Jaipur Pink Panthers : 2ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಜೈಪುರ

ಮುಂಬೈ: ಚೊಚ್ಚಲ ಆವೃತ್ತಿಯ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ಪಡೆ (Jaipur Pink Panthers), ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಟೂರ್ನಿಯಲ್ಲಿ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿದೆ.

ಮುಂಬೈನ ‘ಡೋಮ್ NSCI ಸರ್ದಾರ್ ವಲ್ಲಭಾಯ್ ಪಟೇಲ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಸುನೀಲ್ ಕುಮಾರ್ ನಾಯಕತ್ವದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ, ಪುಣೇರಿ ಪಲ್ಟನ್ ತಂಡವನ್ನು 33-29ರ ಅಂತರದಲ್ಲಿ ರೋಚಕವಾಗಿ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿತು.

ಫೈನಲ್ ಪಂದ್ಯದ ಆರಂಭದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ಪ್ರದರ್ಶಿಸಿದವು. ಆದರೆ ಕೊನೆಯ ಕ್ಷಣದ ಒತ್ತಡವನ್ನು ಮೆಟ್ಟಿ ನಿಂತ ಜೈಪುರ ಪಿಂಕ್ ಪ್ಯಾಂಥರ್ಸ್ 4 ಅಂಕಗಳಿಂದ ಪುಣೇರಿ ಪಲ್ಟನ್ ಸವಾಲನ್ನು ಮೆಟ್ಟಿ ನಿಂತು 8 ವರ್ಷಗಳ ನಂತರ ಮತ್ತೆ ಚಾಂಪಿಯನ್ ಕಿರೀಟ ತನ್ನದಾಗಿಸಿಕೊಂಡಿತು.

ಇದನ್ನೂ ಓದಿ : Pro kabaddi league: ಸೆಮಿಫೈನಲ್ ಪ್ರವೇಶಿಸಿದ ಬೆಂಗಳೂರು ಬುಲ್ಸ್, ತಮಿಳ್ ತಲೈವಾಸ್

2014ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಟೂರ್ನಿಯಲ್ಲಿ ಜೈಪುರ ಪ್ರಶಸ್ತಿ ಗೆದ್ದಿತ್ತು. ಇದೇ ಮೈದಾನದಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಯು ಮುಂಬಾ ತಂಡವನ್ನು ಮಣಿಸಿದ್ದ ಜೈಪುರ ಮೊದಲ ಬಾರಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತ್ತು. ಇದೀಗ ಮಹಾರಾಷ್ಟ್ರದ ಮತ್ತೊಂದು ಫ್ರಾಂಚೈಸಿ ತಂಡವಾಗಿರುವ ಪುಣೇರಿ ಪಲ್ಟನ್ ಪಡೆಯನ್ನು ಸೋಲಿಸಿ 2ನೇ ಬಾರಿ ಜೈಪುರ ಪ್ರಶಸ್ತಿ ಗೆದ್ದಿದೆ.

ಇದನ್ನೂ ಓದಿ : Pro Kabaddi League final: ಕನ್ನಡಿಗನ ತಂಡಕ್ಕೆ ಜೈಪುರ ಸವಾಲ್, ಇಲ್ಲಿದೆ ಫೈನಲ್ ಪಂದ್ಯದ ಕಂಪ್ಲೀಟ್ ಮಾಹಿತಿ

ಇದನ್ನೂ ಓದಿ : Bengaluru Bulls out: ಸೆಮಿಫೈನಲ್’ನಲ್ಲಿ ಸೋಲು ಕಂಡ ಬುಲ್ಸ್, ನಾಳೆ ಜೈಪುರ, ಪಲ್ಟನ್ ಮಧ್ಯೆ ಫೈನಲ್

ಇದನ್ನೂ ಓದಿ : Pro Kabaddi semifinals: ಬೆಂಗಳೂರು ಬುಲ್ಸ್ Vs ಪ್ಯಾಂಥರ್ಸ್, ಪಲ್ಟನ್ Vs ತಲೈವಾಸ್.. ಸೆಮಿಫೈನಲ್ ಪಂದ್ಯಗಳ ಕಂಪ್ಲೀಟ್ ಡೀಟೇಲ್ಸ್

ಕನ್ನಡಿಗ ಬಿ.ಸಿ ರಮೇಶ್ ಗರಡಿಯಲ್ಲಿ ಪಳಗಿರುಲ ಪುಣೇರಿ ಪಲ್ಟನ್ ಬಳಗ ಮೊದಲ ಬಾರಿ ಫೈನಲ್ ತಲುಪಿತ್ತು. ಆದರೆ ಫೈನಲ್’ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೋಲು ಕಾಣುವ ಮೂಲಕ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.

Jaipur Pink Panthers : Jaipur became champions for the 2nd time

Comments are closed.