IPL 2024 Mumbai Indians Captain 2024: ಗುಜರಾತ್ ಟೈಟಾನ್ಸ್ (Gujarat Titans) ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ (Hardik Pandya) ಇದೀಗ ಮುಂಬೈ ಇಂಡಿಯನ್ಸ್ ತಂಡಕ್ಕೆ ವಾಪಾಸಾಗುತ್ತಿದ್ದಂತೆಯೇ ಮುಂಬೈ ಇಂಡಿಯನ್ಸ್ ತಂಡಕ್ಕೆ ನಾಯಕ(mumbai indians captain 2024) ಯಾರು ಅನ್ನೋ ಚರ್ಚೆ ಶುರುವಾಗಿದೆ. ಒಂದೆಡೆ ರೋಹಿತ್ ಶರ್ಮಾ (Rohit Sharma) ನಾಯಕರಾಗಿ ಮುಂದುವರಿಯಲಿದ್ದಾರೆ ಅಂದ್ರೆ, ಮತ್ತೊಂದೆಡೆಯಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಅನ್ನೋ ಮಾತು ಕೇಳಿಬರುತ್ತಿದೆ.

ಕಳೆದ ಎರಡು ವರ್ಷಗಳಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನೆಡೆಸಿದ್ದ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ಚೊಚ್ಚಲ ಪಂದ್ಯದಲ್ಲಿಯೇ ತಂಡಕ್ಕೆ ಐಪಿಎಲ್ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದರು. ಮಾತ್ರವಲ್ಲ ಕಳೆದ ವರ್ಷ ಐಪಿಎಲ್ ಟ್ರೋಪಿಯಲ್ಲಿ ಗುಜರಾತ್ ಟೈಟಾನ್ಸ್ ತಂಡ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಇದಕ್ಕೆ ಕಾರಣವಾಗಿದ್ದು ನಾಯಕ ಹಾರ್ದಿಕ್ ಪಾಂಡ್ಯ.
ಏಕದಿನ ವಿಶ್ವಕಪ್‌ನಲ್ಲಿ ಗಾಯಗೊಂಡು ಅರ್ಧಕ್ಕೆ ಪಂದ್ಯಾವಳಿಯಿಂದಲೇ ಹೊರ ನಡೆದರೂ ಕೂಡ ಐಪಿಎಲ್‌ಗೆ ಹಾರ್ದಿಕ್ ಪಾಂಡ್ಯಗೆ ಭರ್ಜರಿ ಬೇಡಿಕೆ ಬಂದಿದೆ. ಈ ಹಿಂದೆ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದ ಹಾರ್ದಿಕ್ ಪಾಂಡ್ಯ ಇದೀಗ ಮತ್ತೆ ಮುಂಬೈಗೆ ಮರಳಿದ್ದಾರೆ. ಕ್ಯಾಮರೂನ್ ಗ್ರೀನ್ ಅವರನ್ನು ಬೆಂಗಳೂರಿಗೆ ನೀಡುವ ಮೂಲಕ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಬರಮಾಡಿಕೊಂಡಿದೆ.
ಇದನ್ನೂ ಓದಿ : IPL 2024 : RCBಗೆ ವಿರಾಟ್ ಕೊಹ್ಲಿ ಗುಡ್‌ಬೈ ! ಸ್ಪೋಟಕ ಮಾಹಿತಿ ಬಾಯ್ಬಿಟ್ಟ ಕಿಂಗ್ ಕೊಹ್ಲಿ
ಹಾರ್ದಿಕ್ ಪಾಂಡ್ಯ ಆಗಮನ ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಸಂತಸವನ್ನು ತಂದಿದೆ. ಮೆಗಾ ಹರಾಜಿಗೆ ಒಂದು ವರ್ಷ ಬಾಕಿ ಇರುವಾಗಲೇ ಹಾರ್ದಿಕ್ ಪಾಂಡ್ಯವನ್ನು ತಂಡಕ್ಕೆ ಸೇರ್ಪಡೆಗೊಳಿಸಿರುವ ಕುತೂಹಲಕ್ಕೆ ಕಾರಣವಾಗಿದೆ. ಈ ನಡುವಲ್ಲೇ ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಶರ್ಮಾ ಮುನ್ನೆಡೆಸುತ್ತಾರಾ ಇಲ್ಲಾ ಹಾರ್ದಿಕ್ ಪಾಂಡ್ಯ ಹೆಗಲೇರುತ್ತಾ ಅನ್ನೋದು ಸ್ಪಷ್ಟವಾಗಿಲ್ಲ.
ರೋಹಿತ್ ಶರ್ಮಾಗೆ ಸದ್ಯ 36 ವರ್ಷ. ಹೀಗಾಗಿ ಸಾಕಷ್ಟು ವರ್ಷಗಳ ಕಾಲ ಐಪಿಎಲ್‌ನಲ್ಲಿ ಮುಂದುವರಿಕೆ ಆಗುವುದು ಕಷ್ಟಸಾಧ್ಯ. ಆದರೆ ಐಪಿಎಲ್ ದಾಖಲೆಗಳ ಮಟ್ಟಿಗೆ ರೋಹಿತ್ ಶರ್ಮಾ ಮಹೇಂದ್ರ ಸಿಂಗ್ ಧೋನಿಗೆ ಸರಿಸಾಟಿಯಾಗಬಲ್ಲರು. ವಿಶ್ವಕಪ್ ಸೋಲನ್ನು ಹೊರತು ಪಡಿಸಿದ್ರೆ ಐದು ಬಾರಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಐಪಿಎಲ್ ಪ್ರಶಸ್ತಿ ಗೆಲ್ಲಿಸಿ ಕೊಟ್ಟಿರುವುದು ಇದೇ ರೋಹಿತ್ ಶರ್ಮಾ.

ಹಾರ್ದಿಕ್ ಪಾಂಡ್ಯ ಕೂಡ ಇದೇ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಆಡಿ ಬೆಳೆದವರು. ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಒಟ್ಟು 158 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 87 ಪಂದ್ಯಗಳಲ್ಲಿ ಗೆಲುವು ಕಂಡಿದ್ರೆ, 67 ಪಂದ್ಯಗಳಲ್ಲಿ ಸೋಲನ್ನು ಕಂಡಿದ್ದಾರೆ. ಅದ್ರಲ್ಲೂ ಅತೀ ಹೆಚ್ಚು ಬಾರಿ ಐಪಿಎಲ್ ಟ್ರೋಫಿ ಗೆದ್ದ ನಾಯಕ ಅನ್ನೋ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ : ಐಪಿಎಲ್ 2024 : ಗುಜರಾತ್ ಟೈಟಾನ್ಸ್‌ಗೆ ಶುಭಮನ್ ಗಿಲ್ ನಾಯಕ
ರೋಹಿತ್ ಶರ್ಮಾ ಈಗಾಗಲೇ ಚುಟುಕು ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಜೊತೆಗೆ ಮುಂದಿನ ವರ್ಷ ನಡೆಯಲಿರುವ ಟಿ20 ಕ್ರಿಕೆಟ್ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಆಡುವುದು ಬಹುತೇಕ ಅನುಮಾನ. ಹಾರ್ದಿಕ್ ಪಾಂಡ್ಯ ಈ ಬಾರಿಯ ಐಪಿಎಲ್‌ನಲ್ಲಿ ಉಪನಾಯಕನಾಗಿ ಮುಂದಿನ ವರ್ಷದಿಂದ ಪೂರ್ಣ ಪ್ರಮಾಣದ ನಾಯಕನಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನೆಡೆಸುವ ಸಾಧ್ಯತೆಯಿದೆ.
ಮುಂದಿನ ವರ್ಷ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಈ ವೇಳೆಯಲ್ಲಿ ರೋಹಿತ್ ಶರ್ಮಾ ಅವರಿಗೆ ಮುಂಬೈ ಇಂಡಿಯನ್ಸ್ ತಂಡ ಕೋಕ್ ಕೊಡುವ ಸಾಧ್ಯತೆಯಿದೆ. ಭಾರತ ಚುಟುಕು ತಂಡವನ್ನು ಸದ್ಯ ಹಾರ್ದಿಕ್ ಪಾಂಡ್ಯ ಮುನ್ನೆಡೆಸುತ್ತಿದ್ದಾರೆ. ಹೀಗಾಗಿ ವಿಶ್ವಕಪ್‌ಗೂ ಅವರೇ ನಾಯಕರಾಗುತ್ತಾ ಅನ್ನೋದು ಇನ್ನೂ ಖಚಿತವಾಗಿಲ್ಲ.
ಇದನ್ನೂ ಓದಿ : ಆರ್‌ಸಿಬಿ ಅಲ್ಲ ಕನ್ನಡಿಗರ ತಂಡವಾಯ್ತು ಲಕ್ನೋ ಸೂಪರ್ ಜೈಂಟ್ಸ್ : ರಾಹುಲ್ ಜೊತೆ 4 ಮಂದಿ ಕರ್ನಾಟಕದ ಆಟಗಾರರು
ಐಪಿಎಲ್ ಸಾಧನೆಯನ್ನು ನೋಡಿದ್ರೆ ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ಮಣೆ ಹಾಕಿದ್ರೂ ಅಚ್ಚರಿಯಿಲ್ಲ. ಕಳೆದ ಮೂರು ಸೀಸನ್‌ನಲ್ಲಿಯೂ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್‌ನಲ್ಲಿ ಹೀನಾಯ ಪ್ರದರ್ಶನವನ್ನು ನೀಡಿದೆ. ಮುಂಬೈ ತಂಡ ಬ್ರ್ಯಾಂಡ್ ಹೆಚ್ಚಳವಾಗಬೇಕಾದ್ರೆ ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಬೇಕಾಗಿದೆ. ಇದಕ್ಕಾಗಿಯೇ ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಕರೆತರಲಾಗಿದೆ ಎನ್ನಲಾಗುತ್ತಿದೆ.
IPL 2024: Who will captain Mumbai Indians? Hardik Pandya or Rohit Sharma?