ಮುಂಬೈ ಇಂಡಿಯನ್ಸ್‌ ಸೇರಿದ ಗುಜರಾತ್‌ ಟೈಟಾನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ

IPL 2024: ಐಪಿಎಲ್‌ 2024(IPL 2024) ರಲ್ಲಿ ಖ್ಯಾತ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ (Hardik Pandya) ಮುಂಬೈ ಇಂಡಿಯನ್ಸ್‌ ತಂಡದ ಪರ ಆಡಲಿದ್ದಾರೆ. ಈ ಕುರಿತು ಗುಜರಾತ್‌ ಟೈಟಾನ್ಸ್‌ (Gujarat Titans)ತಂಡ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ.

IPL 2024  : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಗುಜರಾತ್‌ ತಂಡ ನಾಯಕ ಹಾರ್ದಿಕ್‌ ಪಾಂಡ್ಯ ಇದೀಗ ಮುಂಬೈ ಇಂಡಿಯನ್ಸ್‌ ತಂಡವನ್ನು ಸೇರ್ಪಡೆಯಾಗಿದ್ದಾರೆ. ಐಪಿಎಲ್‌ 2024(IPL 2024) ರಲ್ಲಿ ಖ್ಯಾತ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ (Hardik Pandya) ಮುಂಬೈ ಇಂಡಿಯನ್ಸ್‌ ತಂಡದ ಪರ ಆಡಲಿದ್ದಾರೆ. ಈ ಕುರಿತು ಗುಜರಾತ್‌ ಟೈಟಾನ್ಸ್‌ (Gujarat Titans)ತಂಡ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ.

ಕಳೆದ ಎರಡು ಅವಧಿಯಲ್ಲಿ ಐಪಿಎಲ್ ಫೈನಲ್‌ಗೆ ಗುಜರಾತ್‌ ಟೈಟಾನ್ಸ್‌ ತಂಡವನ್ನು ಕೊಂಡೊಯ್ದಿದ್ದ ನಾಯಕ ಹಾರ್ದಿಕ್‌ ಪಾಂಡ್ಯ ನಿಜಕ್ಕೂ ಶಾಕ್‌ ಕೊಟ್ಟಿದ್ದಾರೆ. ಗುಜರಾತ್‌ ಟೈಟಾನ್ಸ್‌ ತಂಡ ಹಾರ್ದಿಕ್‌ ಪಾಂಡ್ಯವನ್ನು ಬಿಡುಗಡೆ ಮಾಡಿದ್ದು, ಮುಂಬೈ ಇಂಡಿಯನ್ಸ್‌ ತಂಡ ಅವರನ್ನು ಸೇರ್ಪಡೆ ಮಾಡಿಕೊಂಡಿದೆ.

IPL 2024 Hardik pandya was Traded from Gujrat titans to Mumbai indians
Image Credit to Original Source

ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ಗುಜರಾತ್‌ ತಂಡವನ್ನು ತೊರೆಯುತ್ತಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ ಇದೀಗ ಈ ಸುದ್ದಿ ನಿಜವಾಗಿದೆ. ಗುಜರಾತ್‌ ತಂಡ ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯಲ್ಲಿ ಆರಂಭದಲ್ಲಿ ಹಾರ್ದಿಕ್‌ ಪಾಂಡ್ಯ ಅವರ ಹೆಸರಿತ್ತು. ಆದರೆ ನಂತರದಲ್ಲಿ ತಂಡದ ನಾಯಕ ಹಾರ್ದಿಕ್‌ ಪಾಂಡ್ಯ ಅವರನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ : IPL 2024 : ಲಕ್ನೋ ಸೂಪರ್‌ ಜೈಂಟ್ಸ್‌ಗೆ ರಾಹುಲ್‌ ದ್ರಾವಿಡ್‌ ಮೆಂಟರ್‌ ? ಐಪಿಎಲ್‌ನತ್ತ ಟೀಂ ಇಂಡಿಯಾ ಕೋಚ್‌ ಚಿತ್ತ

ಐಪಿಎಲ್‌ ತಂಡಗಳು ಇಂದು ಬಿಡುಗಡೆ ಹಾಗೂ ಸೇರ್ಪಡೆ ಮಾಡಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಡಿಸೆಂಬರ್‌ 12ರ ವರೆಗೆ ಆಟಗಾರರನ್ನು ಬದಲಾಯಿಸಿಕೊಳ್ಳಬಹುದಾಗಿದೆ. ಡಿಸೆಂಬರ್‌ 19 ರಂದು ದುಬೈನಲ್ಲಿ ಈ ಬಾರಿಯ ಐಪಿಎಲ್‌ ಮಿನಿ ಹರಾಜು ನಡೆಯಲಿದೆ. ಐಪಿಎಲ್‌ ತಂಡಗಳು ಕೈ ಬಿಟ್ಟಿರುವ ಆಟಗಾರರ ಜೊತೆಗೆ ಹೊಸ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ ಎನ್ನಲಾಗುತ್ತಿದೆ.

IPL 2024 Hardik pandya was Traded from Gujrat titans to Mumbai indians
Image Credit to Original Source

ಹಾರ್ದಿಕ್‌ ಪಾಂಡ್ಯ 2022 ರ ಐಪಿಎಲ್ ಸೀಸನ್‌ಗೆ ಮೊದಲು‌ ಅವರು ಮುಂಬೈ ಇಂಡಿಯನ್ಸ್‌ ತಂಡವನ್ನು ತೊರೆದಿದ್ದರು. ನಂತರ ಕಳೆದ ಎರಡು ಅವಧಿಯಲ್ಲಿಯೂ ಗುಜರಾತ್‌ ಟೈಟಾನ್ಸ್‌ ತಂಡವನ್ನು ಅವರು ಮುನ್ನಡೆಸಿದ್ದರು. ಅಲ್ಲದೇ ಹಾರ್ದಿಕ್‌ ಪಾಂಡ್ಯ ಅವರು ಗುಜರಾತ್‌ ಟೈಟಾನ್ಸ್‌ ತಂಡವನ್ನು ಬ್ಯಾಕ್-ಟು-ಬ್ಯಾಕ್ ಐಪಿಎಲ್ ಫೈನಲ್‌ಗೆ ಮುನ್ನಡೆಸಿದರು. ಅಲ್ಲದೇ ಚೊಚ್ಚಲ ಋತುವಿನಲ್ಲಿಯೇ ಐಪಿಎಲ್‌ ಟ್ರೋಫಿಯನ್ನು ಜಯಿಸಿದ್ದರು.

ಇದನ್ನೂ ಓದಿ : IPL 2024 Retentions : ಐಪಿಎಲ್‌ ಹರಾಜು, ಯಾವ ತಂಡಕ್ಕೆ ಯಾವ ಆಟಗಾರರು : ತಂಡಗಳು ಉಳಿಸಿಕೊಂಡ, ಬಿಡುಗಡೆ ಮಾಡಿದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ

ಹಾರ್ದಿಕ್‌ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ ತಂಡ ಸೇರ್ಪಡೆಯಾಗಿರುವ ಬೆನ್ನಲ್ಲೇ ಜೋಪ್ರಾ ಆರ್ಚರ್‌ ಹಾಗೂ ಕ್ರಿಸ್‌ ಜೋರ್ಡಾನ್‌ ಅವರನ್ನು ಮುಂಬೈ ಇಂಡಿಯನ್ಸ್‌ ತಂಡ ಬಿಡುಗಡೆ ಮಾಡಿದೆ. ಕಳೆದ ಸೀಸನ್‌ನಲ್ಲಿ ಚೋಪ್ರಾ ಅರ್ಚರ್‌ ಅವರು ಗಾಯಗೊಂಡು ಮುಂಬೈ ಅಭಿಮಾನಿಗಳಿಗೆ ನಿರಾಸೆಯನ್ನು ಮೂಡಿಸಿದ್ದರು. ಒಂದೊಮ್ಮೆ ಚೋಪ್ರಾ ಆರ್ಚರ್‌ ಕಳೆದ ಬಾರಿ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿನಿಧಿಸಿದ್ದರೆ, ಎಂಐ ಗೆಲುವು ಸಾಧಿಸುವ ಸಾಧ್ಯತೆಯಿತ್ತು.

ಮುಂಬೈ ಇಂಡಿಯನ್ಸ ತಂಡ ಈ ಬಾರಿ ಭಾರತೀಯ ಆಟಗಾರರಾದ ಅರ್ಷದ್ ಖಾನ್, ರಮಣದೀಪ್ ಸಿಂಗ್, ಹೃತಿಕ್ ಶೋಕೀನ್, ರಾಘವ್ ಗೋಯಲ್ ಅವರನ್ನು ಬಿಡುಗಡೆ ಮಾಡಿದೆ. ಅಲ್ಲದೇ ದಕ್ಷಿಣ ಆಫ್ರಿಕಾ ತಂಡದ ಟ್ರಿಸ್ಟಾನ್ ಸ್ಟಬ್ಸ್, ಡುವಾನ್ ಜಾನ್ಸೆನ್ ಮತ್ತು ಆಸ್ಟ್ರೇಲಿಯಾದ ವೇಗಿ ರಿಲೆ ಮೆರೆಡಿತ್ ಅವರನ್ನು ಕೂಡ ಬಿಡುಗಡೆ ಗೊಳಿಸಿದೆ.

ಇದನ್ನೂ ಓದಿ : IPL 2024 RCB Team : ಐಪಿಎಲ್‌ ಹರಾಜು, ಆಟಗಾರರ ಪಟ್ಟಿ ಬಿಡುಗಡೆ ಮಾಡಿದ ಆರ್‌ಸಿಬಿ : ಯಾರು ಔಟ್‌ ? ಯಾರು ಇನ್‌ ?

IPL 2024 Hardik pandya was Traded from Gujrat titans to Mumbai indians

Comments are closed.