ ಆಟಗಾರರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಕೆ.ಎಲ್.ರಾಹುಲ್‌ ಅವರಿಗೆ ತಂಡದಿಂದ ಕೋಕ್‌ ನೀಡಲಾಗಿದ್ದು, ಐಪಿಎಲ್‌ ಹೀರೋ ಹಾರ್ದಿಕ್‌ ಪಾಂಡ್ಯ (Hardik Pandya Captain) ಅವರನ್ನು ನಾಯಕನನ್ನಾಗಿ ನೇಮಕ ಮಾಡಿದೆ. ಅಲ್ಲದೇ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಅವರಿಗೆ ಉಪನಾಯಕನ ಹೊಣೆಯನ್ನು ನೀಡಿದೆ.

ಭಾರತ ತಂಡ ಒಂದೆಡೆಯಲ್ಲಿ ಇಂಗ್ಲೆಂಡ್‌ ಪ್ರವಾಸಕ್ಕೆ ಸಜ್ಜಾಗುತ್ತಿದ್ರೆ, ಇನ್ನೊಂದೆಡೆಯಲ್ಲಿ ಐರ್ಲೆಂಡ್‌ ವಿರುದ್ದದ ಟಿ20 ಸರಣಿಗೆ ಸಜ್ಜಾಗಬೇಕಾಗಿದೆ. ಇದೀಗ ಬಿಸಿಸಿಐ ಯುವ ತಂಡವನ್ನು ಐರ್ಲೆಂಡ್‌ ಪ್ರವಾಸಕ್ಕೆ ಸಜ್ಜುಗೊಳಿಸಿದೆ. ಐಪಿಎಲ್‌ನಲ್ಲಿ ಮಿಂಚಿದ್ದ ಉಮ್ರಾನ್‌ ಖಾನ್‌, ಸಂಜು ಸ್ಯಾಮ್ಸನ್‌, ದೀಪಕ್‌ ಹೂಡಾ, ದಿನೇಶ್‌ ಕಾರ್ತಿಕ್‌, ಚಹಲ್‌, ಅರ್ಷದೀಪ್‌, ಅಕ್ಸರ್‌ ಪಟೇಲ್‌ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಗೆ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರಿಗೆ ವಿಶ್ರಾಂತಿಯನ್ನು ನೀಡಿ, ಕೆ.ಎಲ್.ರಾಹುಲ್‌ಗೆ ನಾಯಕತ್ವದ ಹೊಣೆಯನ್ನು ಹೊರಿಸಲಾಗಿತ್ತು. ಆದರೆ ತೊಡೆ ಸಂದು ಗಾಯದ ಹಿನ್ನೆಲೆಯಲ್ಲಿ ಕೆ.ಎಲ್.ರಾಹುಲ್‌ ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಿಂದ ಔಟ್‌ ಆಗಿದ್ರು. ಹೀಗಾಗಿ ರಿಷಬ್‌ ಪಂತ್‌ ಅವರಿಗೆ ನಾಯಕತ್ವವಹಿಸಲಾಗಿದ್ದು, ಹಾರ್ದಿಕ್‌ ಪಾಂಡ್ಯ ಉಪನಾಯಕನ ಹೊಣೆಯನ್ನು ಹೊತ್ತುಕೊಂಡಿದ್ರು.

ಇದೀಗ ಐರ್ಲೆಂಡ್‌ ವಿರುದ್ದದ ಸರಣಿಗೆ ಹಾರ್ದಿಕ್‌ ಪಾಂಡ್ಯ ನಾಯಕನಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯ ಐಪಿಎಲ್‌ ಪಂದ್ಯಾವಳಿಯಲ್ಲಿ ಗುಜರಾತ್‌ ಟೈಟಾನ್ಸ್‌ ತಂಡವನ್ನು ಮುನ್ನೆಡೆಸಿದ್ದ ಹಾರ್ದಿಕ್‌ ಪಾಂಡ್ಯ ಚೊಚ್ಚಲ ಸರಣಿಯಲ್ಲಿಯೇ ತಂಡ ಐಪಿಎಲ್‌ ಟ್ರೋಫಿಯನ್ನು ಜಯಿಸಿತ್ತು. ಇದರ ಬೆನ್ನಲ್ಲೇ ಹಾರ್ದಿಕ್‌ ಪಾಂಡ್ಯ ಅವರಿಗೆ ನಾಯಕತ್ವ ವಹಿಸುವ ಬಗ್ಗೆಯೂ ಮಾತುಗಳು ಕೇಳಿಬಂದಿದ್ದವು. ಇದೀಗ ಬಿಸಿಸಿಐ ಐರ್ಲೆಂಡ್‌ ಪ್ರವಾಸದ ನೆಪದಲ್ಲಿ ಹಾರ್ದಿಕ್‌ ಪಾಂಡ್ಯ ಅವರಿಗೆ ನಾಯಕತ್ವ ವಹಿಸಿದ್ದು, ಹೊಸ ಪ್ರಯೋಗಕ್ಕೆ ಮುಂದಾಗಿದೆ. ಐರ್ಲೆಂಡ್ ವಿರುದ್ಧದ T20I ಸರಣಿಗೆ 17 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಟೀಮ್ ಇಂಡಿಯಾ ಜೂನ್ 26 ಮತ್ತು 28 ರಂದು ಡಬ್ಲಿನ್‌ನಲ್ಲಿ ಎರಡು T20I ಪಂದ್ಯಗಳನ್ನು ಆಡಲಿದೆ.

ಭಾರತ T20I ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಯುಜುವೇಂದ್ರ ಚಾಹಲ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್

ಇದನ್ನೂ ಓದಿ : ಕೆ.ಎಲ್ ರಾಹುಲ್‌ಗೆ ಅವನೊಬ್ಬ ದುಷ್ಮನ್ ; ಕನ್ನಡಿಗನ ಬೆನ್ನು ಬಿದ್ದ ಬೇತಾಳ ಯಾರು ?

ಇದನ್ನೂ ಓದಿ : Chinnaswamy Stadium : ಸೌತ್ ಆಫ್ರಿಕಾ-ಇಂಡಿಯಾ ಪಂದ್ಯ : ಬೆಂಗಳೂರಲ್ಲಿ ಭದ್ರತೆ ಪರಿಶೀಲಿಸಿದ ಗೃಹ ಸಚಿವರು

India’s squad for T20I series against Ireland announced Hardik Pandya Captain

Comments are closed.