Rahul lucky for Pujara Gill :1443 ದಿನಗಳ ಪೂಜಾರ ಶತಕ, ಗಿಲ್ ಚೊಚ್ಚಲ ಟೆಸ್ಟ್ ಶತಕ; ಮತ್ತೆ ಅದೃಷ್ಟ ತಂದ ರಾಹುಲ್ ನಾಯಕತ್ವ

ಛಟ್ಟೋಗ್ರಾಮ್:(Rahul lucky for Pujara Gill) ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಅವರ ನಾಯಕತ್ವ ಟೀಮ್ ಇಂಡಿಯಾ ಆಟಗಾರರಿಗೆ ಅದೃಷ್ಟ ಎಂಬುದು ಮತ್ತೆ ಸಾಬೀತಾಗಿದೆ.ಆತಿಥೇಯ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪ್ರಥಮ ಟೆಸ್ಟ್ (India Vs Bangladesh test match) ಪಂದ್ಯದಲ್ಲಿ ಭಾರತ ರಾಹುಲ್ ಅವರ ನಾಯಕತ್ವದಲ್ಲಿ ಆಡುತ್ತಿದೆ. ರಾಹುಲ್ ಸಾರಥ್ಯದಲ್ಲಿ 3ನೇ ಕ್ರಮಾಂಕದ ಅನುಭವಿ ಬ್ಯಾಟ್ಸ್’ಮನ್ ಚೇತೇಶ್ವರ್ ಪೂಜಾರ (Cheteshwar Pujara) 1443 ದಿನಗಳ ನಂತರ ಟೆಸ್ಟ್ ಶತಕ ಬಾರಿಸಿದ್ದಾರೆ.

(Rahul lucky for Pujara Gill)35 ವರ್ಷದ ಚೇತೇಶ್ವರ್ ಪೂಜಾರ ಕಳೆದ ನಾಲ್ಕು ವರ್ಷಗಳಿಂದ ಟೆಸ್ಟ್ ಕ್ರಿಕೆಟ್’ನಲ್ಲಿ ಶತಕ ಬಾರಿಸಿರಲಿಲ್ಲ. 2019ರಲ್ಲಿ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 193 ರನ್ ಗಳಿಸಿದ್ದ ಪೂಜಾರ, ನಂತರ ನಿರಂತರವಾಗಿ ಶತಕ ವಂಚಿತರಾಗುತ್ತಾ ಬಂದಿದ್ದರು. ಇದೀಗ 52 ಟೆಸ್ಟ್ ಇನ್ನಿಂಗ್ಸ್’ಗಳ ನಂತರ ಚೇತೇಶ್ವರ್ ಪೂಜಾರ ಶತಕ ಬಾರಿಸಿದ್ದಾರೆ.ಬಾಂಗ್ಲಾದೇಶ ವಿರುದ್ಧ ಜಹೂರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್’ನಲ್ಲಿ 90 ರನ್ನಿಗೆ ಔಟಾಗಿ ಶತಕ ವಂಚಿತರಾಗಿದ್ದ ಪೂಜಾರ, 2ನೇ ಇನ್ನಿಂಗ್ಸ್’ನಲ್ಲಿ ಅಜೇಯ 102 ರನ್ ಗಳಿಸುವ ಮೂಲಕ ಶತಕದ ಬರ ನೀಗಿಸಿಕೊಂಡಿದ್ದಾರೆ.

ಯುವ ಬಲಗೈ ಆರಂಭಿಕ ಬ್ಯಾಟ್ಸ್’ಮನ್ ಶುಭಮನ್ ಗಿಲ್ (Shubman Gill) ಅವರಿಗೂ ರಾಹುಲ್ ನಾಯಕತ್ವ ಅದೃಷ್ಟ ತಂದಿದೆ. ಕಳೆದ ಜಿಂಬಾಬ್ವೆ ಪ್ರವಾಸದಲ್ಲಿ ರಾಹುಲ್ ನಾಯಕತ್ವದಲ್ಲೇ ಚೊಚ್ಚಲ ಏಕದಿನ ಶತಕ ಬಾರಿಸಿದ್ದ ಗಿಲ್, ಇದೀಗ ರಾಹುಲ್ ಕ್ಯಾಪ್ಟನ್ಸಿಯಲ್ಲೇ ಮೊದಲ ಟೆಸ್ಟ್ ಶತಕದ ಸಂಭ್ರಮವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್’ನಲ್ಲಿ ಆಕರ್ಷಕ ಆಟವಾಡಿದ ಗಿಲ್ 110 ರನ್ ಗಳಿಸಿ ಔಟಾದರು.71ನೇ ಅಂತಾರಾಷ್ಟ್ರೀಯ ಶತಕಕ್ಕಾಗಿ 3 ವರ್ಷಗಳ ಕಾಲ ಕಾದಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿಗೂ ಆ ಶತಕ ಒಲಿದದ್ದು ರಾಹುಲ್ ನಾಯಕತ್ವದಲ್ಲೇ.

ಕಳೆದ ಏಷ್ಯಾ ಕಪ್ ಟಿ20 ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ಕಿಂಗ್ ಕೊಹ್ಲಿ ಭರ್ಜರಿ ಶತಕ ಬಾರಿಸಿದ್ದರು. ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ 3ನೇ ಪಂದ್ಯದಲ್ಲಿ ರಾಹುಲ್ ನಾಯಕತ್ವದಲ್ಲೇ ಕೊಹ್ಲಿ 72ನೇ ಅಂತಾರಾಷ್ಟ್ರೀಯ ಶತಕ ಬಾರಿಸಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆ ಮುರಿದಿದ್ದರು. ಅದೇ ಪಂದ್ಯದಲ್ಲಿ ಇಶಾನ್ ಕಿಶನ್ ಸಿಡಿಲಬ್ಬರದ ದ್ವಿಶತಕ ಸಿಡಿಸಿದ್ದರು.ವಿಪರ್ಯಾಸ ಏನಂದ್ರೆ ಸಹ ಆಟಗಾರರಿಗೆ ರಾಹುಲ್ ನಾಯಕತ್ವ ಅದೃಷ್ಟ ತಂದು ಕೊಟ್ರೆ, ರಾಹುಲ್ ಮಾತ್ರ ಮುಗ್ಗರಿಸುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಎರಡೂ ಇನ್ನಿಂಗ್ಸ್’ಗಳಲ್ಲೂ ದೊಡ್ಡ ಮೊತ್ತ (22, 23) ಗಳಿಸುವಲ್ಲಿ ವಿಫಲರಾಗಿದ್ದಾರೆ.

ಇದನ್ನೂ ಓದಿ:Ranji Trophy Karnataka: ಸರ್ವಿಸಸ್ ವಿರುದ್ಧದ ಪಂದ್ಯ ಡ್ರಾ, 3 ಅಂಕಕ್ಕೆ ತೃಪ್ತಿ ಪಟ್ಟ ಕರ್ನಾಟಕ

ಇದನ್ನೂ ಓದಿ:Pro Kabaddi League final: ಕನ್ನಡಿಗನ ತಂಡಕ್ಕೆ ಜೈಪುರ ಸವಾಲ್, ಇಲ್ಲಿದೆ ಫೈನಲ್ ಪಂದ್ಯದ ಕಂಪ್ಲೀಟ್ ಮಾಹಿತಿ

ರಾಹುಲ್ ನಾಯಕತ್ವದಲ್ಲಿ ಸಹ ಆಟಗಾರರ ಶತಕ ಸಾಧನೆ
ಶುಭಮನ್ ಗಿಲ್: ಚೊಚ್ಚಲ ಏಕದಿನ ಶತಕ
ವಿರಾಟ್ ಕೊಹ್ಲಿ: 3 ವರ್ಷಗಳ ನಂತರ 71ನೇ ಅಂತಾರಾಷ್ಟ್ರೀಯ ಶತಕ
ವಿರಾಟ್ ಕೊಹ್ಲಿ: 72ನೇ ಅಂತಾರಾಷ್ಟ್ರೀಯ ಶತಕ
ಇಶಾನ್ ಕಿಶನ್: ಏಕದಿನ ಕ್ರಿಕೆಟ್’ನಲ್ಲಿ ಚೊಚ್ಚಲ ಶತಕ, ದ್ವಿಶತಕ
ಶುಭಮನ್ ಗಿಲ್: ಚೊಚ್ಚಲ ಟೆಸ್ಟ್ ಶತಕ
ಚೇತೇಶ್ವರ್ ಪೂಜಾರ: ನಾಲ್ಕು ವರ್ಷಗಳ ಬಳಿಕ ಟೆಸ್ಟ್ ಶತಕ

Rahul lucky for Pujara Gill Under the captaincy of Rahul, veteran batsman Cheteshwar Pujara, ranked 3rd, scored a Test century after 1443 days.

Comments are closed.