Pro Kabaddi League: ದಕ್ಷಿಣ ಭಾರತ ಡರ್ಬಿಯಲ್ಲಿ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್

ಪುಣೆ: (Pro Kabaddi League) ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ತಂಡಕ್ಕೆ ಟೇಬಲ್ ಟಾಪರ್ ಆಗುವ ಅವಕಾಶ ಎದುರಾಗಿದೆ. ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ಭಾನುವಾರ ನಡೆಯುವ ಪಂದ್ಯ(Pro Kabaddi League)ದಲ್ಲಿ ತಮಿಳ್ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.

ಮಹೇಂದರ್ ಸಿಂಗ್ ನಾಯಕತ್ವದ ಬೆಂಗಳೂರು ಬುಲ್ಸ್ ಇಲ್ಲಿಯವೆಗೆ ಆಡಿರುವ 12 ಪಂದ್ಯ(Pro Kabaddi League)ಗಳಿಂದ 7 ಗೆಲುವು 4 ಸೋಲು ಹಾಗೂ 1 ಟೈನೊಂದಿಗೆ 41 ಅಂಕ ಗಳಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. 13 ಪಂದ್ಯ(Pro Kabaddi League)ಗಳಿಂದ 7 ಗೆಲುವುಗಲೊಂದಿಗೆ 44 ಅಂಕ ಗಳಿಸಿರುವ ಪುಣೇರಿ ಪಲ್ಟನ್ ಅಗ್ರಸ್ಥಾನದಲ್ಲಿದ್ರೆ, 13 ಪಂದ್ಯಗಳಿಂದ 8 ಗೆಲುವು, 5 ಸೋಲು ಅನುಭವಿಸಿರುವ ಜೈಪುರ ಪಿಂಕ್ ಪ್ಯಾಂಥರ್ಸ್ 43 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ.

ಭಾನುವಾರ ನಡೆಯುವ ದಕ್ಷಿಣ ಭಾರತ ಡರ್ಬಿಯಲ್ಲಿ ತಮಿಳ್ ತಲೈವಾಸ್ ವಿರುದ್ಧ ಬೆಂಗಳೂರು ಬುಲ್ಸ್ ಗೆದ್ದರೆ 46 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ಅವಕಾಶವಿದೆ. ಮತ್ತೊಂದೆಡೆ ತಮಿಳ್ ತಲೈವಾಸ್ ತಂಡ 12 ಪಂದ್ಯಗಳಿಂದ 5 ಗೆಲುವು, 5 ಸೋಲು ಹಾಗೂ 2 ಟೈ ಫಲಿತಾಂಶಗಳೊಂದಿಗೆ 34 ಅಂಕ ಗಳಿಸಿದ್ದು ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಇದನ್ನೂ ಓದಿ : MS Dhoni With Amit Shah : ಕೇಂದ್ರ ಗೃಹ ಸಚಿವ ಅಮಿತ್‌ ಶಾ ಜೊತೆ ಎಂಎಸ್‌ ಧೋನಿ : ಪೋಟೋ ವೈರಲ್

ಭಾನುವಾರ ನಡೆಯುವ ಮತ್ತೊಂದು ಪಂದ್ಯದಲ್ಲಿ 2ನೇ ಆವೃತ್ತಿಯ ಚಾಂಪಿಯನ್ ಯು ಮುಂಬಾ, ಮೂರು ಬಾರಿಯ ಚಾಂಪಿಯನ್ಸ್ ಪಾಟ್ನಾ ಪೈರೇಟ್ಸ್ ಸವಾಲನ್ನು ಎದುರಿಸಲಿದೆ. ಯು ಮುಂಬಾ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು ಆಡಿರುವ 12 ಪಂದ್ಯಗಳಿಂದ 38 ಅಂಕ ಗಳಿಸಿದ್ದು ಅಂಕಪಟ್ಟಿಲ್ಲಿ 5 ಹಾಗೂ 6ನೇ ಸ್ಥಾನಗಳಲ್ಲಿವೆ.

ಇದನ್ನೂ ಓದಿ : Pakistan Vs England final : ಭಾರತವಿಲ್ಲದ ಟಿ20 ವಿಶ್ವಕಪ್ ಫೈನಲ್ ಹೇಗಿರಲಿದೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಶನಿವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ವಿರುದ್ಧ 57-32ರ ಭರ್ಜರಿ ಗೆಲುವು ದಾಖಲಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್, ಲೀಗ್’ನಲ್ಲಿ 8ನೇ ಗೆಲುವು ತನ್ನದಾಗಿಸಿಕೊಂಡಿತು. ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ವಾರಿಯರ್ಸ್ ಪಡೆ ಗುಜರಾತ್ ಜೈಂಟ್ಸ್ ತಂಡವನ್ನು 46-27ರ ಅಂತರದಲ್ಲಿ ಬಗ್ಗು ಬಡಿದರೆ, ತೆಲುಗು ಟೈಟನ್ಸ್ ವಿರುದ್ಧ ಯು.ಪಿ ಯೋಧಾ 41-30ರಲ್ಲಿ ಗೆದ್ದು ಒಟ್ಟು 40 ಅಂಕಗಳೊಂದಿಗೆ 4ನೇ ಸ್ಥಾನಕ್ಕೇರಿತು.

ಇದನ್ನೂ ಓದಿ : Yuzvendra Chahal: ಭಾರತದ ನಂ.1 ಟಿ20 ಸ್ಪಿನ್ನರ್‌ಗೆ ವಿಶ್ವಕಪ್‌ನಲ್ಲಿ ಆಡುವ ಭಾಗ್ಯ ಇಲ್ಲ..!

ಪ್ರೊ ಕಬಡ್ಡಿ ಲೀಗ್-9: ಭಾನುವಾರದ ಪಂದ್ಯಗಳು

  1. ಯು ಮುಂಬಾ Vs ಪಾಟ್ನಾ ಪೈರೇಟ್ಸ್
  2. ತಮಿಳ್ ತಲೈವಾಸ್ Vs ಬೆಂಗಳೂರು ಬುಲ್ಸ್

ಸ್ಥಳ: ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬಾಳೇವಾಡಿ; ಪುಣೆ (ಮಹಾರಾಷ್ಟ್ರ)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

(Pro Kabaddi League) In the 9th edition of the Pro Kabaddi League, the former champion Bangalore team has a chance to become the table topper. Bengaluru Bulls will top the points table if they win against Tamil Thalaivas in the match to be played at Chhatrapati Shivaji Sports Complex in Balewadi, Pune on Sunday.

Comments are closed.