Rahul Lord’s Record : ಲಾರ್ಡ್ಸ್‌ ಅಂಗಳದಲ್ಲಿ ಕನ್ನಡಿಗನ ಪರಾಕ್ರಮ : ಐತಿಹಾಸಿಕ ದಾಖಲೆ ಬರೆದ ಕೆ.ಎಲ್.ರಾಹುಲ್‌

ಲಾರ್ಡ್ಸ್‌ : ಇಂಗ್ಲೆಂಡ್‌ ಪ್ರವಾಸದಲ್ಲಿರುವ ಕನ್ನಡಿಗ ಕೆ.ಎಲ್.ರಾಹುಲ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ತಂಡವನ್ನು ಆಧರಿಸಿದ್ದ, ರಾಹುಲ್‌ ಎರಡನೇ ಟೆಸ್ಟ್‌ನಲ್ಲಿ ಶತಕ ಬಾರಿಸುವ ಮೂಲಕ ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದಲೂ ಟೆಸ್ಟ್‌ ತಂಡದಿಂದ ದೂರ ಉಳಿದಿದ್ದ ಕೆ.ಎಲ್.ರಾಹುಲ್‌ ಟಿ20 ಪಂದ್ಯಾವಳಿಯಲ್ಲಿ ಅಬ್ಬರ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಆದ್ರೀಗ ಟೆಸ್ಟ್‌ ಪಂದ್ಯದಲ್ಲಿ ವಾಲ್‌ ಖ್ಯಾತಿ ರಾಹುಲ್‌ ದ್ರಾವಿಡ್‌ ಅವರನ್ನು ನೆನಪಿಸುವಂತೆ ಕಲಾತ್ಮಕ ಶೈಲಿಯ ಆಟಕ್ಕೆ ಮನ ಮಾಡಿದ್ದಾರೆ. ಎರಡನೇ ಟೆಸ್ಟ್‌ ಪಂದ್ಯದ ಆರಂಭದಿಂದಲೂ ನಿಧಾನಗತಿಯ ಆಟವನ್ನು ಪ್ರದರ್ಶಿಸುವ ಮೂಲಕ ಟೀಂ ಇಂಡಿಯಾವನ್ನು ಆಧರಿಸಿದ್ದಾರೆ. ಅಷ್ಟೇ ಯಾಕೆ ಭರ್ಜರಿ ಶತಕವನ್ನೂ ಬಾರಿಸಿದ್ದಾರೆ.

ಲಾರ್ಡ್ಸ್‌ ಅಂಗಳದಲ್ಲಿ ರಾಹುಲ್‌ ಬಾರಿಸಿದ ಶತಕ ಟೆಸ್ಟ್‌ ವೃತ್ತಿ ಜೀವನದಲ್ಲಿ ಆರನೇಯದ್ದು. ಆದರೆ ಇಂಗ್ಲೆಂಡ್‌ ನೆಲದಲ್ಲಿ ಎರಡನೇ ಬಾರಿಗೆ ಶತಕ ಬಾರಿಸುವ ಮೂಲಕ ರಾಹುಲ್‌ ದಿಗ್ಗಜ ಕ್ರಿಕೆಟಿಗರ ಸಾಲಿನಲ್ಲಿ ಬಂದು ನಿಂತಿದ್ದಾರೆ. ಇಂಗ್ಲೆಂಡ್‌ ಪ್ರವಾಸದ ವೇಳೆಯಲ್ಲಿ ಎರಡು ಶತಕ ಬಾರಿಸಿದ ಐದನೇ ಆಟಗಾರ ಅನ್ನೋ ಹಿರಿಮೆಗೆ ರಾಹುಲ್‌ ಪಾತ್ರರಾಗಿದ್ದಾರೆ.

ಇದನ್ನೂ ಓದಿ : KL Rahul : ಕೆ.ಎಲ್.ರಾಹುಲ್‌ ಭರ್ಜರಿ ಶತಕ : ಬೃಹತ್‌ ಮೊತ್ತದತ್ತ ಟೀಂ ಇಂಡಿಯಾ

ಭಾರತದ ಕ್ರಿಕೆಟ್‌ ದಿಗ್ಗಜರಾದ ಸುನೀಲ್ ಗವಾಸ್ಕರ್, ವಿಜಯ್ ಮರ್ಚೆಂಟ್, ರಾಹುಲ್ ದ್ರಾವಿಡ್ ಮತ್ತು ರವಿ ಶಾಸ್ತ್ರಿ ಈ ದಾಖಲೆಯನ್ನು ನಿರ್ಮಿಸಿದ್ದರು. ಅಲ್ಲದೇ ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲಿ ಶತಕ ಬಾರಿಸಿದ ಒಂಬತ್ತನೇ ಆಟಗಾರ ಎನಿಸಿಕೊಂಡಿದ್ದಾರೆ. ವಿನೂ ಮಂಕಡ್, ದಿಲೀಪ್ ವೆಂಗಸರ್ಕರ್, ಗುಂಡಪ್ಪ ವಿಶ್ವನಾಥ್ , ರವಿ ಶಾಸ್ತ್ರಿ, ಸೌರವ್ ಗಂಗೂಲಿ, ಅಜಿತ್ ಅಗರ್ಕರ್, ರಾಹುಲ್ ದ್ರಾವಿಡ್ ಮತ್ತು ಅಜಿಂಕ್ಯ ರಹಾನೆ ಈ ದಾಖಲೆಯನ್ನು ನಿರ್ಮಿಸಿದ್ದರು. ಆದರೆ ವೆಂಗ್‌ ಸರ್ಕರ್‌ ಮೂರು ಬಾರಿ ಶತಕ ಬಾರಿಸಿದ ದಾಖಲೆಯನ್ನು ಇಂದಿಗೂ ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.

Comments are closed.