Andrew Tye : ಲಕ್ನೋ ಸೂಪರ್ ಜೈಂಟ್ಸ್ ಸೇರ್ಪಡೆಯಾದ ಆಂಡ್ರೋ ಟೈ

ಐಪಿಎಲ್‌ ಮೆಗಾ ಹರಾಜಿನಲ್ಲಿ ಘಟಾನುಘಟಿ ಆಟಗಾರರನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದರೂ ಕೂಡ ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants)ತಂಡಕ್ಕೆ ವಿದೇಶಿ ಆಟಗಾರರು ಕೈಕೊಟ್ಟಿದ್ದಾರೆ. ಆದರೆ ಇದೀಗ ವಿಶ್ವದ ಶ್ರೇಷ್ಟ ಬೌಲರ್‌ಗಳಲ್ಲಿ ಓರ್ವರಾಗಿರುವ ಆಂಡ್ರೋ ಟೈ (Andrew Tye) ಇದೀಗ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಸೇರ್ಪಡೆಯಾಗಲಿದೆ. ಈ ಹಿಂದೆ ಚೆನೈ ಸೂಪರ್‌ ಕಿಂಗ್ಸ್‌ (CSK ) ತಂಡ ಪ್ರಮುಖ ಆಟಗಾರ IPL 2022 ಗಾಗಿ ಲಕ್ನೋ ಸೂಪರ್ ಜೈಂಟ್ಸ್ (LSG) ಗೆ ಸೇರಲಿದ್ದಾರೆ.

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಒಟ್ಟು 18 ಆಟಗಾರರನ್ನು ಖರೀದಿಸಿತ್ತು. ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ದೀಪಕ್ ಹೂಡಾ, ಕೃನಾಲ್ ಪಾಂಡ್ಯ ಮತ್ತು ಜೇಸನ್ ಹೋಲ್ಡರ್ ಪ್ರಮುಖ ಆಟಗಾರರಾಗಿದ್ದಾರೆ. ಇದೀಗ ಆಂಡ್ರೋ ಟೈ ತಂಡಕ್ಕೆ ಸೇರ್ಪಡೆಯಾಗಿರುವುದು ಲಕ್ನೋ ಸೂಪರ್‌ ಜೈಂಟ್ಸ್‌ ತಂಡಕ್ಕೆ ಆನೆ ಬಲ ಬಂದಂತಾಗಿದೆ.

ಐಪಿಎಲ್ ಗೆ ಹೊಸದಾಗಿ ಎಂಟ್ರಿ ಕೊಟ್ಟಿರುವ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಬುಧವಾರ ಆಸ್ಟ್ರೇಲಿಯಾದ ವೇಗಿ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಆಟಗಾರ ಆಂಡ್ರ್ಯೂ ಟೈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅವರು ಈ ಹಿಂದೆ ಗಾಯದ ಕಾರಣ ಪಂದ್ಯಾವಳಿಯಿಂದ ಹೊರಗುಳಿದಿದ್ದ ಇಂಗ್ಲೆಂಡ್‌ನ ಮಾರ್ಕ್ ವುಡ್ ಅವರ ಬದಲಿಗೆ ತಂಡಕ್ಕೆ ಸೇರ್ಪಡೆಯಾಗಿ ದ್ದಾರೆ. CSK ಮಾಜಿ ಬೌಲರ್ ಆಂಡ್ರ್ಯೂ ಟೈ ಅವರು 2017 ರಲ್ಲಿ ಗುಜರಾತ್ ಲಯನ್ಸ್‌ಗಾಗಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ವಿರುದ್ಧ ತಮ್ಮ IPL ಚೊಚ್ಚಲ ಪಂದ್ಯದಲ್ಲಿ ಹ್ಯಾಟ್ರಿಕ್ ಮತ್ತು 5 ವಿಕೆಟ್‌ಗಳನ್ನು ಪಡೆದಿದ್ದರು.

ಆಂಡ್ರ್ಯೂ ಟೈ 32 ಟಿ20 ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದಾರೆ ಮತ್ತು 47 ವಿಕೆಟ್‌ಗಳನ್ನು ಪಡೆದಿದ್ದಾರೆ. ನಿಧಾನಗತಿಯ ಎಸೆತಗಳು ಮತ್ತು ಯಾರ್ಕರ್‌ಗಳಿಗೆ ಹೆಸರು ವಾಸಿಯಾಗಿರುವ ಬಲಗೈ ವೇಗಿ ಮತ್ತು 27 ಐಪಿಎಲ್ ಪಂದ್ಯಗಳಲ್ಲಿ 40 ವಿಕೆಟ್‌ಗಳನ್ನು ಪಡೆದಿದ್ದಾರೆ 1 ಕೋಟಿ ರೂಪಾಯಿಗೆ ಇದೀಗ ಎಲ್‌ಎಸ್‌ಜಿ ಸೇರಲಿದ್ದಾರೆ. CSK ಮಾಜಿ ಆಟಗಾರ ಆಂಡ್ರ್ಯೂ ಟೈ ((Andrew Tye) ) ಜೊತೆಗೆ, ಸೂಪರ್ ಜೈಂಟ್ಸ್ ಕಳೆದ IPL ಋತುವಿನ ಎರಡನೇ ಅತಿ ಹೆಚ್ಚು ವಿಕೆಟ್ ಟೇಕರ್ ಅವೇಶ್ ಖಾನ್ ಕೂಡ ತಂಡದಲ್ಲಿದ್ದಾರೆ.

ಲಕ್ನೋ ಸೂಪರ್‌ ಜೈಂಟ್ಸ್‌ (Lucknow Super Giants) ತಂಡಕ್ಕೆ ಬಲಿಷ್ಠ ಬೌಲಿಂಗ್‌ ಪಡೆಯನ್ನು ಹೊಂದಿದಂತಾಗಿದೆ. ಶ್ರೀಲಂಕಾದ ಎದುರಾಳಿಗಳನ್ನು ಕಟ್ಟಿಹಾಕುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಜೊತೆಗೆ ಜೇಸನ್ ಹೋಲ್ಡರ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಕೈಲ್ ಮೇಯರ್ಸ್ ರಂತಹ ಆಲ್‌ರೌಂಡರ್‌ ಆಟಗಾರರು ತಂಡದಲ್ಲಿದ್ದಾರೆ. ಪ್ರಸಕ್ತ ಋತುವಿನಲ್ಲಿ ಪಾದಾರ್ಪಣೆ ಮಾಡಲಿರುವ ಲಕ್ನೋ ಅವರು ಮಾರ್ಚ್ 28 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ತಮ್ಮ IPL 2022 ಅಭಿಯಾನವನ್ನು ಪ್ರಾರಂಭಿಸುತ್ತಾರೆ.

ಆಂಡ್ರೋ ಟೈ (Andrew Tye) ಸೇರ್ಪಡೆ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡ:

ಕೆಎಲ್ ರಾಹುಲ್ (ನಾಯಕ), ಮಾರ್ಕಸ್ ಸ್ಟೋನಿಸ್, ರವಿ ಬಿಷ್ಣೋಯ್, ಕ್ವಿಂಟನ್ ಡಿ ಕಾಕ್, ದೀಪಕ್ ಹೂಡಾ, ಮನೀಶ್ ಪಾಂಡೆ, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಮಾರ್ಕ್ ವುಡ್, ಅವೇಶ್ ಖಾನ್, ಅಂಕಿತ್ ರಜಪೂತ್, ಕೆ ಗೌತಮ್, ದುಷ್ಮಂತ ಚಮೀರಾ, ಶಹಬಾಜ್ ನದೀಮ್, ಮನನ್ ವೋಹ್ರಾ, ಮೊಹ್ಸಿನ್ ಖಾನ್ ಬದೋನಿ, ಕರಣ್ ಶರ್ಮಾ, ಎವಿನ್ ಲೂಯಿಸ್, ಮಯಾಂಕ್ ಯಾದವ್, ಕೈಲ್ ಮೇಯರ್ಸ್.

ಇದನ್ನೂ ಓದಿ : IPL 2022ರಲ್ಲಿ ಚೆನ್ನೈ ತಂಡಕ್ಕೆ ರವೀಂದ್ರ ಜಡೇಜಾ ನಾಯಕ

ಇದನ್ನೂ ಓದಿ :  ಲಕ್ನೋ ಸೂಪರ್ ಜೈಂಟ್ಸ್‌ಗೆ ಶಾಕ್‌ ಕೊಟ್ಟ ಬಿಸಿಬಿ : ಟಸ್ಕಿನ್ ಅಹ್ಮದ್ ಐಪಿಎಲ್‌ ಆಡೋದು ಅನುಮಾನ

Andrew Tye enter Lucknow Super Giants for IPL 2022

Comments are closed.