ಭಾನುವಾರ, ಏಪ್ರಿಲ್ 27, 2025
HomeSportsCricketರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸೇರ್ತಾರಾ ಈ ಡೆತ್‌ ಬೌಲರ್‌

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸೇರ್ತಾರಾ ಈ ಡೆತ್‌ ಬೌಲರ್‌

- Advertisement -

IPL Auction 2023 : ಈ ಸಲ್ಲ ಕಪ್ ನಮ್ದೆ ಅನ್ನುತ್ತಲೇ ಕಳೆದ 16 ವರ್ಷಗಳ ಕಾಲ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡ ಮತ್ತೆ ಐಪಿಎಲ್‌ಗೆ ಸಜ್ಜಾಗುತ್ತಿದೆ. ಪ್ರತೀ ಬಾರಿಯೂ ಆರ್‌ಸಿಬಿಗೆ ಬೌಲಿಂಗ್‌ ಕೈ ಕೊಡ್ತಾ ಇದ್ದು, ಈ ಬಾರಿಯ ಮಿನಿ ಹರಾಜಿನಲ್ಲಿ ಡೆತ್‌ ಬೌಲರ್‌ಗಳ ಖರೀದಿಗೆ ಸಿದ್ದತೆ ನಡೆಸಿದೆ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈ ಬಾರಿ ಕೆಲವೊಂದು ಕೆಟ್ಟ ನಿರ್ಧಾರಗಳನ್ನು ಕೈಗೊಂಡಿದೆ. ಆಂಡಿ ಫ್ಲವರ್ ಅಧಿಕಾರ ವಹಿಸಿಕೊಂಡ ನಂತರ ವೇಯ್ನ್‌ ಪಾರ್ನೆಲ್‌, ಡೇವಿಡ್‌ ವಿಲ್ಲಿ, ಜೋಶ್‌ ಹ್ಯಾಜಲ್‌ವುಡ್‌, ಹರ್ಷಲ್‌ ಪಟೇಲ್‌, ವನಿಂದು ಹಸರಂಗ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ಜೊತೆಗೆ ಶಹಬಾಜ್‌ ಅಹ್ಮದ್‌ ಹಾಗೂ ಮಯಾಂಕ್‌ ದಾಗರ್‌ ಅವರನ್ನು ಖರೀದಿಸಿದೆ.

ಐಪಿಎಲ್ 2023ರಲ್ಲಿ ಒಟ್ಟು 11 ಮಂದಿ ಆಟಗಾರರನ್ನು ಬಿಡುಗಡೆ ಮಾಡಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಬ್ಯಾಟಿಂಗ್‌ ಶಕ್ತಿಯಾಗಿದ್ದು, ಕ್ಯಾಮರೂನ್‌ ಗ್ರೀನ್‌ ಮುಂಬೈ ಇಂಡಿಯನ್ಸ್‌ ತಂಡದಿಂದ ಖರೀದಿ ಮಾಡಿದೆ. ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಆರಂಭಿಕರಾಗಿ ರಜತ್ ಪಾಟಿದಾರ್ 3 ನೇ ಸ್ಥಾನದಲ್ಲಿದ್ದಾರೆ. ಕ್ಯಾಮರೂನ್ ಗ್ರೀನ್ 4 ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು 5 ನೇ ಸ್ಥಾನದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು 6 ನೇ ಸ್ಥಾನದಲ್ಲಿ ವಿಲ್ ಜಾಕ್ಸ್ ಅಥವಾ ಅನುಜ್ ರಾವತ್, ಮ್ಯಾಚ್‌ ಫಿನಿಷರ್‌ ಆಗಿ ದಿನೇಶ್‌ ಕಾರ್ತಿಕ್‌ ತಂಡಕ್ಕೆ ನೆರವಾಗಲಿದ್ದಾರೆ.

IPL Auction 2023 this Death bowler joins the Royal Challengers Bangalore team IPL 2024
Image Credit to Original Source

ಇದನ್ನೂ ಓದಿ : IPL 2024 Auction : ಐಪಿಎಲ್‌ 2024 ಯಾವ ತಂಡಕ್ಕೆ ಯಾರು ನಾಯಕರು ? 

ಬ್ಯಾಟಿಂಗ್‌ ಬಲಿಷ್ಠವಾಗಿದ್ದು, ಈ ಬಾರಿಯ ಹರಾಜಿನಲ್ಲಿ ಬೌಲಿಂಗ್‌ ವಿಭಾಗವನ್ನು ಬಲ ಪಡಿಸಲು ಆರ್‌ಸಿಬಿ ಮುಂದಾಗಿದೆ. ಜೋಶ್‌ ಹ್ಯಾಜಲ್‌ವುಡ್‌ ಇದೇ ಕಾರಣಕ್ಕೆ ದೇಶ, ವಿದೇಶದ ಬೌಲರ್‌ಗಳನ್ನು ತನ್ನತ್ತ ಸೆಳೆಯಲು ಆರ್‌ಸಿಬಿ ತಂತ್ರ ರೂಪಿಸಿದೆ. ಅದ್ರಲ್ಲೂ ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮ್ಮಿನ್ಸ್‌, ಶಿವಂ ಮಾವಿ ಹೆಸರುಗಳು ಮುಂಚೂಣಿಯಲ್ಲಿವೆ.

ಮಿಚೆಲ್ ಸ್ಟಾರ್ಕ್: 2014 ಮತ್ತು 2015 ರಲ್ಲಿ ಆರ್‌ಸಿಬಿ ಆಟಗಾರ, ಮಿಚೆಲ್ ಸ್ಟಾರ್ಕ್ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಬೌಲ್‌ ಸ್ವಿಂಗ್‌ ಮಾಡುವ ತಾಕತ್ತು ಹೊಂದಿದ್ದಾರೆ. ಯಾರ್ಕರ್‌ ಮೂಲಕ ಎದುರಾಳಿಯನ್ನು ಕಟ್ಟಿ ಹಾಕಲಿದ್ದಾರೆ. ಆಸ್ಟ್ರೇಲಿಯಾ ವೇಗಿ ಆರ್‌ಸಿಬಿ ತಂಡ ಪ್ರಮುಖ ಸ್ಟಾರ್‌ ಆಗಲಿದ್ದಾರೆ.

ಪ್ಯಾಟ್ ಕಮ್ಮಿನ್ಸ್: ಆರ್‌ಸಿಬಿಗೆ ಮಿಚೆಲ್ ಸ್ಟಾರ್ಕ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗದೇ ಇದ್ದರೆ, ಪ್ಯಾಟ್ ಕಮಿನ್ಸ್‌ಗೆ ಖರೀದಿಯ ಕಡೆಗೆ ಗಮನ ಹರಿಸುವ ಸಾಧ್ಯತೆಯಿದೆ. ಆಸ್ಟ್ರೇಲಿಯಾ ಟೆಸ್ಟ್‌ ಹಾಗೂ ಏಕದಿನ ತಂಡ ನಾಯಕನಾಗಿರುವ ಪ್ಯಾಟ್‌ ಕಮ್ಮಿನ್ಸ್‌ ವಿಶ್ವಕಪ್‌ ಐಪಿಎಲ್‌ನಲ್ಲಿಯೂ ಅತ್ಯುತ್ತಮ ಸಾಧನೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ : ರೋಹಿತ್‌ ಶರ್ಮಾ ಬದಲು ಹಾರ್ದಿಕ್ ಪಾಂಡ್ಯ ನಾಯಕ : 4 ಲಕ್ಷ ಫಾಲೋವರ್ಸ್ ಕಳೆದುಕೊಂಡ ಮುಂಬೈ ಇಂಡಿಯನ್ಸ್

ಶಿವಂ ಮಾವಿ : ಕಳೆದ ಸೀಸನ್ ಪೂರ್ತಿ ಬೆಂಚ್ ಕಾದಿದ್ದ ಶಿವಂ ಮಾವಿ, ಪುನರಾಗಮನದ ನಿರೀಕ್ಷೆಯಲ್ಲಿದ್ದಾರೆ. ಆರ್‌ಸಿಬಿ ತಂಡದಲ್ಲಿ ಅತ್ಯುತ್ತಮ ಅವಕಾಶವಿದೆ. ಐಪಿಎಲ್‌ನಲ್ಲಿ ಅತ್ಯುತ್ತಮ ಸಾಧನೆಯನ್ನು ತೋರಿಸಿದ್ರೆ ಟಿ 20 ವಿಶ್ವಕಪ್‌ಗೆ ಆಯ್ಕೆಗಾರರ ಗಮನ ಸೆಳೆಯುವ ಸಾಧ್ಯತೆಯಿದೆ.

ಆದಿಲ್ ರಶೀದ್: ಸ್ಪಿನ್ನರ್‌ಗಳಲ್ಲಿ ಆದಿಲ್ ರಶೀದ್ ಸಂಭಾವ್ಯ ಟಾಪ್ ಪಿಕ್ ಆಗಿರಬಹುದು. ರಶೀದ್ ನಿರೀಕ್ಷೆಗೆ ತಕ್ಕಂತೆ ಬದುಕಲು ವಿಫಲವಾಗಿದ್ದರೂ, ಇಂಗ್ಲೆಂಡ್ ಲೆಗ್ ಸ್ಪಿನ್ನರ್ ವನಿಂದು ಹಸರಂಗ ಅವರಿಗೆ ಬದಲಿ ಆಟಗಾರ ಆಗಬಹುದಾಗಿದೆ.

ಶ್ರೇಯಸ್ ಗೋಪಾಲ್: ಕರ್ನಾಟಕದ ಲೆಗ್‌ ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ ಈ ಬಾರಿ ಆರ್‌ಸಿಬಿ ತಂಡಕ್ಕೆ ಅತ್ಯುತ್ತಮ ಆಯ್ಕೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗದಲ್ಲಿ ತಂಡಕ್ಕೆ ನೆರವಾಗುವ ತಾತಕ್ಕು ಹೊಂದಿದ್ದಾರೆ. ಈಗಾಗಲೇ ದೇಶೀಯ ಕ್ರಿಕೆಟ್ ನಲ್ಲಿಯೂ ಉತ್ತಮ ಸಾಧನೆಯನ್ನು ಮಾಡಿದ್ದಾರೆ.

IPL Auction 2023 this Death bowler joins the Royal Challengers Bangalore team IPL 2024
Image Credit to Original Source

ಇದನ್ನೂ ಓದಿ : IPL 2024 ಹರಾಜು : ರೋಹಿತ್‌ ಶರ್ಮಾ ಖರೀದಿಗೆ ಮುಂಬೈ ಇಂಡಿಯನ್ಸ್‌ ಸಂಪರ್ಕಿಸಿದ ಡೆಲ್ಲಿ ಕ್ಯಾಪಿಟಲ್ಸ್‌

ಇಷ್ಟೇ ಅಲ್ಲದೇ ದಕ್ಷಿಣ ಆಫ್ರಿಕಾದ ಜೆರಾಲ್ಡ್‌ ಕೊಯೆಟ್ಜಿ ವಿಶ್ವಕಪ್‌ನ ಉತ್ತಮ ಪ್ರದರ್ಶನ ಈ ಬಾರಿ ಆರ್‌ಸಿಬಿ ತಂಡ ಸೇರ್ಪಡೆಯಾಗುವ ಸಾಧ್ಯತೆಯಿದೆ. ಇನ್ನು ಲಾಕಿ ಫರ್ಗುಸನ್, ಅಫ್ಘಾನಿಸ್ತಾನದ ಟ್ವೀಕರ್ ಮುಜೀಬ್ ಉರ್ ರೆಹಮಾನ್ ಮೇಲೆ ಕೂಡ ಆರ್‌ಸಿಬಿ ಕಣ್ಣಿಟ್ಟಿದೆ. ಬೌಲಿಂಗ್‌ ಬಲ ಬಲಿಷ್ಠವಾದ್ರೆ ಆರ್‌ಸಿಬಿ ಈ ಬಾರಿ ಕಪ್‌ ನಮ್ಮದೇ ಎನ್ನಬಹುದು.

ಉಳಿದ ಪರ್ಸ್: ರೂ 23.25 ಕೋಟಿ
ತುಂಬಲು ಸ್ಲಾಟ್‌ಗಳು: 6
ಸಾಗರೋತ್ತರ ಆಟಗಾರರು: 3

ಆರ್‌ಸಿಬಿ ಉಳಿಸಿಕೊಂಡಿರುವ ಆಟಗಾರರು: ಫಾಫ್ ಡು ಪ್ಲೆಸಿಸ್ (ಸಿ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ವಿಲ್ ಜಾಕ್ಸ್, ಮಹಿಪಾಲ್ ಲೊಮೊರೊರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್‌ಕುಮಾರ್, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್ ರೀಸ್ ಟೋಪ್ಲಿ, ಹಿಮಾಂಶು ಶರ್ಮಾ ಮತ್ತು ರಾಜನ್ ಕುಮಾರ್.

ಆರ್‌ಸಿಬಿ ಬಿಡುಗಡೆಗೊಂಡ ಆಟಗಾರರು: ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ದಾರ್ಥ್ ಕೌಲ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ ಮತ್ತು ಕೇದಾರ್ ಜಾಧವ್.

ಆಟಗಾರರು ವ್ಯಾಪಾರ ಮಾಡಿದರು:

ಶಹಬಾಜ್ ಅಹ್ಮದ್‌ಗಾಗಿ ಮಯಾಂಕ್ ದಾಗರ್ (ಸನ್‌ರೈಸರ್ಸ್ ಮತ್ತು ಹೈದ್ರಾಬಾದ್‌ ನಿಂದ ಖರೀದಿ)
ಕ್ಯಾಮರೂನ್ ಗ್ರೀನ್ (ಮುಂಬೈ ಇಂಡಿಯನ್ಸ್‌ನಿಂದ)

IPL Auction 2023 : this Death bowler joins the Royal Challengers Bangalore team IPL 2024

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular