Green Jobs : ಗ್ರೀನ್‌ ಜಾಬ್ಸ್‌ ಎಂದರೇನು? ವಿಶ್ವ ಪರಿಸರ ದಿನದಂದು ಪ್ರಧಾನಿಯವರು ಭಾಷಣದಲ್ಲಿ ಉಲ್ಲೇಖಿಸಿದ್ದೇಕೆ?

ವಿಶ್ವ ಪರಿಸರ ದಿನವನ್ನು(World Environment Day) ಆಚರಿಸುವ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಹವಾಮಾನ ಬದಲಾವಣೆಯನ್ನು(Climate change) ಎದುರಿಸಲು ಭಾರತದ ನಿರಂತರ ಪ್ರಯತ್ನಗಳ ಬಗ್ಗೆ ಮಾತನಾಡಿದರು. ತಮ್ಮ ಭಾಷಣದ ಸಮಯದಲ್ಲಿ, ಅವರು ಗ್ರೀನ್‌ ಜಾಬ್‌(Green Jobs) (ಹಸಿರು ಉದ್ಯೋಗ) ಗಳನ್ನು ಸೃಷ್ಟಿಸಲು ಭಾರತದ ಪ್ರಯತ್ನಗಳನ್ನು ಪ್ರಸ್ತಾಪಿಸಿದರು. ‘ಭಾರತದ ಈ ಪ್ರಯತ್ನಗಳಲ್ಲಿ (ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವಲ್ಲಿ) ಮತ್ತೊಂದು ಅಂಶವಿದೆ, ಅದು ಗ್ರೀನ್‌ ಜಾಬ್‌ಗಳ ವಿಷಯವಾಗಿದೆ ಮತ್ತು ಅದನ್ನು ವಿರಳವಾಗಿ ಚರ್ಚಿಸಲಾಗಿದೆ. ಭಾರತವು ಪರಿಸರದ ಹಿತಾಸಕ್ತಿ ಮತ್ತು ಅವುಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸುವುದು. ಹೆಚ್ಚಿನ ಸಂಖ್ಯೆಯ ಗ್ರೀನ್‌ ಜಾಬ್‌ಗಳನ್ನು ಸೃಷ್ಟಿಸುವುದು, ಇದೂ ಕೂಡಾ ಯೋಚಿಸಬೇಕಾದ ವಿಷಯವಾಗಿದೆ ಎಂದು ಹೇಳಿದರು.’

ಗ್ರೀನ್‌ ಜಾಬ್ಸ್‌(Green Jobs) ಎಂದರೇನು?
ಗ್ರೀನ್‌ ಜಾಬ್ಸ್‌ ಎಂದರೆ ನಮ್ಮ ಗೃಹದ ಮೇಲೆ ನೇರವಾಗಿ ಪರಿಣಾಮ ಬೀರುವ ಮತ್ತು ಪರಿಸರದ ಒಳಿತಿಗೆ ಕೊಡುಗೆ ನೀಡುವ ಉದ್ಯೋಗಗಳ ವರ್ಗವನ್ನು ಉಲ್ಲೇಖಿಸುತ್ತದೆ. ನವೀಕರಸಬಹುದಾದ ಶಕ್ತಿ, ಸಂಪನ್ಮೂಲಗಳ ಸಂರಕ್ಷಣೆ, ಇಂಧನ ಸಮರ್ಥ ವಿಧಾನಗಳನ್ನು ಖಾತ್ರಿಪಡಿಸುವ ಉದ್ಯೋಗಗಳನ್ನು ಈ ಉದ್ಯೋಗದ ಅಡಿಯಲ್ಲಿ ವರ್ಗೀಕರಿಸಲಾಗಿದೆ. ಇದರ ಉದ್ದೇಶ ಆರ್ಥಿಕ ವಲಯಗಳಿಂದ ಪರಿಸರದ ಮೇಲೆ ಋಣಾತ್ಮಕ ಪ್ರಭಾವವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಮತ್ತು ಇದು ಕಡಿಮೆ ಇಂಗಾಲದ ಆರ್ಥಿಕತೆಯನ್ನು ರಚಿಸುವ ಪ್ರಕ್ರಿಯೆಯನ್ನು ಹೆಚ್ಚಿಸುವುದಾಗಿದೆ.

ಇದರ ಹಿಂದಿನ ಕಲ್ಪನೆ ತುಂಬಾ ಸರಳವಾಗಿದೆ. ಆರ್ಥಿಕತೆಯಲ್ಲಿ ಕಡಿಮೆ ಇಂಗಾಲ(Low Carbon) ಅಥವಾ ಡೀಕಾರ್ಬೊನೈಸೇಶನ್‌ ಇದೇ ಗ್ರೀನ್‌ ಜಾಬ್ಸ್‌ ನ ಹಿಂದಿನ ಕಲ್ಷನೆಯಾಗಿದೆ. ಇದು ಸುಸ್ಥಿರ ಆರ್ಥಿಕತೆಯನ್ನು ಕಾಪಾಡಿಕೊಳ್ಳವುದು, ಇದು ಹಸಿರುಮನೆ (Greenhouse) ಅನಿಲಗಳ, ವಿಶೇಷವಾಗಿ ಇಂಗಾಲದ ಡೈಆಕ್ಸೈಡ್‌ ವ್ಯಾಪಕ ಹೊರಸೂಸದಂತೆ ತಡೆಯುವುದಾಗಿದೆ.

ಇದನ್ನೂ ಓದಿ : donate through e hundi : ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿ ಜಾಗಕ್ಕೆ ಇ ಹುಂಡಿಗಳ ಸ್ಥಾಪನೆಗೆ ಮುಂದಾದ ಮುಜರಾಯಿ ಇಲಾಖೆ

ಭಾರತ ಮತ್ತು ಗ್ರೀನ್‌ ಜಾಬ್ಸ್‌ :

ಅಕ್ಟೋಬರ್‌ 1, 2015 ರಂದು ಕೇಂದ್ರ ಸರ್ಕಾರ ಗ್ರೀನ್‌ ಜಾಬ್‌ಗಳಿಗಾಗಿ ಕೌಶಲ್ಯ ಮಂಡಳಿಯನ್ನು ಪ್ರಾರಂಭಿಸಿತು. ಇದು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಿಷನ್‌ಗಳಿಗೆ ಹೊಂದಿಕೊಂಡಿದೆ. ಇದನ್ನು ಲಾಭ ರಹಿತ, ಸ್ವತಂತ್ರ, ಕೈಗಾರಿಕಾ–ಮಾರ್ಗದರ್ಶನ ಕ್ಕಾಗಿ ಸ್ಥಾಪಿಸಲಾಯಿತು. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ(MNRE) ಮತ್ತು ಭಾರತೀಯ ಕೈಗಾರಿಕೆಗಳ ಒಕ್ಕೂಟ (CII) ದಿಂದ ಉತ್ತೇಜಿಸಲ್ಪಟ್ಟಿದೆ. ಇದು ಕೌನ್ಸಿಲ್‌ ಭಾರತದ ಹಸಿರು ವ್ಯಾಪಾರ ವಲಯದಲ್ಲಿ ತಯಾರಕರು ಮತ್ತು ಇತರ ಸೇವಾ ಪೂರೈಕೆದಾರರಿಗೆ ಉದ್ಯಮ–ನೇತೃತ್ವದ ಸಹಯೋಗದ ಕೌಶಲ್ಯಗಳನ್ನು ದೇಶಕ್ಕೆ ಒದಗಿಸಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಗ್ರೀನ್‌ ಜಾಬ್ಸ್‌ಗಳು ನೈಜ ಸಾಮರ್ಥ್ಯ ಮತ್ತು ಮಹತ್ವವನ್ನು ನಿಜವಾಗಿಯೂ ಅರಿತುಕೊಳ್ಳುವ ಹಾದಿಯಲ್ಲಿದೆ. ಸ್ಕಿಲ್‌ ಕೌನ್ಸಿಲ್‌ ಫಾರ್‌ ಗ್ರೀನ್‌ ಜಾಬ್ಸ್‌ ಪ್ರಕಾರ, ಗ್ರೀನ್‌ ಜಾಬ್ಸ್‌ ಕೌಶಲ್ಯಗಳ ಬಗ್ಗೆ ಜಾಗೃತಿ ಮತ್ತು ತರಬೇತಿ ನೀಡಬೇಕಾಗಿದೆ. ಇದರಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಸೀಮಿತಗೊಳಿಸುವುದು, ತಾಜ್ಯ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುವುದು, ಪರಿಸರದ ರಕ್ಷಣೆ ಮತ್ತು ಪುನಃಸ್ಥಾಪನೆ, ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೊಂದಿಕೊಳ್ಳುವಿಕೆಯನ್ನು ಬೆಂಬಲಿಸುವುದು ಮುಂತಾದವುಗಳಾಗಿದೆ.

ಇದನ್ನೂ ಓದಿ : Rajya Sabha Elections 2022: ರಾಜ್ಯಸಭಾ ಚುನಾವಣೆ; ಶಾಸಕರ ಆಯ್ಕೆ, ಚುನಾವಣಾ ನೀತಿ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

(Green jobs explained what are green jobs and how is India going to adapt it)

Comments are closed.