Money Plant : ಮನಿ ಪ್ಲಾಂಟ್​ಗಳನ್ನು ನೆಡುವ ಸಂದರ್ಭದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ

Vastu Tips Money Plant : ಮನೆಯಲ್ಲಿ ಸಂಪತ್ತು ಹೆಚ್ಚಾಗಲಿ ಎಂಬ ಆಸೆ ಯಾರಿಗೆ ತಾನೆ ಇರೋದಿಲ್ಲ ಹೇಳಿ. ಪ್ರತಿಯೊಬ್ಬರೂ ಮನೆಯ ಆರ್ಥಿಕ ಸಂಕಷ್ಟಗಳು ದೂರಾಗಲಿ ಎಂದೇ ಬಯಸುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಮನಿ ಪ್ಲಾಂಟ್​ಗಳನ್ನು ಬೆಳೆಸಿದ್ರೆ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಆದರೆ ಈ ಮನಿ ಪ್ಲಾಂಟ್​​ಗಳನ್ನು ಬೆಳೆಸುವ ಮುನ್ನ ಕೆಲವೊಂದು ವಿಷಯಗಳನ್ನು ನೀವು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ಇಲ್ಲವಾದಲ್ಲಿ ಮನೆಯಲ್ಲಿ ಆರ್ಥಿಕ ಸಂಕಷ್ಟ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.

ಮನೆಗಳಲ್ಲಿ ನಾವು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಇಂತಹ ಗಿಡಗಳನ್ನು ಬೆಳೆಸುತ್ತೇವೆ. ಇವು ಮನೆಯ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲದೇ ಗಾಳಿಯನ್ನು ಶುದ್ಧೀಕರಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತವೆ . ಒಳಾಂಗಣ ಸಸ್ಯಗಳಿಗೆ ನೀವು ಹೆಚ್ಚು ಕಾಳಜಿ ಮಾಡಬೇಕು ಎಂದೇನಿಲ್ಲ. ನೀವು ಇಂತಹ ಗಿಡಗಳನ್ನು ಬಾಟಲಿಗಳಲ್ಲಿ ಅಥವಾ ಹೂವಿನ ಕುಂಡಗಳಲ್ಲಿಟ್ಟು ಬೆಳೆಸಬಹುದು. ವಾಸ್ತು ಶಾಸ್ತ್ರದ ಪ್ರಕಾರ ಇಂತಹ ಗಿಡಗಳನ್ನು ನೆಡುವುದರಿಂದ ನೀವು ಆರ್ಥಿಕ ಸಂಕಷ್ಟಗಳಿಂದ ಪಾರಾಗಬಹುದು ಎಂದು ಹೇಳಲಾಗುತ್ತದೆ. ಇಂತಹ ಗಿಡಗಳು ಕುಟುಂಬಸ್ಥರಿಗೆ ಅದೃಷ್ಟವನ್ನು ತಂದುಕೊಡುತ್ತವೆ. ಅಲ್ಲದೇ ಮನೆಯಲ್ಲಿ ಸಂತೋಷವನ್ನೂ ಸಹ ಹೆಚ್ಚಿಸುತ್ತದೆ.

ಈ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಮನಿ ಪ್ಲಾಂಟ್​ಗಳನ್ನು ಇಡಬೇಡಿ : ನೀವು ಮನಿ ಪ್ಲಾಂಟ್​ಗಳನ್ನು ಉತ್ತರ ದಿಕ್ಕಿನಲ್ಲಿ ಇರಿಸಿದ್ದರೆ ಮೊದಲು ಸ್ಥಳ ಬದಲಾವಣೆ ಮಾಡಿ. ಏಕೆಂದರೆ ಉತ್ತರ ದಿಕ್ಕಿನಲ್ಲಿ ಮನಿ ಪ್ಲಾಂಟ್​ಗಳನ್ನು ಬೆಳೆಸಿದಲ್ಲಿ ಆರ್ಥಿಕತೆ ಅಭಿವೃದ್ಧಿಯಾಗುವ ಬದಲು ಆರ್ಥಿಕ ನಷ್ಟಗಳೇ ಹೆಚ್ಚಾಗಲಿದೆ. ಮನಿ ಪ್ಲಾಂಟ್​ಗಳನ್ನು ಎಂದಿಗೂ ಆಗ್ನೇಯ ದಿಕ್ಕಿನಲ್ಲಿ ಇರಿಸಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಂಪತ್ತು ಹೆಚ್ಚಲಿದೆ ಎಂದು ವಾಸ್ತು ಶಾಸ್ತ್ರ ಹೇಳಿದೆ.

ಮನಿ ಪ್ಲಾಂಟ್​ ನೆಲಕ್ಕೆ ತಾಗದಂತೆ ನೋಡಿಕೊಳ್ಳಿ : ಮನಿ ಪ್ಲಾಂಟ್​​ಗಳು ಅತ್ಯಂತ ವೇಗವಾಗಿ ಬೆಳೆಯುವುದರಿಂದ ಇವು ಬೇಗನೆ ನೆಲಕ್ಕೆ ತಾಗುತ್ತವೆ. ಆದರೆ ಇದನ್ನು ನೀವು ನಿರ್ಲಕ್ಷಿಸುವಂತಿಲ್ಲ. ಮನಿ ಪ್ಲಾಂಟ್​ಗಳ ಎಳೆ ಅಥವಾ ಕೊಂಬೆಗಳು ಮೇಲ್ಮುಖವಾಗಿ ಬೆಳೆಯಲು ಆಧಾರ ನೀಡಿ. ಮನಿ ಪ್ಲಾಂಟ್​ಗಳು ಒಂಚೂರು ಒಣಗದೇ ಸಮೃದ್ಧವಾಗಿ ಬೆಳೆಯುತ್ತಿದೆ ಎಂದರೆ ನಿಮ್ಮ ಮನೆಯಲ್ಲಿ ಸಂಪತ್ತು ಅಭಿವೃದ್ಧಿಯಾಗುತ್ತಿದೆ ಎಂಬರ್ಥವಿದೆ.

ಇದನ್ನು ಓದಿ : ಜೆಡಿಎಸ್ ತೊರೆಯುವ ಶಾಸಕರೆಲ್ಲರಿಗೂ ಕುಮಾರಸ್ವಾಮಿ ಮೇಲೆಯೇ ಸಿಟ್ಯಾಕೆ ?

ಇದನ್ನೂ ಓದಿ : IPL Media Rights Auction 2022ನಲ್ಲಿ ಮೆಗಾ ಟ್ವಿಸ್ಟ್ : 23,575 ಕೋಟಿಗೆ ಸ್ಟಾರ್ ಸ್ಪೋರ್ಟ್ಸ್ ಪಾಲಾಯ್ತು ಟಿವಿ ರೈಟ್ಸ್

Vastu Tips: Do NOT Make These 5 Mistakes While Placing a Money Plant in Your Home

Comments are closed.