Johnson & Johnson : ವಿಶ್ವಾದ್ಯಂತ ಜಾನ್ಸನ್​ & ಜಾನ್ಸನ್​​ ಬೇಬಿ ಪೌಡರ್ ಮಾರಾಟ ಸ್ಥಗಿತಗೊಳಿಸಿದ ಕಂಪನಿ

Johnson & Johnson : ಮಕ್ಕಳ ತ್ವಚೆಯ ರಕ್ಷಣೆಯ ಉತ್ಪನ್ನಗಳನ್ನು ತಯಾರಿಸುವಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಜಾನ್ಸನ್​ & ಜಾನ್ಸನ್​​​ ಕಂಪನಿಯು 2023ರಿಂದ ಟಾಲ್ಕ್​ ಆಧಾರಿತ ಬೇಬಿ ಪೌಡರ್​ ಮಾರಾಟವನ್ನು ನಿಲ್ಲಿಸಲಿದೆ ಎಂದು ಮಾಹಿತಿ ನೀಡಿದೆ. ಸಾವಿರಾರು ಗ್ರಾಹಕರು ಟಾಲ್ಕ್​ ಪೌಡರ್​​ನ ಸುರಕ್ಷತೆ ಕುರಿತಂತೆ ಮೊಕದ್ದಮೆಗಳನ್ನು ಹೂಡಿದ 2 ವರ್ಷಗಳ ಬಳಿಕ ಈ ನಿರ್ಧಾರವನ್ನು ಹೊರಡಿಸಿದೆ.


ಎರಡು ವರ್ಷಗಳ ಹಿಂದೆಯೇ ಅಮೆರಿಕದಲ್ಲಿ ಜಾನ್ಸನ್​ & ಜಾನ್ಸನ್​ ಕಂಪನಿಯ ಟಾಲ್ಕ್​ ಪೌಡರ್​ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಮುಂದಿನ ವರ್ಷದಿಂದ ವಿಶ್ವದಾದ್ಯಂತ ಈ ಪೌಡರ್​ನ ಮಾರಾಟ ನಿಲ್ಲಿದೆ. ಸುಮಾರು 38 ಸಾವಿರಕ್ಕೂ ಅಧಿಕ ಮಂದಿ ಜಾನ್ಸನ್​​ & ಜಾನ್ಸನ್​​ ಬೇಬಿ ಟಾಲ್ಕ್​ ಪೌಡರ್​ ಬಗ್ಗೆ ದೂರು ನೀಡಿದ ಬೆನ್ನಲ್ಲೇ ಕಂಪನಿಯು ಈ ಘೋಷಣೆಯನ್ನು ಮಾಡಿದೆ.


2020ರಲ್ಲಿ ಜಾನ್ಸನ್​​ & ಜಾನ್ಸನ್​ ಅಮೆರಿಕ ಹಾಗೂ ಕೆನಡಾದಲ್ಲಿ ತನ್ನ ಬೇಬಿ ಟಾಲ್ಕ್​ ಪೌಡರ್​ ಮಾರಾಟವನ್ನು ನಿಲ್ಲಿಸುವುದಾಗಿ ಘೋಷಣೆಯಾಗಿತ್ತು.ಈ ದೇಶಗಳಲ್ಲಿ ಜಾನ್ಸನ್​ & ಜಾನ್ಸನ್​​ ಬೇಬಿ ಟಾಲ್ಕ್​ ಪೌಡರ್​ನ ಸುರಕ್ಷತೆಯ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಉತ್ಪನ್ನದ ಬೇಡಿಕೆ ಗಣನೀಯವಾಗಿ ಕಡಿಮೆಯಾಗಿದ್ದರಿಂದ ಈ ನಿರ್ಧಾರವನ್ನು ಕೈಗೊಂಡಿತ್ತು.


38 ಸಾವಿರಕ್ಕೂ ಅಧಿಕ ಗ್ರಾಹಕರು ಜಾನ್ಸನ್​ & ಜಾನ್ಸನ್​​ನ ಈ ಉತ್ಪನ್ನದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಪೌಡರ್​ನಲ್ಲಿರುವ ಹಾನಿಕಾರಕ ಫೈಬರ್ ಆಸ್ಬೆಸ್ಟೋಸ್ ಕ್ಯಾನ್ಸರ್​ಗೆ ಕಾರಣವಾಗುತ್ತದೆ. ಹೀಗಾಗಿ ಉತ್ಪನ್ನದ ಸುರಕ್ಷತೆಯನ್ನು ಪ್ರಶ್ನಿಸಿ ಗ್ರಾಹಕರು ಕಾನೂನು ಹೋರಾಟಕ್ಕೆ ಮುಂದಾದ ಬಳಿಕ ಕಂಪನಿಯು ಸಾವಿರಾರು ಕೋಟಿ ರೂಪಾಯಿ ದಂಡ ಪಾವತಿ ಮಾಡಿದೆ. ಇದೀಗ ತಾನು ಈ ಉತ್ಪನ್ನವನ್ನು ಮಾರಾಟ ಮಾಡುವುದಿಲ್ಲ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ.


ಆದರೆ ಗ್ರಾಹಕರು ಮಾಡಿರುವ ಈ ಯಾವುದೇ ಆರೋಪಗಳನ್ನು ಜಾನ್ಸನ್​ & ಜಾನ್ಸನ್​ ಕಂಪನಿಯು ಒಪ್ಪಿಕೊಂಡಿಲ್ಲ. ದಶಕಗಳ ವೈಜ್ಞಾನಿಕ ಪರೀಕ್ಷೆ ಹಾಗೂ ಸುರಕ್ಷತೆಯ ಮಾನದಂಡಗಳನ್ನು ಪಾಲನೆ ಮಾಡಿದ್ದು ಕ್ಯಾನ್ಸರ್​ಗೆ ಕಾರಣವಾಗುವ ಯಾವುದೇ ರಾಸಾಯನಿಕಗಳು ಈ ಉತ್ಪನ್ನದಲ್ಲಿಲ್ಲ ಎಂದು ಜಾನ್ಸನ್​ & ಜಾನ್ಸನ್​ ಕಂಪನಿಯು ಮತ್ತೊಮ್ಮೆ ಪುನರುಚ್ಛರಿಸಿದೆ.

ಇದನ್ನು ಓದಿ : Shirasi Marikamba Temple : ಶಿರಸಿಯ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ದೇಗುಲದ ಪ್ರಸಾದಕ್ಕೆ ಬಿಹೆಚ್​ಒಜಿ ಪ್ರಮಾಣ ಪತ್ರ

ಇದನ್ನೂ ಓದಿ : Praveen Nettaru’s murder case : ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಅಸಲಿ ಕಾರಣ ಬಿಚ್ಚಿಟ್ಟ ಹಂತಕರು

Johnson & Johnson to stop selling talc-based baby powder globally in 2023

Comments are closed.