IPL Auction 2024 : ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಇತಿಹಾಸದಲ್ಲಿಯೇ ಆಟಗಾರನೋರ್ವ ದಾಖಲೆಯ ಮೊತ್ತಕ್ಕೆ ಸೇಲ್ ಆಗಿದ್ದಾನೆ. ಆತ ಬೇರಾರು ಅಲ್ಲಾ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್. ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ಗೆಲ್ಲಿಸಿ ಕೊಟ್ಟ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಐಪಿಎಲ್‌ನಲ್ಲಿ 20.50 ಕೋಟಿ ರೂಪಾಯಿ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಹೊಸ ದಾಖಲೆ ಬರೆದಿದ್ದಾರೆ.
ಪ್ಯಾಟ್ ಕಮಿನ್ಸ್‌ಗೆ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಿಡ್ ಮಾಡಿತ್ತು. ನಂತರ ಮುಂಬೈ ತಂಡ ಕೂಡ ಆಸಕ್ತಿ ತೋರಿಸಿತ್ತು. ಆದರೆ 6 ಕೋಟಿಗೆ ಬಿಡ್ ಮೊತ್ತ ಏರಿಕೆಯಾಗುತ್ತಲೇ ಚೆನ್ನೈ ಕಣದಿಂದ ದೂರ ಸರಿದಿತ್ತು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹೈದ್ರಾಬಾದ್ ತಂಡಗಳು ಬಿಡ್ ಮಾಡಿವೆ. ಎರಡೂ ತಂಡಗಳು ಕಮಿನ್ಸ್ ಖರೀದಿಗೆ ಬಾರೀ ಪೈಪೋಟಿ ನಡೆಸಿವೆ. ಅಂತಿಮವಾಗಿ ಸನ್‌ರೈಸಸ್ ಹೈದ್ರಾಬಾದ್ ತಂಡ ಪ್ಯಾಟ್ ಕಮಿನ್ಸ್ ಖರೀಸಿದೆ.

ಐಪಿಎಲ್ ಇತಿಹಾಸದಲ್ಲಿ 20 ಕೋಟಿಗೂ ಅಧಿಕ ಮೊತ್ತಕ್ಕೆ ಸೇಲ್ ಆಗಿರುವ ಆಟಗಾರ ಅನ್ನೋ ಖ್ಯಾತಿಗೆ ಇದೀಗ ಪ್ಯಾಟ್ ಕಮಿನ್ಸ್ ಬಿಡ್ ಆಗಿದ್ದಾರೆ. ಈ ಹಿಂದೆ ಸ್ಯಾಮ್ ಕರನ್ 18.50 ಕೋಟಿ ರೂಪಾಯಿಗೆ ಸೇಲ್ ಆಗಿದ್ದರು. ಇದು ಐಪಿಎಲ್‌ನಲ್ಲಿ ಆಟಗಾರನೋರ್ವ ಸೇಲ್ ಆದ ದಾಖಲೆಯ ಮೊತ್ತವಾಗಿತ್ತು.
ಇದನ್ನೂ ಓದಿ : IPL ಹರಾಜು 2024 : ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರತಿನಿಧಿಸಿದ ರಿಷಬ್ ಪಂತ್
ಇನ್ನು ಮುಂಬೈ ಇಂಡಿಯನ್ಸ್ ತಂಡ ಈ ಹಿಂದೆ ಕ್ಯಾಮರೂನ್ ಗ್ರೀನ್ ಅವರನ್ನು 17.50 ಕೋಟಿ ರೂಪಾಯಿಗೆ ಸೇಲ್ ಆಗಿದ್ದರೆ, ಬೆನ್ ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 16.25 ಕೋಟಿ ರೂಪಾಯಿ ಖರೀದಿಸಿತ್ತು. ಪ್ಯಾಟ್ ಕಮಿನ್ಸ್ ಈ ಹಿಂದೆ ಕೆಕೆಆರ್ ತಂಡಕ್ಕೆ 15.5 ಕೋಟಿ ರೂಪಾಯಿಗೆ ಸೇಲ್ ಆಗಿದ್ದರು.
ಇದನ್ನೂ ಓದಿ : IPL 2024 ಹರಾಜು : ರೋಹಿತ್ ಶರ್ಮಾ ಖರೀದಿಗೆ ಮುಂಬೈ ಇಂಡಿಯನ್ಸ್ ಸಂಪರ್ಕಿಸಿದ ಡೆಲ್ಲಿ ಕ್ಯಾಪಿಟಲ್ಸ್
ಆದರೆ ಈ ಬಾರಿ ಅವರನ್ನು ಬಿಡುಗಡೆ ಮಾಡಲಾಗಿತ್ತು. 2022 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೆಕೆಆರ್ ತಂಡವನ್ನು ಪ್ರತಿನಿಧಿಸಿದ್ದ ಕಮ್ಮಿನ್ಸ್ ಕೇವಲ 14 ಎಸೆತಗಳಲ್ಲಿ ಅರ್ಧ ಶತಕ ಸಿಡಿಸುವ ಮೂಲಕ,, IPL ಎರಡನೇ ವೇಗದ ಅರ್ಧ ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಪ್ಯಾಟ್ ಕಮಿನ್ಸ್ 42 ಪಂದ್ಯಗಳನ್ನು ಆಡಿದ್ದು, 359 ರನ್ ಗಳಿಸಿದ್ದು, 45 ವಿಕೆಟ್ ಪಡೆದುಕೊಂಡಿದ್ದಾರೆ. ಕಳೆದ ಏಕದಿನ ವಿಶ್ವಕಪ್‌ನ್ನು ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದನ್ನೂ ಓದಿ : ರೋಹಿತ್ ಶರ್ಮಾ ಬದಲು ಹಾರ್ದಿಕ್ ಪಾಂಡ್ಯ ನಾಯಕ : 4 ಲಕ್ಷ ಫಾಲೋವರ್ಸ್ ಕಳೆದುಕೊಂಡ ಮುಂಬೈ ಇಂಡಿಯನ್ಸ್
Pat Cummins IPL 2024 expensive player: Hyderabad bought for a record 20.50 crore in IPL Auction