Team India coach : ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ನಂತರ ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಕೋಚ್ (Team India Head Coach) ಬರಲಿದ್ದಾರೆ. ಟೀಮ್ ಇಂಡಿಯಾ ಕೋಚ್ ಹುದ್ದೆಗೆ ಈಗಾಗಲೇ ಬಿಸಿಸಿಐ (BCCI) ಅರ್ಜಿ ಆಹ್ವಾನಿಸಿದ್ದು, ಒಟ್ಟು 3000 ಅಪ್ಲಿಕೇಶನ್’ಗಳು ಬಂದಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಚ್ಚರಿಯ ಸಂಗತಿ ಏನಂದ್ರೆ, ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಹುದ್ದೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಅರ್ಜಿ ಸಲ್ಲಿಸಿದ್ದಾರೆ.

ಮೋದಿ, ಅಮಿತ್ ಶಾ ಜೊತೆಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಎರಡು ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನವಾಗಿತ್ತು. ಅಂದ ಹಾಗೆ ಮೋದಿ, ಅಮಿತ್ ಶಾ, ತೆಂಡೂಲ್ಕರ್ ಮತ್ತು ಧೋನಿ ಹೆಸರಿನಲ್ಲಿ ನಕಲಿ ಅರ್ಜಿಗಳು ಸಲ್ಲಿಕೆಯಾಗಿವೆ.
ನೂತನ ಕೋಚ್ ಹುದ್ದೆಯ ಅವಧಿ:
ಭಾರತ ತಂಡದ ನೂತನ ಮುಖ್ಯ ಕೋಚ್ ಅವಧಿ ಮೂರೂವರೆ ವರ್ಷಗಳದ್ದಾಗಿರುತ್ತದೆ. 2024ರ ಜುಲೈ 1ಕ್ಕೆ ಆರಂಭವಾಗಿ 2027ರ ಡಿಸೆಂಬರ್ 31ಕ್ಕೆ ಕೋಚ್ ಹುದ್ದೆ ಅವಧಿ ಕೊನೆಗೊಳ್ಳಲಿದೆ. ಭಾರತ ಪುರುಷರ ತಂಡದ ಪರ್ಫಾಮೆನ್ಸ್ ಮತ್ತು ಮ್ಯಾನೇಜ್ಮೆಂಟ್ ಜವಾಬ್ದಾರಿ ಮುಖ್ಯ ತರಬೇತುದಾರ ನದ್ದಾಗಿರುತ್ತದೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಜೂನ್ 2ರಂದು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಆರಂಭವಾಗಲಿದ್ದು, ಫೈನಲ್ ಪಂದ್ಯ ಜೂನ್ 29ರಂದು ನಡೆಯಲಿದೆ. ಈ ಟೂರ್ನಿ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾದ ಹಾಲಿ ಕೋಚ್ ರಾಹುಲ್ ದ್ರಾವಿಡ್ ಹುದ್ದೆ ತೊರೆಯಲಿದ್ದು, ಹೊಸ ತರಬೇತುದಾರನ ಕಾರ್ಯಾವಧಿ ಜುಲೈ 1ರಿಂದಲೇ ಆರಂಭವಾಗಲಿದೆ.
ಇದನ್ನೂ ಓದಿ : Yuvraj Singh 2.0 Loading: ಯುವರಾಜ್ ಸಿಂಗ್ ತಯಾರು ಮಾಡಿದ ಹುಡುಗ ಅಭಿಷೇಕ್ ಶರ್ಮಾ ಐಪಿಎಲ್’ನಲ್ಲಿ ಧೂಳೆಬ್ಬಿಸಿದ!
ಭಾರತ ತಂಡದ ಕೋಚ್ ಆಗಲು ಬಿಸಿಸಿಐ ನಿಗದಿ ಪಡಿಸಿರುವ ಮಾನದಂಡಗಳು:
• 30 ಟೆಸ್ಟ್ ಅಥವಾ 50 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿರಬೇಕು; ಅಥವಾ
• ಪೂರ್ಣ ಸದಸ್ಯತ್ವ ಹೊಂದಿರುವ ಟೆಸ್ಟ್ ಆಡುವ ರಾಷ್ಟ್ರೀಯ ತಂಡಕ್ಕೆ ಕನಿಷ್ಠ ಎರಡು ವರ್ಷ ಕೋಚ್ ಆಗಿ ಕಾರ್ಯನಿರ್ವಹಿಸಿರಬೇಕು; ಅಥವಾ
• ಅಸೋಸಿಯೇಟ್ ಸದಸ್ಯ ರಾಷ್ಟ್ರಗಳ ತಂಡದ ಹೆಡ್ ಕೋಚ್/ಐಪಿಎಲ್ ಅಥವಾ ಅದಕ್ಕೆ ಸರಿಸಮನಾದ ಅಂತರಾಷ್ಟ್ರೀಯ ಲೀಗ್/ಫಸ್ಟ್ ಕ್ಲಾಸ್ ತಂಡಗಳ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವವಿರಬೇಕು; ಅಥವಾ
• ಕನಿಷ್ಠ 3 ವರ್ಷ ರಾಷ್ಟ್ರೀಯ ಎ ತಂಡಗಳ ಕೋಚ್ ಆಗಿರಬೇಕು; ಅಥವಾ
• ಬಿಸಿಸಿಐನ ಲೆವೆಲ್ 3 ಸರ್ಟಿಫಿಕೇಟ್ ಹೊಂದಿರಬೇಕು
• ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯಸ್ಸು 60 ವರ್ಷಕ್ಕಿಂತ ಕಡಿಮೆ ಇರಬೇಕು.
ಇದನ್ನೂ ಓದಿ : Shikhar Dhawan To Marry Mithali Raj? ಮಿಥಾಲಿ ರಾಜ್ ಜೊತೆ ಶಿಖರ್ ಧವನ್ ಮದುವೆ..? ವಿವಾಹದ ಬಗ್ಗೆ ಗಬ್ಬರ್ ಹೇಳಿದ್ದೇನು..?
Narendra Modi, Amith Shah applied for the post of Team India Head Coach