Pro Kabaddi play off matches : ಇಂದು ಪ್ಲೇ ಆಫ್ ಕದನ, ಬೆಂಗಳೂರು ಬುಲ್ಸ್‌ಗೆ ದಬಾಂಗ್ ಡೆಲ್ಲಿ ಚಾಲೆಂಜ್

ಮುಂಬೈ: ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ ಪ್ಲೇ ಆಫ್ ಪಂದ್ಯಗಳು ಇಂದು ಆರಂಭವಾಗಲಿದ್ದು, ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ (Bengaluru Bulls) ಮತ್ತು ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ (Dabang Delhi K.C) ಕೆ.ಸಿ ತಂಡಗಳು (Pro Kabaddi play off matches)ಮುಖಾಮುಖಿಯಾಗಲಿವೆ.

ಮುಂಬೈನ NSCI SVP ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಗೆದ್ದರೆ, ಸೆಮಿಫೈನಲ್’ಗೆ ಎಂಟ್ರಿ ಕೊಡಲಿದೆ. ಬೆಂಗಳೂರು ಬುಲ್ಸ್ ಎಲಿಮಿನೇಟರ್ ಪಂದ್ಯವನ್ನು ಗೆದ್ದರೆ ಮೊದಲ ಸೆಮಿಫೈನಲ್’ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಎದುರಾಳಿ.2ನೇ ಎಲಿಮಿನೇಟರ್ ಪಂದ್ಯದಲ್ಲಿ ತಮಿಳ್ ತಲೈವಾಸ್ (Tamil Talaiwas) ಪಡೆ ಯು.ಪಿ ಯೋಧಾ (U.P Yoddhas) ತಂಡವನ್ನು ಎದುರಿಸಲಿದೆ.

ಈ ಪಂದ್ಯದಲ್ಲಿ ಗೆಲ್ಲುವ ತಂಡ 2ನೇ ಸೆಮಿಫೈನಲ್’ನಲ್ಲಿ ಪುಣೇರಿ ಪಲ್ಟನ್ ಬಳಗವನ್ನು ಎದುರಿಸಲಿದೆ. ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆದಿರುವ ಕಾರಣ ಜೈಪುರ ಪಿಂಕ್ ಪ್ಯಾಂಥರ್ಸ್ ಮತ್ತು ಪುಣೇರಿ ಪಲ್ಟನ್ ತಂಡಗಳು ನೇರವಾಗಿ ಸೆಮಿಫೈನಲ್’ಗೆ ಅರ್ಹತೆ ಪಡೆದಿವೆ. 3ರಿಂದ 6ನೇ ಸ್ಥಾನ ಪಡೆದಿರುವ ಬೆಂಗಳೂರು ಬುಲ್ಸ್, ಯು.ಪಿ ಯೋಧಾ, ತಮಿಳ್ ತಲೈವಾಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳು ಎಲಿಮಿನೇಟರ್ ಪಂದ್ಯಗಳಲ್ಲಿ ಆಡಲಿವೆ. ಸೆಮಿಫೈನಲ್ ಪಂದ್ಯಗಳು ಡಿಸೆಂಬರ್ 15ರಂದು ನಡೆಯಲಿದ್ದು, ಫೈನಲ್ ಪಂದ್ಯ ಡಿಸೆಂಬರ್ 17ರಂದು ನಡೆಯಲಿದೆ.

ಪ್ರೊ ಕಬಡ್ಡಿ ಲೀಗ್-9: ಇಂದಿನ ಪಂದ್ಯಗಳು (Pro Kabaddi League play off matches) :
ಎಲಿಮಿನೇಟರ್-1: ಬೆಂಗಳೂರು ಬುಲ್ಸ್ Vs ದಬಾಂಗ್ ಡೆಲ್ಲಿ ಕೆ.ಸಿ
ಎಲಿಮಿನೇಟರ್-2: ಯು.ಪಿ ಯೋಧಾ Vs ತಮಿಳ್ ತಲೈವಾಸ್

ಇದನ್ನೂ ಓದಿ : Media pro Kabaddi Championship : ಮಾಧ್ಯಮ, ಪೊಲೀಸ್ ಕಬ್ಬಡಿ ಟೂರ್ನಿಮೆಂಟ್ ವಿಜೇತರಿಗೆ ಪ್ರಶಸ್ತಿ ಪ್ರದಾನ

ಇದನ್ನೂ ಓದಿ : Pro Kabaddi League: ಫೋಟೋ ಫಿನಿಷ್ ರೇಸ್‌ನಲ್ಲಿ ಬೆಂಗಳೂರು ಬುಲ್ಸ್, ಪುಣೇರಿ ಪಲ್ಟನ್ ಪಡೆಗೆ ಸೋಲು

ಇದನ್ನೂ ಓದಿ : Pro Kabaddi League : ಬುಲ್ಸ್‌ಗೆ ಸ್ಟೀಲರ್ಸ್ ಸವಾಲ್, ಅಗ್ರಸ್ಥಾನದ ಮೇಲೆ ಕೆಂಪುಗೂಳಿಗಳ ಕಣ್ಣು

ಸ್ಥಳ: ಡೋಮ್ NSCI SVP ಒಳಾಂಗಣ ಕ್ರೀಡಾಂಗಣ, ಮುಂಬೈ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Pro Kabaddi League play off matches today, Dabang Delhi challenge for Bengaluru Bulls

Comments are closed.