IPL 2024 play off RCB Vs RR : ಅಹ್ಮದಾಬಾದ್: ಸತತ ಆರು ಗೆಲುವುಗಳೊಂದಿಗೆ ಐಪಿಎಲ್ ಪ್ಲೇ ಆಫ್’ಗೆ (IPL 2024 play off) ಲಗ್ಗೆ ಇಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Benagluru) ತಂಡ, ಇಂದು ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ತಂಡವನ್ನು ಎದುರಿಸಲಿದೆ.

ಆರ್’ಸಿಬಿ Vs ರಾಜಸ್ಥಾನ್ (RCB Vs RR) ನಡುವಿನ ಪಂದ್ಯದಲ್ಲಿ ಗೆದ್ದ ತಂಡ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆದರೆ, ಸೋತ ತಂಡ ಟೂರ್ನಿಯಿಂದ ನಿರ್ಗಮಿಸಲಿದೆ. ಹೀಗಾಗಿ ಈ ಪಂದ್ಯಕ್ಕೆ ಕ್ವಾರ್ಟರ್ ಫೈನಲ್ ಮಹತ್ವ. ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 27 ರನ್’ಗಳಿಂದ ಬಗ್ಗು ಬಡಿದಿದ್ದ ರಾಯಲ್ ಚಾಲೆಂಜರ್ಸ್, 4ನೇ ತಂಡವನ್ನು ಪ್ಲೇ ಫ್ ಪ್ರವೇಶಿಸಿತ್ತು.
ಫಾಫ್ ಡುಪ್ಲೆಸಿಸ್ ನಾಯಕತ್ವದ ಆರ್’ಸಿಬಿ, ಲೀಗ್ ಹಂತದಲ್ಲಿ ಆಡಿದ ಮೊದಲ ಎಂಟು ಪಂದ್ಯಗಳಲ್ಲಿ ಏಳು ಸೋಲು ಕಂಡಿತ್ತು. ಈ ಪೈಕಿ ಆರು ಸತತ ಸೋಲುಗಳು ಆರ್’ಸಿಬಿಯನ್ನು ಕಂಗೆಡಿಸಿದ್ದವರು. ಆದರೆ ಏಪ್ರಿಲ್ 21ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 1 ರನ್ನಿಂದ ಸೋಲು ಕಂಡ ನಂತರ, ಆರ್’ಸಿಬಿ ಟೂರ್ನಿಯಲ್ಲಿ ಮತ್ತೆ ಸೋತೇ ಇಲ್ಲ. ಸತತ ಆರು ಗೆಲುವುಗಳನ್ನು ದಾಖಲಿಸಿ ನಂಬಲಸಾಧ್ಯ ಕಂಬ್ಯಾಕ್’ನೊಂದಿಗೆ ನಾಕೌಟ್ ಹಂತಕ್ಕೇರಿದೆ.
ಆರ್’ಸಿಬಿಯ ಸತತ 6 ಗೆಲುವುಗಳು:
Vs ಸನ್ ರೈಸರ್ಸ್ ಹೈದರಾಬಾದ್: 35 ರನ್ ಗೆಲುವು
Vs ಗುಜರಾತ್ ಟೈಟನ್ಸ್: 9 ವಿಕೆಟ್ ಗೆಲುವು
Vs ಗುಜರಾತ್ ಟೈಟನ್ಸ್: 4 ವಿಕೆಟ್ ಗೆಲುವು
Vs ಪಂಜಾಬ್ ಕಿಂಗ್ಸ್: 60 ರನ್ ಗೆಲುವು
Vs ಡೆಲ್ಲಿ ಕ್ಯಾಪಿಟಲ್ಸ್: 47 ರನ್ ಗೆಲುವು
Vs ಚೆನ್ನೈ ಸೂಪರ್ ಕಿಂಗ್ಸ್: 27 ರನ್ ಗೆಲುವು
ಮತ್ತೊಂದೆಡೆ ಮೊದಲ 9 ಪಂದ್ಯಗಳಲ್ಲಿ 8 ಗೆಲುವು ದಾಖಲಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡ, ಕಳೆದ ಐದು ಪಂದ್ಯಗಳಲ್ಲಿ ಗೆಲುವಿನ ಮುಖವನ್ನೇ ಕಂಡಿಲ್ಲ. ಸತತ ನಾಲ್ಕು ಸೋಲು ಕಂಡಿರುವ ರಾಜಸ್ಥಾನ ರಾಯಲ್ಸ್’ನ ಅಂತಿಮ ಲೀಗ್ ಪಂದ್ಯ ಮಳೆಯಿಂದ ರದ್ದಾಗಿದೆ.

ಐಪಿಎಲ್-2024: ಎಲಿನಿಮೇಟರ್ ಪಂದ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ರಾಜಸ್ಥಾನ ರಾಯಲ್ಸ್
ಯಾವಾಗ: ಮೇ 22, 2024 (ಬುಧವಾರ)
ಎಲ್ಲಿ: ನರೇಂದ್ರ ಮೋದಿ ಕ್ರೀಡಾಂಗಣ, ಅಹ್ಮದಾಬಾದ್
ಎಷ್ಟು ಗಂಟೆಗೆ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಜಿಯೋ ಸಿನಿಮಾ
ಇದನ್ನೂ ಓದಿ : Chris Gayle Play For RCB Next Year : ಮುಂದಿನ ವರ್ಷ ಆರ್’ಸಿಬಿ ಪರ ಆಡ್ತಾರಾ ಕ್ರಿಸ್ ಗೇಲ್ ? ಗೇಲ್’ಗೆ ಬಿಗ್ ಆಫರ್ ಕೊಟ್ಟ ಕೊಹ್ಲಿ!
ರಾಯಲ್ ಚಾಲೆಂಜರ್ಸ್ ಸಂಭಾವ್ಯ ಪ್ಲೇಯಿಂಗ್ XI:
1.ವಿರಾಟ್ ಕೊಹ್ಲಿ
2. ಫಾಫ್ ಡುಪ್ಲೆಸಿಸ್ (ನಾಯಕ)
3.ರಜತ್ ಪಟಿದಾರ್
4.ಕ್ಯಾಮರೂನ್ ಗ್ರೀನ್
5.ಗ್ಲೆನ್ ಮ್ಯಾಕ್ಸ್’ವೆಲ್
6.ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)
7.ಮಹಿಪಾಲ್ ಲೋಮ್ರೋರ್
8.ಕರಣ್ ಶರ್ಮಾ
9.ಮೊಹಮ್ಮದ್ ಸಿರಾಜ್
10. ಯಶ್ ದಯಾಳ್
11.ಲ್ಯೂಕಿ ಫರ್ಗ್ಯುಸನ್
ಇದನ್ನೂ ಓದಿ : RCB Big Offer To KL Rahul: ಎಲ್ಲಾ ನಿನ್ನವರೇ.. ಇಲ್ಲಿ ಯಾರೂ ನಿನ್ನನ್ನು ಬೈಯುವವರಿಲ್ಲ.. ರಾಹುಲ್’ಗೆ ಹೀಗೊಂದು RCB ಆಫರ್..!
ರಾಜಸ್ಥಾನ ರಾಯಲ್ಸ್ ಸಂಭಾವ್ಯ ಪ್ಲೇಯಿಂಗ್ XI:
1. ಟಾಮ್ ಕೊಹ್ಲರ್-ಕ್ಯಾಡ್ಮೋರ್
2. ಯಶಸ್ವಿ ಜೈಸ್ವಾಲ್
3. ಸಂಜು ಸ್ಯಾಮ್ಸನ್ (ನಾಯಕ, ವಿಕೆಟ್ ಕೀಪರ್)
4.ರಿಯಾನ್ ಪರಾಗ್
5.ಶಿಮ್ರಾನ್ ಹೆಟ್ಮಾಯರ್
6.ರೊವ್ಮನ್ ಪಾವೆಲ್
7.ರವಿಚಂದ್ರನ್ ಅಶ್ವಿನ್
8.ಯುಜ್ವೇಂದ್ರ ಚಹಲ್
9.ಟ್ರೆಂಟ್ ಬೌಲ್ಟ್
10. ಆವೇಶ್ ಖಾನ್
11.ಸಂದೀಪ್ ಶರ್ಮಾ
RCB Vs RR IPL 2024 play off Royal Challengers Bengaluru vs Rajasthan Royals in Ahmedabad