Rohit Sharma : ನಾಳೆಯಿಂದ ಇಂಡಿಯಾ-ವಿಂಡೀಸ್ ಏಕದಿನ ಸರಣಿ, 193 ರನ್ ಬಾರಿಸಿದ್ರೆ ರೋ”ಹಿಟ್” ಗ್ರೇಟ್ ಓಪನರ್

ಬಾರ್ಬೆಡೋಸ್: Rohit Sharma : ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಗೆದ್ದಿರುವ ಭಾರತ ತಂಡ, ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಕೆರಿಬಿಯನ್ನರ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ (India Vs West Indies ODI series) ಮೊದಲ ಪಂದ್ಯ ನಾಳೆ (ಗುರುವಾರ, ಜುಲೈ 27) ಬಾರ್ಬೆಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿರುವ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ. ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಮೋಘ ದಾಖಲೆಯೊಂದರ ನಿರೀಕ್ಷೆಯಲ್ಲಿದ್ದಾರೆ. ರೋಹಿತ್ ಇನ್ನು 193 ರನ್ ಗಳಿಸಿದ್ರೆ ಏಕದಿನ ಕ್ರಿಕೆಟ್’ನಲ್ಲಿ ಆರಂಭಿಕನಾಗಿ 8 ಸಾವಿರ ರನ್‌ಗಳನ್ನು ಪೂರ್ತಿಗೊಳಿಸಿದ ಅಪರೂಪದ ಸಾಧನೆ ಮಾಡಲಿದ್ದಾರೆ. 36 ವರ್ಷದ ರೋಹಿತ್ ಶರ್ಮಾ ಇದುವರೆಗೆ 156 ಇನ್ನಿಂಗ್ಸ್‌ಗಳಲ್ಲಿ ಭಾರತ ಪರ ಇನ್ನಿಂಗ್ಸ್ ಆರಂಭಿಸಿದ್ದು, 55.76ರ ಅಮೋಘ ಸರಾಸರಿಯಲ್ಲಿ 7807 ರನ್ ಗಳಿಸಿದ್ದಾರೆ. ಈ ವೇಳೆ ರೋಹಿತ್ ಶರ್ಮಾ 28 ಶತಕಗಳು ಮತ್ತು 35 ಅರ್ಧಶತಗಳನ್ನು ಸಿಡಿಸಿದ್ದಾರೆ.

ಏಕದಿನ ಕ್ರಿಕೆಟ್: ಆರಂಭಿಕನಾಗಿ ರೋಹಿತ್ ಶರ್ಮಾ (Rohit Sharma) ಸಾಧನೆ :

  • ಇನ್ನಿಂಗ್ಸ್: 156
  • ರನ್: 7807
  • ಸರಾಸರಿ: 55.76
  • ಸ್ಟ್ರೈಕ್’ರೇಟ್: 93.13
  • ಶತಕ: 28
  • ಅರ್ಧಶತಕ: 35

2007ರಲ್ಲಿ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ರೋಹಿತ್ ಶರ್ಮಾ, ವೃತ್ತಿಜೀವನದ ಆರಂಭದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದರು. ಆದರೆ 2013ರಲ್ಲಿ ಆಗಿನ ಟೀಮ್ ಇಂಡಿಯಾ ನಾಯಕ ಎಂ.ಎಸ್ ಧೋನಿ, ರೋಹಿತ್ ಶರ್ಮಾಗೆ ಆರಂಭಿಕನಾಗಿ ಬಡ್ತಿ ನೀಡಿದ್ದರು. ಅಲ್ಲಿಂದ ರೋಹಿತ್ ಹಿಂದಿರುಗಿ ನೋಡಿದ್ದೇ ಇಲ್ಲ. ಏಕದಿನ ಕ್ರಿಕೆಟ್‌ನಲ್ಲಿ ಒಟ್ಟಾರೆ 236 ಇನ್ನಿಂಗ್ಸ್‌ಗಳನ್ನಾಡಿರುವ ರೋಹಿತ್ ಶರ್ಮಾ 48.63ರ ಸರಾಸರಿಯಲ್ಲಿ 30 ಶತಕ ಹಾಗೂ 48 ಅರ್ಧಶತಕಗಳೊಂದಿಗೆ 9825 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : Vidwath Kaverappa : ದೇಶೀಯ ಕ್ರಿಕೆಟ್’ನಲ್ಲಿ ಕೊಡಗಿನ ವೀರನ ರಣಾರ್ಭಟ, ಟೀಮ್ ಇಂಡಿಯಾ ಬಾಗಿಲು ಸದ್ಯದಲ್ಲೇ ಓಪನ್!

ಇದನ್ನೂ ಓದಿ : VR Vanitha : ದೇಶದ ಇತಿಹಾಸದಲ್ಲಿ ಇದೇ ಮೊದಲು, ಪುರುಷರ ಕ್ರಿಕೆಟ್ ತಂಡಕ್ಕೆ ಮಹಿಳಾ ಕೋಚ್, ಕೆಎಸ್’ಸಿಯ ಟಿ20 ಲೀಗ್’ನಲ್ಲಿ ಹೊಸ ಪ್ರಯೋಗ

ಭಾರತ Vs ವೆಸ್ಟ್ ಇಂಡೀಸ್ ಏಕದಿನ ಸರಣಿಯ ವೇಳಾಪಟ್ಟಿ :
ಜುಲೈ 27: ಮೊದಲ ಏಕದಿನ (ಬಾರ್ಬೆಡೋಸ್)
ಜುಲೈ 29: ಎರಡನೇ ಏಕದಿನ (ಬಾರ್ಬೆಡೋಸ್)
ಆಗಸ್ಟ್ 01: ಮೂರನೇ ಏಕದಿನ (ಟ್ರಿನಿಡಾಡ್)

Rohit Sharma: India-West Indies ODI series from tomorrow, Rohit will be a great opener if he scores 193 runs

Comments are closed.