IPL 2024 : ಇಂಡಿಯನ್ ಪ್ರೀಮಿಯರ್ ಲೀಗ್‌ಗೆ (Indian Premier League 2024) ಈಗಾಗಲೇ ದಿನಾಂಕ ನಿಗದಿಯಾಗಿದೆ. ಈ ನಡುವಲ್ಲೇ ಲೋಕಸಭಾ ಚುನಾವಣೆ ಎದುರಾಗಲಿದೆ. ಚುನಾವಣೆ ಹಾಗೂ ಐಪಿಎಲ್‌ಗೆ ಘರ್ಷಣೆ ಆಗಲಿದ್ದು, ಐಪಿಎಲ್ ವೇಳಾಪಟ್ಟಿಯನ್ನು ಖಚಿತ ಪಡಿಸಲು ಬಿಸಿಸಿಐ ಲೋಕಸಭಾ ಚುನಾವಣೆಗಾಗಿ ಕಾಯುತ್ತಿದೆ. ಈ ನಡುವಲ್ಲೇ ಐಪಿಎಲ್ ಭಾರತದಲ್ಲೇ ನಡೆಯಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಭರವಸೆ ಕೊಟ್ಟಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ನಾನಾ ಕಾರಣಗಳಿಂದಾಗಿ ವಿದೇಶದಲ್ಲಿ ಆಯೋಜಿಸಲಾಗಿತ್ತು. ವರ್ಷಂಪ್ರತಿ ಎಪ್ರೀಲ್ – ಮೇ ತಿಂಗಳಲ್ಲೇ ಐಪಿಎಲ್ ಪಂದ್ಯಾವಳಿ ನಡೆಯಲಿದೆ. ಆದರೆ ಈ ಬಾರಿ ಐಪಿಎಲ್ ಹೊತ್ತಲೇ ಲೋಕಸಭಾ ಚುನಾವಣೆ ನಡೆಯಲಿದೆ. ಇದೇ ಕಾರಣದಿಂದಲೇ ಐಪಿಎಲ್ ವಿದೇಶಕ್ಕೆ ಶಿಫ್ಟ್ ಆಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇಡೀ ಐಪಿಎಲ್ ಪಂದ್ಯಾವಳಿಯನ್ನು ಭಾರತದಲ್ಲಿಯೇ ನಡೆಸೋದಾಗಿ ಭರವಸೆಯನ್ನು ನೀಡಿದ್ದಾರೆ. ಲೀಗ್ ಭಾರತದಲ್ಲಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಭಾರತ ಸರ್ಕಾರ, ಏಜೆನ್ಸಿಗಳೊಂದಿಗೆ ಕೆಲಸ ಮಾಡುತ್ತೇವೆ. ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲು ನಾವು ಕಾಯುತ್ತಿದ್ದೇವೆ ಎಂದು ಅರುಣ್ ಧುಮಾಲ್ ತಿಳಿಸಿದ್ದಾರೆ ಎಂದು ಐಎಎನ್‌ಎಸ್ ವರದಿ ಮಾಡಿದೆ.
ಇದನ್ನೂ ಓದಿ : WPL 2024 ಆರಂಭಕ್ಕೂ ಮೊದಲೇ RCB ತಂಡದಿಂದ ಹೊರಬಿದ್ದ ಸ್ಟಾರ್ ಆಲ್ ರೌಂಡರ್
ಲೋಕಸಭಾ ಚುನಾವಣೆ ಕನಿಷ್ಟ ಆರರಿಂದ ಏಳು ಹಂತಗಳಲ್ಲಿ ನಡೆಯಲಿದೆ. ಚುನಾವಣಾ ದಿನಾಂಕ ಪ್ರಕಟವಾದ ನಂತರ ಐಪಿಎಲ್ ವೇಳಾಪಟ್ಟಿ ಅಂತಿಮಗೊಳ್ಳುವ ಸಾಧ್ಯತೆಯಿದೆ. ಯಾವ ರಾಜ್ಯದಲ್ಲಿ ಯಾವ ದಿನಾಂಕದಂದು ಪಂದ್ಯಾವಳಿ ನಡೆಸಬೇಕು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಈ ನಡುವಲ್ಲೇ IPL 2024 ಮಾರ್ಚ್ 22 ಆರಂಭವಾಗುವ ನಿರೀಕ್ಷೆಯಿದೆ.
ಐಪಿಎಲ್ ಪಂದ್ಯಾವಳಿ ಹಾಗೂ ಲೋಕಸಭಾ ಚುನಾವಣೆ ಒಟ್ಟಿಗೆ ಎದುರಾದ್ರೆ, ಚುನಾವಣಾ ಕರ್ತವ್ಯದಲ್ಲಿರುವ ಪೊಲೀಸರಿಗೆ ಐಪಿಎಲ್‌ಗೆ ರಕ್ಷಣೆ ನೀಡಲು ಕಷ್ಟಕರವಾಗಲಿದೆ. ಇದನ್ನು ಗಮನದಲ್ಲಿ ಇರಿಸಿಕೊಂಡು ಐಪಿಎಲ್ ವೇಳಾಪಟ್ಟಿ ಸಿದ್ದಪಡಿಸಬೇಕಾಗಿದೆ. ಅಷ್ಟೇ ಅಲ್ಲದೇ ಚುನಾವಣೆಯ ದಿನ, ಮುನ್ನಾ ದಿನದಂದು ಪಂದ್ಯಗಳು ನಡೆಯೋದು ಅನುಮಾನ.
ಇದನ್ನೂ ಓದಿ : 200, 200, 200…! ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆಯ ಮೇಲೆ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಭಾರತದಲ್ಲಿ ಐಪಿಎಲ್ ಪಂದ್ಯಾವಳಿ ನಡೆಯುತ್ತಿರೋದು ಕ್ರಿಕೆಟ್ ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಚುನಾವಣಾ ಹಂತಗಳನ್ನು ಆಧರಿಸಿ ಈ ಬಾರಿ ಐಪಿಎಲ್ ಸ್ಥಳ ನಿರ್ಧಾರವಾಗಲಿದೆ. ಅದ್ರಲ್ಲೂ ಐಪಿಎಲ್ ಪಂದ್ಯಗಳು ತಂಡಗಳ ತವರು ಮೈದಾನದಲ್ಲಿ ನಡೆಯಲಿದೆ ಅನ್ನೋದು ಅನುಮಾನ ಎನ್ನಲಾಗುತ್ತಿದೆ.

ಈ ಬಾರಿಯೂ ಮಾರ್ಚ್ ಅಂತ್ಯದಲ್ಲಿ ಆರಂಭಗೊಳ್ಳಲಿದ್ದು, ಮೇ ವರೆಗೆ ಪಂದ್ಯಾವಳಿ ನಡೆಯುವ ಸಾಧ್ಯತೆಯಿದೆ. ಈ ಬಾರಿ ಹತ್ತು ತಂಡಗಳು ಬಲಿಷ್ಠವಾಗಿದ್ದು, ಕೆಲವೊಂದು ತಂಡಗಳಲ್ಲಿ ನಾಯಕತ್ವ ಬದಲಾವಣೆಯಾಗಿದೆ. ಹೀಗಾಗಿ ಘಟಾನುಘಟಿ ನಾಯಕರ ನಡುವಿನ ಪೈಪೋಟಿ ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ.
ಇದನ್ನೂ ಓದಿ : IPL 2024: ಆರ್‌ಸಿಬಿ ತಂಡಕ್ಕೆ ರೋಹಿತ್ ಶರ್ಮಾ, ಸೂರ್ಯಕುಮಾರ್, ಜಸ್ಪ್ರೀತ್ ಬುಮ್ರಾ ?
IPL 2024 will be held in India IPL President Arun Dhumal Indian Premier League