chennai super kings captaincy : ಸಿಎಸ್​ಕೆ ನಾಯಕತ್ವವನ್ನು ಧೋನಿಗೆ ಮರಳಿ ನೀಡಿದ ರವೀಂದ್ರ ಜಡೇಜಾ

chennai super kings captaincy: ಪ್ರತಿ ಸೀಸನ್​​ನ ಐಪಿಎಲ್​ನಲ್ಲಿ ಎದುರಾಳಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದಂತಹ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಯಾಕೋ ಈ ವರ್ಷದ ಸೀಸನ್​ನಲ್ಲಿ ಕಳಪೆ ಫಾರ್ಮ್​ನಲ್ಲಿದೆ. ಈ ಬಾರಿಯ ಸೀಸನ್​ನಲ್ಲಿ ಮಹೇಂದ್ರ ಸಿಂಗ್ ಧೋನಿ ತಂಡವನ್ನು ಮುನ್ನಡೆಸುತ್ತಿಲ್ಲ. ಬದಲಾಗಿ ರವೀಂದ್ರ ಜಡೇಜಾ ತಂಡದ ನಾಯಕತ್ವವನ್ನು ವಹಿಸಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ 2022ರ ಸೀಸನ್​ನ ಮಧ್ಯದಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್​ ತಂಡದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ.


ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕನ ಸ್ಥಾನದಿಂದ ರವೀಂದ್ರ ಜಡೇಜಾ ಕೆಳಗಿಳಿದಿದ್ದು ಈ ಸ್ಥಾನವನ್ನು ವಾಪಸ್​ ಮಹೇಂದ್ರ ಸಿಂಗ್​ ಧೋನಿಗೆ ಹಸ್ತಾಂತರಿಸಿದ್ದಾರೆ. ಈ ಬಾರಿಯ ಸೀಸನ್​ನಲ್ಲಿ ತಂಡದ ಹೀನಾಯ ಪ್ರದರ್ಶನ ಕಂಡು ಜಡೇಜಾ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಚೆನ್ನೈ ಸೂಪರ್​ ಕಿಂಗ್ಸ್​​ ತಂಡವು ಈ ಬಾರಿಯ ಸೀಸನ್​ನಲ್ಲಿ ಆಡಿದ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.


ರವೀಂದ್ರ ಜಡೇಜಾ ನಾಯಕತ್ವದಲ್ಲಿ ತಂಡವು ಕಳಪೆ ಫಾರ್ಮ್​ನಲ್ಲಿ ಇದ್ದದ್ದು ಒಂದೆಡೆಯಾದರೆ ಸ್ವತಃ ಜಡೇಜಾ ಕೂಡ ಫಾರ್ಮ್​ನಲ್ಲಿ ಇರಲಿಲ್ಲ. ಹೀಗಾಗಿ ತಮ್ಮ ಆಟದ ಮೇಲೆ ಹೆಚ್ಚಿನ ಗಮನ ನೀಡುವ ಸಲುವಾಗಿ ರವೀಂದ್ರ ಜಡೇಜಾ ಈ ಸ್ಥಾನವನ್ನು ತ್ಯಜಿಸಿದ್ದಾರೆ ಎನ್ನಲಾಗಿದೆ. ರವೀಂದ್ರ ಜಡೇಜಾ ತಮ್ಮ ಆಟದ ಮೇಲೆ ಹೆಚ್ಚಿನ ಗಮನ ನೀಡಲಿ ಎಂದು ಮಹೇಂದ್ರ ಸಿಂಗ್​ ಧೋನಿ ಮತ್ತೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕತ್ವವನ್ನು ವಹಿಸಲು ಒಪ್ಪಿಕೊಂಡಿದ್ದಾರೆ ಎಂದು ಸಿಎಸ್​ಕೆ ಟ್ವಿಟರ್​ ಖಾತೆಯಲ್ಲಿ ಅಧಿಕೃತ ಮಾಹಿತಿ ನೀಡಲಾಗಿದೆ.


ಮಹೇಂದ್ರ ಸಿಂಗ್​ ಧೋನಿಯನ್ನು ಬಿಟ್ಟರೆ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಸುರೇಶ್​ ರೈನಾ ಮುನ್ನಡೆಸುತ್ತಿದ್ದರು. ಆದರೆ ಈ ಬಾರಿ ರೈನಾ ಐಪಿಎಲ್​ನಿಂದ ಹೊರಗಿದ್ದಾರೆ. 2012ರಿಂದ ಸಿಎಸ್​ಕೆ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ರವೀಂದ್ರ ಜಡೆಜಾ ಈ ಬಾರಿ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಧೋನಿ ನಾಯಕತ್ವದಲ್ಲಿ ಸಿಎಸ್​ಕೆ ತಂಡವು 2 ಬಾರಿ ಐಪಿಎಲ್​ ಕಪ್​ ಗೆದ್ದಿದೆ. ಆದರೆ ಈ ಬಾರಿ ಸ್ವತಃ ಧೋನಿ ನಾಯಕತ್ವವನ್ನು ಜಡೇಜಾ ಹೆಗಲಿಗೆ ನೀಡಿದ್ದರು. ಆದರೆ ಇದೀಗ ಸಿಎಸ್​ಕೆ ತಂಡದಲ್ಲಿ ಈ ಮಹತ್ವದ ಬೆಳವಣಿಗೆಯಾಗಿದೆ.

ಇದನ್ನು ಓದಿ : acid attack : ಆಸಿಡ್‌ ಪ್ರೇಮಿ ನಾಗೇಶ್‌ ಬಂಧನಕ್ಕೆ ಮೂರು ತಂಡ : #hangnagesh ಅಭಿಯಾನಕ್ಕೆ ಬಾರೀ ಬೆಂಬಲ

ಇದನ್ನೂ ಓದಿ : ice cream box : ಕಣ್ಣಾ ಮುಚ್ಚಾಲೆ ಆಡುತ್ತಾ ಐಸ್​ಕ್ರೀಂ ಬಾಕ್ಸಿನಲ್ಲಿ ಅವಿತುಕೊಳ್ಳಲು ಹೋದ ಬಾಲಕಿಯರು ಸಾವು

ipl news ravindra jadeja handover chennai super kings captaincy to ms dhoni

Comments are closed.