KL Rahul : ಕೆ.ಎಲ್.ರಾಹುಲ್‌ ಭರ್ಜರಿ ಶತಕ : ಬೃಹತ್‌ ಮೊತ್ತದತ್ತ ಟೀಂ ಇಂಡಿಯಾ

ಲಾರ್ಡ್ಸ್‌ ( IND vs Eng 2nd Test) : ಇಂಗ್ಲೆಂಡ್‌ ವಿರುದ್ದದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್.ರಾಹುಲ್‌ ಭರ್ಜರಿ ಶತಕ ಬಾರಿಸಿದ್ದಾರೆ. ಬರೋಬ್ಬರಿ 212 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ ಶತಕ ಪೂರೈಸಿದ್ದಾರೆ. ಈ ಮೂಲಕ ಟೀಂ ಇಂಡಿಯಾ ಬೃಹತ್‌ ಮೊತ್ತದತ್ತ ಮುನ್ನುಗುತ್ತಿದೆ.

ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿದಿದೆ. ರೋಹಿತ್‌ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್‌ ಆರಂಭಿಕರಾಗಿ ಕಣಕ್ಕೆ ಇಳಿದಿದ್ದು, ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಮೊದಲ ವಿಕೆಟ್‌ಗೆ 126ರನ್‌ ಜೊತೆಯಾಟ ನೀಡಿದೆ. 145 ಎಸೆತಗಳನ್ನು ಎದುರಿಸಿದ್ದ ರೋಹಿತ್‌ ಶರ್ಮಾ 11 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ 83ರನ್‌ ಗಳಿಸಿ ಔಟಾದ್ರೆ. ಕನ್ನಡಿಗ ಕೆ.ಎಲ್.ರಾಹುಲ್‌ ಶತಕ ಪೂರೈಸಿದ್ದಾರೆ.

ಆರಂಭದಿಂದಲೂ ನಿಧಾನಗತಿಯ ಆಟಕ್ಕೆ ಮುಂದಾಗಿದ್ದ ರಾಹುಲ್‌ 212 ಎಸೆತಗಳಲ್ಲಿ 8 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ ಭರ್ಜರಿ ಶತಕ ಬಾರಿಸಿದ್ದಾರೆ. ಮೊದಲ ಟೆಸ್ಟ್‌ ಪಂದ್ಯ ದಲ್ಲಿ ಅರ್ಧ ಶತಕ ಬಾರಿಸಿದ್ದ ರಾಹುಲ್‌ ಇದೀಗ ಶತಕ ಬಾರಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಇದನ್ನೂ ಓದಿ : Rahul Lord’s Record : ಲಾರ್ಡ್ಸ್‌ ಅಂಗಳದಲ್ಲಿ ಕನ್ನಡಿಗನ ಪರಾಕ್ರಮ : ಐತಿಹಾಸಿಕ ದಾಖಲೆ ಬರೆದ ಕೆ.ಎಲ್.ರಾಹುಲ್‌

ಟೀಂ ಇಂಡಿಯಾ ರೋಹಿತ್‌ ಶರ್ಮಾ ಹಾಗೂ ಚೇತೇಶ್ವರ ಪೂಜಾರ ವಿಕೆಟ್‌ ಕಳೆದುಕೊಂಡಿದ್ದು. ಕನ್ನಡಿಗ ಕೆ.ಎಲ್.ರಾಹುಲ್‌ ಹಾಗೂ ವಿರಾಟ್‌ ಕೊಯ್ಲಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

Comments are closed.