ಸೋಮವಾರ, ಏಪ್ರಿಲ್ 28, 2025
HomeSportsCricketSpecial Gift for Virat Kohli: ವಿರಾಟ್ ಕೊಹ್ಲಿಗೆ ವಿಶೇಷ ಉಡುಗೊರೆ ನೀಡಿದ ಪಂಜಾಬ್ ಮಹಿಳೆ...

Special Gift for Virat Kohli: ವಿರಾಟ್ ಕೊಹ್ಲಿಗೆ ವಿಶೇಷ ಉಡುಗೊರೆ ನೀಡಿದ ಪಂಜಾಬ್ ಮಹಿಳೆ ; ಗಿಫ್ಟ್ ನೋಡಿ ಕಿಂಗ್ ಫುಲ್ ಫಿದಾ

- Advertisement -

ಮೊಹಾಲಿ: Virat Kohli special gift : ಕಿಂಗ್ ಕೊಹ್ಲಿ ಅಂದ್ರೆ ಅಭಿಮಾನಿಗಳಿಗೆ ಅಚ್ಚುಮೆಚ್ಟು. ವಿರಾಟ್ ಕೊಹ್ಲಿ ಆಟಕ್ಕೆ ಮನ ಸೋಲದವರೇ ಇಲ್ಲ. ರನ್ ಮಷಿನ್ ವಿರಾಟ್ ಕೊಹ್ಲಿಗೆ ಜಗತ್ತಿನಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಂತಹ ಒಬ್ಬ ಅಭಿಮಾನಿಯಿಂದ ವಿರಾಟ್ ಕೊಹ್ಲಿಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ.

ಮಂಗಳವಾರ ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (India Vs Australia T20 Series) ತಂಡಗಳ ನಡುವೆ ಟಿ20 ಪಂದ್ಯ ನಡೆದಿತ್ತು. ಆ ಪಂದ್ಯಕ್ಕೆ ಮುನ್ನಾ ದಿನ, ಅಂದರೆ ಸೋಮವಾರ ಭಾರತ ತಂಡದ ಪಿಸಿಎ ಮೈದಾನಕ್ಕೆ ಅಭ್ಯಾಸಕ್ಕಾಗಿ ಆಗಮಿಸುವ ವೇಳೆ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯವರಿಗೆ ಅಚ್ಚರಿಯೊಂದು ಕಾದಿತ್ತು. ಕಿಂಗ್ ಕೊಹ್ಲಿ ಭೇಟಿಗೆ ಮಹಿಳೆಯೊಬ್ಬರು ಕಾದು ಕೂತಿದ್ದರು. ಅವರ ಕೈಯಲ್ಲೊಂದು ಉಡುಗೊರೆಯೂ ಇತ್ತು. ಅದು ಆಕೆಯೇ ರಚಿಸಿದ್ದ ವಿರಾಟ್ ಕೊಹ್ಲಿಯವರ ಪೇಂಟಿಂಗ್ (handmade painting). ಅದನ್ನು ಕೊಹ್ಲಿಗೆ ನೀಡಲು ಆ ಮಹಿಳೆ ಕಾತರಿಸಿದ್ದರು. ಇದನ್ನು ತಿಳಿದ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಆ ಮಹಿಳೆಯನ್ನು ವಿರಾಟ್ ಕೊಹ್ಲಿ ಅವರಿಗೆ ಭೇಟಿ ಮಾಡಿಸಿದ್ದಾರೆ. ತನ್ನ ನೆಚ್ಚಿನ ಆಟಗಾರನಿಗೆ ತಾನೇ ತಯಾರಿಸಿದ ಪೇಂಟಿಂಗನ್ನು ನೀಡಿದ ಆ ಮಹಿಳೆಯ ಆನಂದಕ್ಕೆ ಪಾರವೇ ಇರಲಿಲ್ಲ. ವಿಶೇಷ ಉಡುಗೊರೆಯನ್ನು ನೋಡಿ ವಿರಾಟ್ ಕೊಹ್ಲಿ ಕೂಡ ಒಂದು ಕ್ಷಣ ಭಾವುಕರಾಗಿ ನಿಂತು ಬಿಟ್ಟಿದ್ದಾರೆ. ಈ ವೀಡಿಯೊವನ್ನು ಪಂಜಾಬ್ ಕ್ರಿಕೆಟ್ ಸಂಸ್ಥೆ ತನ್ನ ಇನ್’ಸ್ಟಾಗ್ರಾಂ ಖಾತೆಯಲ್ಲಿ ಪ್ರಕಟಿಸಿದೆ.

https://www.instagram.com/reel/CiszCgfBn40/?utm_source=ig_web_copy_link

ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ 4 ವಿಕೆಟ್’ಗಳ ಗೆಲುವು ದಾಖಲಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಏಷ್ಯಾ ಕಪ್’ನಲ್ಲಿ ಅಬ್ಬರಿಸಿ ಅಮೋಘ ಫಾರ್ಮ್’ನಲ್ಲಿ ವಿರಾಟ್ ಕೊಹ್ಲಿ ಆಸೀಸ್ ವಿರುದ್ಧ 7 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿ ಔಟಾಗಿದ್ದರು. ಕೆ.ಎಲ್ ರಾಹುಲ್ (55), ಹಾರ್ದಿಕ್ ಪಾಂಡ್ಯ (ಅಜೇಯ 71) ಹಾಗೂ ಸೂರ್ಯಕುಮಾರ್ ಯಾದವ್ (46) ಅವರ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ಬೌಲರ್’ಗಳ ವೈಫಲ್ಯದಿಂದ ಭಾರತ ಪಂದ್ಯ ಸೋತಿತ್ತು.
3 ಪಂದ್ಯಗಳ ಸರಣಿಯ 2ನೇ ಪಂದ್ಯ ನಾಳೆ (ಸೆಪ್ಟೆಂಬರ್ 23) ನಾಗ್ಪುರದಲ್ಲಿ ನಡೆಯಲಿದ್ದು, ಸರಣಿಯನ್ನು ಜೀವಂತವಾಗಿಡಬೇಕಾದರೆ ಭಾರತ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಇದನ್ನೂ ಓದಿ : Harmanpreet Kaur : 100 ಎಸೆತಗಳಲ್ಲಿ 100 ರನ್.. 111 ಎಸೆತಗಳಲ್ಲಿ 143 ರನ್.. ಕೌರ್ ರೌದ್ರಾವತಾರಕ್ಕೆ ಬೆಚ್ಚಿದ ಇಂಗ್ಲೆಂಡ್

ಇದನ್ನೂ ಓದಿ : Smriti Mandhana Record : ಸ್ಮೃತಿ ಮಂಧಾನ@3000: ಮಿಥಾಲಿ ರಾಜ್ ದಾಖಲೆ ಪುಡಿಗಟ್ಟಿದ ಕ್ರಿಕೆಟ್ ಮೈದಾನದ ಮೋಹಕ ತಾರೆ

Punjabi woman who gave a special gift to Virat Kohli

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular