ದಿನಭವಿಷ್ಯ 27 ನವೆಂಬರ್ 2023 : ಕಾರ್ತಿಕ ಹುಣ್ಣಿಮೆ ಮೇಷ, ಸಿಂಹ ರಾಶಿ ಸೇರಿ ಈ 5 ರಾಶಿಯವರಿಗೆ ಸಿಗಲಿದೆ ಅದ್ಭುತ ಲಾಭ

Horoscope Today : ದಿನಭವಿಷ್ಯ 27 ನವೆಂಬರ್ 2023 ಸೋಮವಾರ. ದ್ವಾದಶ ರಾಶಿಗಳ ಮೇಲೆ ಕೃತ್ತಿಕಾ ನಕ್ಷತ್ರದ ಪ್ರಭಾವ ಇರುತ್ತದೆ. ಕಾರ್ತಿಕ ಹುಣ್ಣಿಮೆಯ ದಿನದಂದು ಶಿವಯೋಗ, ಸಿದ್ದಯೋಗ ಮೇಷರಾಶಿ, ಸಿಂಹರಾಶಿ ಸೇರಿದಂತೆ 5 ರಾಶಿಯವರಿಗೆ ಅದ್ಬುತ ಲಾಭವನ್ನು ತರಲಿದೆ.

Horoscope Today : ದಿನಭವಿಷ್ಯ 27 ನವೆಂಬರ್ 2023 ಸೋಮವಾರ. ದ್ವಾದಶ ರಾಶಿಗಳ ಮೇಲೆ ಕೃತ್ತಿಕಾ ನಕ್ಷತ್ರದ ಪ್ರಭಾವ ಇರುತ್ತದೆ. ಕಾರ್ತಿಕ ಹುಣ್ಣಿಮೆಯ ದಿನದಂದು ಶಿವಯೋಗ, ಸಿದ್ದಯೋಗ ಮೇಷರಾಶಿ, ಸಿಂಹರಾಶಿ ಸೇರಿದಂತೆ 5 ರಾಶಿಯವರಿಗೆ ಅದ್ಬುತ ಲಾಭವನ್ನು ತರಲಿದೆ. ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷ ರಾಶಿ ದಿನಭವಿಷ್ಯ
ವ್ಯವಹಾರ ಕ್ಷೇತ್ರದಲ್ಲಿ ಅಧಿಕ ಲಾಭವನ್ನು ಪಡೆಯುತ್ತಾರೆ. ಮನೆಯ ಸದಸ್ಯರ ಜೊತೆಗೆ ಸಂತೋಷವಾಗಿ ಇರುತ್ತಾರೆ. ತಂದೆಯ ಸಹಕಾರದಿಂದ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳುತ್ತದೆ. ಉದ್ಯೋಗಿಗಳಿಗೆ ಅನುಕೂಲಕರ. ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತಾರೆ.

ವೃಷಭ ರಾಶಿ ದಿನಭವಿಷ್ಯ
ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಅನುಕೂಲಕರ, ಧಾರ್ಮಿಕ ಕ್ಷೇತ್ರಗಳ ಕಡೆಗೆ ಮನಸ್ಸು ವಾಲಲಿದೆ. ಪ್ರೇಮ ಜೀವನವು ಹೊಸ ಅನುಭವವನ್ನು ನೀಡಲಿದೆ. ಕೆಲವೊಂದು ಸಮಸ್ಯೆಗಳಿಗೆ ನೀವೇ ಪರಿಹಾರವನ್ನು ಕಂಡುಕೊಳ್ಳುವಿರಿ. ದೇವರ ದರ್ಶನದಿಂದ ಮನಸಿಗೆ ಸಂತಸ ತರಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ.

ಮಿಥುನ ರಾಶಿ ದಿನಭವಿಷ್ಯ
ಉದ್ಯೋಗಿಗಳು ಇಂದು ಮೇಲಾಧಿಕಾರಿಗಳ ಸಹಕಾರದಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಸ್ನೇಹಿತರು ಮನೆಗೆ ಭೇಟಿ ನೀಡುವುದರಿಂದ ಮನಸಿಗೆ ಸಂತಸ. ಕುಟುಂಬ ಸದಸ್ಯರ ಜೊತೆಗೆ ಧಾರ್ಮಿಕ ಕಾರ್ಯದ ಬಗ್ಗೆ ಚರ್ಚೆ ನಡೆಸುವಿರಿ. ತಂದೆಯ ಸಹಕಾರಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ.

ಕರ್ಕಾಟಕ ರಾಶಿ ದಿನಭವಿಷ್ಯ
ಕುಟುಂಬ ಸದಸ್ಯರು ನಿಮಗಾಗಿ ಔತಣಕೂತ ಆಯೋಜಿಸುತ್ತಾರೆ. ಉದ್ಯೋಗಿಗಳು ಭಡ್ತಿ ವಿಚಾರದಲ್ಲಿ ಶುಭ ಸುದ್ದಿಯೊಂದನ್ನು ಕೇಳುವಿರಿ. ತಾಯಿಗೆ ಕಣ್ಣಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಉತ್ತಮ. ದೂರ ಪ್ರಮಾಣದಿಂದ ಹಲವು ಅನುಕೂಲಗಳಿವೆ.

Horoscope Today 27 November 2023 karthika pournami 2023 Zodiac Sign Shiva yoga sidda Yoga
Image Credit to Original Source

ಸಿಂಹ ರಾಶಿ ದಿನಭವಿಷ್ಯ
ಆರ್ಥಿಕ ಪರಿಸ್ಥಿತಿ ಬಲಗೊಳ್ಳಲಿದೆ. ಇದರಿಂದಾಗಿ ಹಲವು ಸಮಸ್ಯೆಗಳಿಗೆ ನೀವು ಪರಿಹಾರವನ್ನು ಕಂಡುಕೊಳ್ಳುವಿರಿ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗೆ ತಂದೆಯಿಂದ ಪರಿಹಾರ ಕಂಡುಕೊಳ್ಳಬಹುದು. ವ್ಯವಹಾರದಲ್ಲಿ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದ್ರೆ ಕೆಲಸ ಕಾರ್ಯಗಳು ಬಾಕಿ ಉಳಿಯುವ ಸಾಧ್ಯತೆಯಿದೆ.

ಇದನ್ನೂ ಓದಿ : 10 ವರ್ಷಗಳಿಂದ ಆಧಾರ್​ ಕಾರ್ಡ್ ಮಾಹಿತಿ ಅಪ್​ಡೇಟ್​ ಮಾಡಿಲ್ಲವೇ..? ಡಿ.14ರ ಒಳಗೆ ಉಚಿತವಾಗಿ ಮಾಡಿ

ಕನ್ಯಾ ರಾಶಿ ದಿನಭವಿಷ್ಯ
ಐಷಾರಾಮಿ ಜೀವನಕ್ಕಾಗಿ ಹಣವನ್ನು ವ್ಯಯ ಮಾಡುವಿರಿ. ಉದ್ಯೋಗಿಗಳು ಇಂದು ಹೆಚ್ಚು ಜವಾಬ್ದಾರಿಯಿಂದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಹಣವನ್ನು ಖರ್ಚು ಮಾಡುವ ಮೊದಲು ಎರಡೆರಡು ಬಾರಿ ಯೋಚಣೆ ಮಾಡುವುದು ಉತ್ತಮ. ತಂದೆ ಮಾರ್ಗದರ್ಶನದಿಂದ ನಿಮಗೆ ಇಂದು ಅನುಕೂಲಕರ. ನಿಮ್ಮ ನಿರೀಕ್ಷೆಯ ಕೆಲಸವೊಂದು ಇಂದು ಪೂರ್ಣಗೊಳ್ಳಲಿದೆ.

ತುಲಾ ರಾಶಿ ದಿನಭವಿಷ್ಯ
ಯಾವುದೇ ಯೋಜನೆಯಲ್ಲಿ ಹಣ ಹೂಡಿಕೆಗೆ ಮೊದಲು ಹಲವು ಬಾರಿ ಯೋಚಿಸಿ. ಪ್ರೇಮ ಜೀವನವು ಇಂದು ನಿಮಗೆ ಖಷಿಯನ್ನು ಕೊಡಲಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿದೆ. ಸ್ನೇಹಿತರ ಸಹಕಾರಿದಿಂದ ಕೆಲಸ ಕಾರ್ಯಗಳನ್ನು ನೀವು ಪೂರ್ಣಗೊಳಿಸುವಿರಿ. ದೂರದ ಬಂಧುಗಳ ಭೇಟಿಯಿಂದ ಮನಸಿಗೆ ಸಂತಸ ಮೂಡಲಿದೆ.

ಇದನ್ನೂ ಓದಿ : IPL 2024 Retentions : ಐಪಿಎಲ್‌ ಹರಾಜು, ಯಾವ ತಂಡಕ್ಕೆ ಯಾವ ಆಟಗಾರರು : ತಂಡಗಳು ಉಳಿಸಿಕೊಂಡ, ಬಿಡುಗಡೆ ಮಾಡಿದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ

ವೃಶ್ಚಿಕ ರಾಶಿ ದಿನಭವಿಷ್ಯ
ಆಧ್ಯಾತ್ಮಿಕ ಕ್ಷೇತ್ರಗಳ ಕಡೆಗೆ ನಿಮ್ಮ ಮನಸು ವಾಲಲಿದೆ. ಸಂಬಂಧಿಕರು ಕೆಲವೊಂದು ವಿಚಾರಗಳಲ್ಲಿ ನಿಮ್ಮ ಸಹಾಯಕ್ಕೆ ನಿಲ್ಲಲಿದ್ದಾರೆ. ಪ್ರೇಮ ಜೀವನವು ನಿಮಗೆ ಸಂತಸ ತರದಲಿದೆ. ಸಂಜೆಯ ವೇಳೆಗೆ ಧಾರ್ಮಿಕ ಕಾರ್ಯದಲ್ಲಿ ನೀವು ಪಾಲ್ಗೊಳ್ಳುವ ಸಾಧ್ಯತೆಯಿದೆ. ಹೊಂದಾಣಿಕೆಯ ಜೀವನದಿಂದ ನಿಮಗೆ ಅಧಿಕ ಲಾಭವಿದೆ.

ಧನಸ್ಸು ರಾಶಿ ದಿನಭವಿಷ್ಯ
ಮನಸ್ಸಿನಲ್ಲಿ ನಕರಾತ್ಮಕ ಯೋಚನೆಗಳು ಬರದಂತೆ ಎಚ್ಚರಿಕೆವಹಿಸಿ. ಯಾವುದೇ ಸಮಸ್ಯೆಯನ್ನು ನೀವು ಎಚ್ಚರಿಕೆಯಿಂದಲೇ ಎದುರಿಸಿ. ಬಾಕಿ ಉಳಿದಿರುವ ಕೆಲಸ ಕಾರ್ಯಗಳನ್ನು ನೀವು ಪೂರ್ಣಗೊಳಿಸುವಿರಿ. ಸಹೋದ್ಯೋಗಿಗಳ ಬೆಂಬಲ ದೊರೆಯಲಿದೆ. ಯಾರನ್ನೂ ನಂಬುವ ಮೊದಲು ಎಲ್ಲಾ ವಿಚಾರಗಳನ್ನು ಪರಿಗಣನೆ ಮಾಡಿ.

ಮಕರ ರಾಶಿ ದಿನಭವಿಷ್ಯ
ಇಂದು ಮಿಶ್ರ ಫಲಿತಾಂಶ ದೊರೆಯಲಿದೆ. ಅನಾವಶ್ಯಕ ಖರ್ಚುಗಳ ನಿಮಗೆ ತೊಂದರೆಯನ್ನು ನೀಡಲಿದೆ. ವಾಹನ ಚಲಾಯಿಸುವ ವೇಳೆಯಲ್ಲಿ ಎಚ್ಚರಿಕೆಯನ್ನು ವಹಿಸಿ. ಸಂಬಂಧಿಕರ ಜೊತೆಗೆ ವ್ಯವಹಾರ ಮಾಡುವ ವೇಳೆಯಲ್ಲಿ ಹಲವು ಬಾರಿ ಯೋಚಿಸಿ. ಯಾವುದೇ ವಿವಾದಗಳಿಗೆ ನೀವು ಎಡೆ ಮಾಡಿಕೊಡಬೇಡಿ.

ಇದನ್ನೂ ಓದಿ : ಮುಂಬೈ ಇಂಡಿಯನ್ಸ್‌ ಸೇರಿದ ಗುಜರಾತ್‌ ಟೈಟಾನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯ

ಕುಂಭ ರಾಶಿ ದಿನಭವಿಷ್ಯ
ಯಾವುದೇ ಕಾರಣಕ್ಕೂ ಆತುರದ ನಿರ್ಧಾರವನ್ನು ಕೈಗೊಳ್ಳಬೇಡಿ. ಮಕ್ಕಳ ವಿಚಾರದಲ್ಲಿಂದು ಶುಭ ಸುದ್ದಿಯೊಂದನ್ನು ಕೇಳುವಿರಿ. ಮನೆಯಲ್ಲಿ ಶುಭ ಕಾರ್ಯದ ಕುರಿತು ಚರ್ಚೆ ನಡೆಯಲಿದೆ. ಹೊಸ ಉದ್ಯಮದಲ್ಲಿ ಹೂಡಿಕೆ ಮಾಡಬೇಕಾದ್ರೆ ಹಲವು ಬಾರಿ ಯೋಚಿಸುವುದು ಒಳಿತು. ವ್ಯವಹಾರಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ದೂರ ಪ್ರಯಾಣವು ನಿಮಗೆ ಸಾಕಷ್ಟು ಲಾಭವನ್ನು ತಂದುಕೊಡಲಿದೆ.

ಮೀನ ರಾಶಿ ದಿನಭವಿಷ್ಯ
ಆರೋಗ್ಯದ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು. ಸಂಗಾತಿಯೊಂದಿಗೆ ಕೆಲವು ವ್ಯವಹಾರಗಳಲ್ಲಿ ನೀವು ಹೂಡಿಕೆ ಮಾಡುವ ಸಾಧ್ಯತೆಯಿದೆ. ಸಾಲ ಪಡೆಯಲು ಯೋಚಿಸುತ್ತಿದ್ದರೆ ಇಂದು ನಿಮಗೆ ಸುಲಭವಾಗಿ ಸಾಲ ಸೌಲಭ್ಯ ದೊರೆಯಲಿದೆ. ಬಾಕಿ ಇರುವ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳುತ್ತದೆ. ಹೊಂದಾಣಿಕೆಯಿಂದ ಕೆಲಸ ಕಾರ್ಯಗಳನ್ನು ಮಾಡುವುದರಿಂದ ಯಶಸ್ಸು ದೊರೆಯಲಿದೆ.

Horoscope Today 27 November 2023 karthika pournami 2023 Zodiac Sign Shiva yoga sidda Yoga

Comments are closed.