Bad Breath : ಬಾಯಿಯ ದುರ್ವಾಸನೆ ಅವಮಾನ ಎದುರಿಸುವಂತೆ ಮಾಡಿದೆಯೇ? ಹಾಗಾದರೆ ಅದನ್ನು ತಪ್ಪಿಸಲು ಇಲ್ಲಿದೆ ಟಿಪ್ಸ್‌

ಸೌಂದರ್ಯದ ಬಗ್ಗೆ ಕಾಳಜಿವಹಿಸುವವರು ಬಾಯಿಯ(Oral Care) ಸ್ವಚ್ಛತೆಯ ಮೇಲೆಯೂ ಗಮನಹಿರಿಸುವುದು ಮುಖ್ಯವಾಗಿದೆ. ಬಾಯಿಯಿಂದ ಬರುವ ದುರ್ವಾಸನೆ(Bad Breath) ಕೆಲವರು ನಿಮ್ಮ ಜೊತೆಗೆ ಸಂಭಾಷಣೆ ಮಾಡಲು ಹಿಂಜರಿಯುವುದಕ್ಕೆ ಕಾರಣವಾಗಬಹುದು. ಬಾಯಿಯಿಂದ ಬರುವ ದುರ್ವಾಸನೆ ಅಥವಾ ದುರ್ಗಂಧ ನಿಮ್ಮ ಮೇಲೆ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಬಲ್ಲದು. ಆದರೆ ಚಿಂತಿಸುವ ಅಗತ್ಯವಿಲ್ಲ, ನಾವು ಹೇಳಿದ ಕೆಲವು ಆಹಾರಗಳಿಂದ ದೂರವಿದ್ದು ದುರ್ವಾಸನೆಯಿಂದ ಮುಕ್ತಿ ಪಡೆಯಿರಿ.

ಈ ಆಹಾರಗಳನ್ನು ಸೇವಿಸಬೇಡಿ:

  • ಬೆಳ್ಳುಳ್ಳಿ ಮತ್ತು ಈರುಳ್ಳಿ ಇವೆರಡೂ ಬಾಯಿಯ ದುರ್ವಾಸನೆಗೆ ಕಾರಣವಾಗುವ ಪ್ರಮುಖ ಆಹಾರಗಳು. ಇದರಲ್ಲಿಯ ಸಲ್ಫರ್‌ ಸಂಯುಕ್ತಗಳು ಬಾಯಿಯಲ್ಲಿ ಹಾಗೆಯೇ ಉಳಿದು, ಉಸಿರಾಡುವಾಗ ರಕ್ತದಲ್ಲಿ ಹೀರಲ್ಪಡುತ್ತವೆ.
  • ಕಾಫಿ ಮತ್ತು ಅಲ್ಕೋಹಾಲ್‌ಗಳು ಬಾಯಿಯಲ್ಲಿ ಬ್ಯಾಕ್ಟೀರಿಯಾಗಳನ್ನು ಉತ್ಪತ್ತಿ ಮಾಡಲು ಸಹಾಯಮಾಡುತ್ತವೆ. ಇವು ಬಾಯಿಯಲ್ಲಿ ಲಾಲಾರಸದ ಬೆಳವಣಿಗೆ ಕಡಿಮೆ ಮಾಡಿ ಒಣಗುವ ಪರಿಣಾಮ ಬೀರುತ್ತವೆ. ಇದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಮತ್ತು ಅವುಗಳು ಅಲ್ಲಿಯೇ ಇರುವಂತೆ ಮಾಡಿ ದುರ್ವಾಸನೆ ಉಂಟುಮಾಡಲು ಅನುವು ಮಾಡಿಕೊಡುತ್ತದೆ. ಡೈರಿಯ ಉತ್ಪನ್ನಗಳು ಸಹ ದುರ್ವಾಸನೆಯನ್ನು ಉತ್ತೇಜಿಸುವಂತೆ ಪ್ರಚೋದನೆ ನೀಡುತ್ತವೆ.
  • ಆರೆಂಜ್‌ ಜ್ಯೂಸ್‌, ಸೋಡಾ ಮತ್ತು ಮಾಂಸಗಳಂತಹ ಆಹಾರಗಳು ಸಹ ದುರ್ವಾಸನೆಯನ್ನು ಪ್ರಚೋದಿಸುತ್ತವೆ. ಬಾಯಿಯ ದುರ್ವಾಸನೆ ತಡೆಯಲು ಇಂತಹ ಆಹಾರಗಳ ಸೇವನೆಯ ನಂತರ ಬಾಯಿಯನ್ನು ಸ್ವಚ್ಛಗೊಳಿಸಲೇಬೇಕು. ಕೆಲವು ಆರೋಗ್ಯ ಪರಿಸ್ಥಿತಿಗಳಾದ ಸೈನಸ್‌ ಪ್ಯಾಸೇಜ್‌ ಬ್ಲಾಕ್‌ ಆಗುವುದು, ಪೊಸ್ಟ್‌–ನಾಸಲ್‌ ಡ್ರಿಪ್‌ ಮುಂತಾದವುಗಳು ದುರ್ವಾಸನೆಗೆ ಕಾರಣವಾಗಬಹುದು.

ಇದನ್ನೂ ಓದಿ: Foods Causing Gastric: ಗ್ಯಾಸ್ಟ್ರಿಕ್ ಸಮಸ್ಯೆಯುಳ್ಳವರು ಈ ಆಹಾರ ತಿನ್ನಲೇಬೇಡಿ!

ದುರ್ವಾಸನೆ ದೂರಮಾಡುವ ಟಿಪ್ಸ್‌ಗಳು :

  • ಸೇಬು, ಪೀರ್‌, ಕ್ಯಾರೇಟ್‌ ಮತ್ತು ಸಿಲೆರಿಗಳಂತಹ ಹಸಿ ತರಕಾರಿಗಳು ಬಾಯಿಯಲ್ಲಿ ಲಾಲಾರಸ ಉತ್ಪತ್ತಿ ಮಾಡಲು ಸಹಾಯಮಾಡಿ, ದುರ್ವಾಸನೆ ಉತ್ಪತ್ತಿಮಾಡುವ ಬ್ಯಾಕ್ಟೀರಿಯಾಗಳನ್ನು ಸ್ವಚ್ಛಗೊಳಿಸುವುದು. ಈ ಆಹಾರಗಳಲ್ಲಿನ ನಾರಿನಾಂಶಗಳನ್ನು ಸೇವಿಸುವಾಗ ಅವು ನೈಸರ್ಗಿಕ ಟೂತ್‌ಬ್ರಶ್‌ಗಳಂತೆಯೇ ಕೆಲಸಮಾಡುವುದು.
  • ಪ್ರೋಬಯಾಟಿಕ್‌ ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ದುರ್ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಎದುರಿಸಲು ಸಹಾಯಮಾಡುತ್ತವೆ. ಪಾರ್ಸ್ಲೆಯಂತಹ ಹರ್ಬ್ಸ್‌ಗಳೂ ಫಾಲಿಫಿನಾಲ್‌ಗಳು ಮತ್ತು ನೈಸರ್ಗಿಕ ರಾಸಾಯನಿಕಗಳನ್ನು ಹೊಂದಿದ್ದು ಬಾಯಿಯ ದುರ್ವಾಸನೆಗೆ ಪರಿಹಾರ ಒದಗಿಸುವ ಕೆಲಸಮಾಡುವುದು.
  • ಚೆರ್‍ರೀಗಳು ಪ್ರಾಕೃತಿಕವಾಗಿ ಆಹಾರಗಳಲ್ಲಿರುವ ಮಿಥೈಲ್‌ ಮೆರ್ಕಾಪ್ಟನ್‌ ದುರ್ವಾಸನೆ ಬೀರುವ ಗ್ಯಾಸ್‌ಗಳನ್ನು ತೆಗೆದುಹಾಕುವ ಸಾಮರ್ಥ್ಯಹೊಂದಿವೆ. ಗ್ರೀನ್‌ ಟೀಯಲ್ಲಿರುವ ಕ್ಯಾಟೆಚಿನ್‌ಗಳು ನೈಸರ್ಗಿಕ ಆಂಟಿಒಕ್ಸಿಡೆಂಟ್‌ಗಳಾಗಿದ್ದು ಬಾಯಿಯ ದುರ್ವಾಸನೆ ಹೆಚ್ಚಿಸುವ ಬ್ಯಾಕ್ಟೀರಿಯಾಗಳ ವಿರುದ್ದ ಹೋರಾಡುವಲ್ಲಿ ಸಹಾಯಮಾಡುತ್ತವೆ.
  • ಯಥೇಚ್ಛವಾಗಿ ನೀರು ಕುಡಿಯುವುದು ಬಾಯಿಯಲ್ಲಿ ಸಿಲುಕಿರುವ ಆಹಾರದ ಬ್ಯಾಕ್ಟೀರಿಯಾ ಕಣಗಳನ್ನು ತೊಡೆದುಹಾಕಲು ಸಹಾಯಮಾಡುತ್ತದೆ. ನೀರು ಒಂದು ಉತ್ತಮ ಕ್ಲೆನ್ಸರ್‌ ಆಗಿದ್ದು ಲಾಲಾರಸ ಉತ್ಪತ್ತಿಯಾಗಲು ಪ್ರಚೋದಿಸುತ್ತದೆ. ಇದು ದುರ್ವಾಸನೆಯ ವಸ್ತುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Ghee Health Benefits : ದಿನಕ್ಕೊಂದು ಚಮಚ ತುಪ್ಪ ತಿಂದರೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ ?

(Bad Breath how to prevent bad breath oral care tips)

Comments are closed.