KL Rahul‌ : ಟೀಮ್ ಇಂಡಿಯಾದಿಂದ ಹೊರ ಬಿದ್ದ ಕೆ.ಎಲ್.ರಾಹುಲ್ ಬಾವುಕ ಸಂದೇಶ

ಬೆಂಗಳೂರು : ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ರೆ ಕನ್ನಡಿಗ ಕೆ.ಎಲ್ ರಾಹುಲ್ ( KL Rahul‌ ) ದಕ್ಷಿಣ ಆಫ್ರಿಕಾ (India Vs South Africa T20 Series) ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಬೇಕಿತ್ತು.

ರಾಹುಲ್ ನಾಯಕತ್ವದಲ್ಲಿ ಭಾರತ ತಂಡ ಸರಣಿಗೆ ಸಜ್ಜಾಗಿ ನಿಂತಿತ್ತು. ತವರು ನೆಲದಲ್ಲಿ ಇದೇ ಮೊದಲ ಬಾರಿ ಟೀಮ್ ಇಂಡಿಯಾವನ್ನು ಮುನ್ನಡೆಸಲು ರಾಹುಲ್ ಉತ್ಸುಕರಾಗಿದ್ದರು. ಆದರೆ ಮೊದಲ ಪಂದ್ಯ ಆರಂಭಕ್ಕೂ 24 ಗಂಟೆಗಳಿಗೆ ಮೊದಲು ತೊಡೆ ಸಂದು ಗಾಯ(Groin Injury)ದ ಕಾರಣ ಕೆ.ಎಲ್ ರಾಹುಲ್ ಇಡೀ ಸರಣಿಯಿಂದಲೇ ಹೊರ ಬೀಳುವಂತಾಗಿತ್ತು. ರಾಹುಲ್ ಅಲಭ್ಯತೆಯಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.

ಇತ್ತ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಕೆ.ಎಲ್ ರಾಹುಲ್ ತಮ್ಮ ಅಭಿಮಾನಿಗಳಿಗಾಗಿ ಟ್ವಿಟರ್”ನಲ್ಲಿ ಭಾವುಕ ಸಂದೇಶವೊಂದನ್ನು ಬರೆದಿದ್ದಾರೆ.

“ಇದನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ. ಆದರೆ ನಾನು ಇವತ್ತು ಮತ್ತೊಂದು ಸವಾಲನ್ನು ಆರಂಭಿಸಿದ್ದೇನೆ. ತವರು ನೆಲದಲ್ಲಿ ಮೊದಲ ಬಾರಿ ಭಾರತ ತಂಡವನ್ನು ಮುನ್ನಡೆಸಲು ಸಾಧ್ಯವಾಗದಿರುವುದು ತೀವ್ರ ಬೇಸರ ತರಿಸಿದೆ. ಆದರೆ ಟೀಮ್ ಇಂಡಿಯಾ ಆಟಗಾರರಿನೆ ನನ್ನ ಕಡೆಯಿಂದ ಸಂಪೂರ್ಣ ಬೆಂಬಲವಿದೆ. ನಿಮ್ಮೆಲ್ಲಾ ಪ್ರೋತ್ಸಾಹಕ್ಕೆ ನನ್ನ ಹೃದಯಸ್ಪರ್ಶಿ ಧನ್ಯವಾದಗಳು. ಟಿ20 ಸರಣಿಗೆ ರಿಷಭ್ ಪಂತ್ ಮತ್ತು ತಂಡಕ್ಕೆ ಗುಡ್ ಲಕ್” ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಗಾಯಾಳು ರಾಹುಲ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರಕ್ಕೆ ಹಾಜರಾಗಲಿದ್ದು, ಇಂಗ್ಲೆಂಡ್ ಪ್ರವಾಸದ ವೇಳೆ ಟೀಮ್ ಇಂಡಿಯಾಗೆ ವಾಪಸ್ಸಾಗಲಿದ್ದಾರೆ.

ಇದನ್ನೂ ಓದಿ : ಕನ್ನಡಿಗ ಕೆ.ಎಲ್ ರಾಹುಲ್‌ಗೆ ಇದೆಂಥಾ ದೌರ್ಭಾಗ್ಯ..? ದಕ್ಷಿಣ ಆಫ್ರಿಕಾ ಸರಣಿಯಿಂದ ಔಟ್‌

ಇದನ್ನೂ ಓದಿ : Virat Kohli New Record : 10 ವರ್ಷಗಳಲ್ಲಿ 20 ಸಾವಿರ ರನ್ ; ಶತಕ “ಬರ”ದೇ ಇದ್ರೂ ಕೊಹ್ಲಿಯೇ ಕಿಂಗ್

KL Rahul‌ finally break silence after out from India vs South Africa T20 series

Comments are closed.