ಸೋಮವಾರ, ಏಪ್ರಿಲ್ 28, 2025
HomeSportsCricketRishabh Pant and actress Urvashi Rautela: ಕ್ರಿಕೆಟಿಗ ರಿಷಭ್ ಪಂತ್-ನಟಿ ಊರ್ವಶಿ ರೌಟೇಲಾ ಮಧ್ಯೆ...

Rishabh Pant and actress Urvashi Rautela: ಕ್ರಿಕೆಟಿಗ ರಿಷಭ್ ಪಂತ್-ನಟಿ ಊರ್ವಶಿ ರೌಟೇಲಾ ಮಧ್ಯೆ ಏನಿದು ಹೊಸ ಕಥೆ..? ತೆರೆಯ ಹಿಂದೆ ನಡೆದದ್ದೇನು?

- Advertisement -

ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (Rishabh Pant) ಮತ್ತು ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಮಧ್ಯೆ ಕಳೆದ ಕೆಲ ವರ್ಷಗಳಿಂದ ಗೆಳೆತನವಿದೆ. ಇಬ್ಬರದ್ದು ಗೆಳೆತನವನ್ನೂ ಮೀರಿದ ಬಾಂಧವ್ಯ ಎಂಬ ಸುದ್ದಿಯೂ ಹರಿದಾಡಿತ್ತು. ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದ ಪೋಸ್ಟ್’ಗಳು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದವು.

ಆದರೆ ಈಗ ಕ್ರಿಕೆಟಿಗ ರಿಷಭ್ ಪಂತ್ (Rishabh Pant) ಮತ್ತು ನಟಿ ಊರ್ವಶಿ ರೌಟೇಲಾ ಮಧ್ಯೆ ಕೋಲ್ಡ್ ವಾರ್ ಶುರುವಾಗಿದೆ. ಇಬ್ಬರೂ ಸಾಮಾಜಿಕ ಜಾಲತಾಣದ ಮೂಲಕ ಒಬ್ಬರಿಗೊಬ್ಬ ಟಕ್ಕರ್ ಕೊಡ್ತಿದ್ದಾರೆ. ಇಷ್ಟಕ್ಕೆಲ್ಲಾ ನಾಂದಿ ಹಾಡಿದ್ದು ಇತ್ತೀಚೆಗೆ ನಟಿ ಊರ್ವಶಿ ಸಂದರ್ಶನವೊಂದರಲ್ಲಿ ರಿಷಭ್ ಪಂತ್ ಬಗ್ಗೆ ಆಡಿದ ಮಾತು.

“ನಾನು ಯಾವುದೋ ಶೂಟಿಂಗ್’ಗಾಗಿ ದೆಹಲಿಗೆ ಹೋಗಿದ್ದಾಗ ಹೋಟೆಲ್ ಒಂದರಲ್ಲಿ ತಂಗಿದ್ದೆ. ಆಗ ಅಲ್ಲಿಗೆ ಬಂದಿದ್ದ RP ನನ್ನನ್ನು ಭೇಟಿ ಮಾಡಲು ಹೋಟೆಲ್ ಲಾಬಿಯಲ್ಲಿ ಇಡೀ ರಾತ್ರಿ ಕಾದು ಕೂತಿದ್ದ. ಆದರೆ ನಾನು ಶೂಟಿಂಗ್’ನಲ್ಲಿ ಸುಸ್ತಾಗಿದ್ದ ಕಾರಣ ಅವನನ್ನು ಅಲ್ಲಿ ಭೇಟಿ ಮಾಡಲಿಲ್ಲ. ಬೆಳಗ್ಗೆ ಎದ್ದು ನೋಡಿದಾಗ ನನ್ನ ಫೋನ್’ನಲ್ಲಿ 16-17 ಮಿಸ್ ಕಾಲ್’ಗಳಿದ್ದವು. ನನಗೆ ತುಂಬಾ ಬೇಸರವಾಯಿತು. ನಂತರ ಆತನಿಗೆ ಕರೆ ಮಾಡಿ ಮುಂಬೈಗೆ ಬಂದಾಗ ನಿನ್ನನ್ನು ಭೇಟಿ ಮಾಡುವುದಾಗಿ ಆತನಿಗೆ ತಿಳಿಸಿದೆ” ಎಂದು ರಿಷಭ್ ಪಂತ್ (Rishabh Pant) ಅವರ ಹೆಸರನ್ನು ಹೇಳದೆ RP ಎಂದು ಸಂದರ್ಶನದಲ್ಲಿ ನಟಿ ಊರ್ವಶಿ ರೌಟೇಲಾ ಹೇಳಿದ್ದರು.

ನಟಿ ಊರ್ವಶಿ ಸಂದರ್ಶನದಲ್ಲಿ ಆಡಿದ ಮಾತು ವೈರಲ್ ಆಗ್ತಿದ್ದಂತೆ ರಿಷಭ್ ಪಂತ್ (Rishabh Pant) ಸಾಮಾಜಿಕ ಜಾಲತಾಣವೊಂದರಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. “ಅಕ್ಕಾ, ನನ್ನ ಹಿಂದೆ ಯಾಕೆ ಸುತ್ತುತ್ತಿದ್ದೀಯಾ” ಎಂದು ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದ ರಿಷಭ್ ಪಂತ್, ಕೆಲವೇ ಕ್ಷಣಗಳನ್ನು ಆ ಪೋಸ್ಟನ್ನು ಡಿಲೀಟ್ ಮಾಡಿದ್ದರು.

ರಿಷಭ್ ಪಂತ್ (Rishabh Pant) ಪೋಸ್ಟ್ ಡಿಲೀಸ್ ಮಾಡ್ತಿದ್ದಂತೆ ಮತ್ತೆ ಊರ್ವಶಿ ರೌಟೇಲಾ ಇನ್’ಸ್ಟಾಗ್ರಾಂನಲ್ಲೇ RPಗೆ ತಿರುಗೇಟು ಕೊಟ್ಟಿದ್ದಾರೆ. “ಚೋಟು ಭಯ್ಯಾ ಬ್ಯಾಟ್ ಮತ್ತು ಬಾಲ್ ಮಾತ್ರ ಆಡಬೇಕು. ಚಿಕ್ಕ ಮಗುವಿನೊಂದಿಗೆ ಕುಖ್ಯಾತಿಯನ್ನು ಪಡೆಯಲು ನಾನು ಮುನ್ನಿಯಲ್ಲ. ಡಾರ್ಲಿಂಗ್, ನಿನಗೆ ರಕ್ಷಾಬಂಧನದ ಶುಭಾಶಯಗಳು RP ಚೋಟು ಭಯ್ಯಾ” ಎಂದು ಇನ್’ಸ್ಟಾಗ್ರಾಂನಲ್ಲಿ ನಟಿ ಊರ್ವಶಿ ರೌಟೇಲಾ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಅಸಲಿ ಕಾರಣ ಬಿಚ್ಚಿಟ್ಟ ಹಂತಕರು

ರಿಷಭ್ ಪಂತ್ ಮತ್ತು ನಟಿ ಊರ್ವಶಿ ರೌಟೇಲಾ ನಡುವಿನ ಈ ಕೋಲ್ಡ್ ವಾರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಂದ ಹಾಗೆ ರಿಷಬ್ ಪಂತ್’ಗೆ 24 ವರ್ಷ, ಊರ್ವಶಿ ರೌಟೇಲಾಗೆ 28 ವರ್ಷ.

Rishabh Pant and actress Urvashi Rautela new story behind screen

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular