Rohit Sharma Lamborghini Urus : ಲ್ಯಾಂಬೊರ್ಗಿನಿ ಉರ್ಸ್ ಕಾರ್‌ನಲ್ಲಿ ಧಾಮ್ ಧೂಮ್ ಎಂಟ್ರಿ ಕೊಟ್ಟ ರೋಹಿತ್ ಶರ್ಮಾ

ಮುಂಬೈ: ಕ್ರಿಕೆಟ್’ನಿಂದ ತಾತ್ಕಾಲಿಕ ಬ್ರೇಕ್ ಪಡೆದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಲ್ಯಾಂಬೊರ್ಗಿನಿ ಉರ್ಸ್ ಕಾರಿನಲ್ಲಿ (Rohit Sharma Lamborghini Urus) ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಿಗೆ ಕೊಂಚ ಬಿಡುವು ಸಿಕ್ಕಿದೆ.

ಜಾಹೀರಾತು ಸ್ಪಾನ್ಪರ್’ಷಿಪ್ ಕಮಿಟ್ಮೆಂಟ್’ಗಾಗಿ ವೆಸ್ಟ್ ಇಂಡೀಸ್’ನಿಂದ ಪತ್ನಿ ರಿತಿಕಾ ಸಜ್’ದೇ ಜೊತೆ ನೇರವಾಗಿ ಅಮೆರಿಕಕ್ಕೆ ಹಾರಿದ್ದ ರೋಹಿತ್ ಶರ್ಮಾ, ಇದೀಗ ತವರಿಗೆ ಮರಳಿದ್ದಾರೆ. ಪತ್ನಿ ಜೊತೆ ರೋಹಿತ್ ಶರ್ಮಾ ಲ್ಯಾಂಬೊರ್ಗಿನಿ ಉರ್ಸ್ ಕಾರಿನಲ್ಲಿ ಕಾಣಿಸಿಕೊಂಡಿದ್ದು, ಆ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲ್ಯಾಂಬೊರ್ಗಿನಿ ಉರ್ಸ್ ಕಾರನ್ನು ರೋಹಿತ್ ಶರ್ಮಾ ಕಳೆದ ವರ್ಷದ ಮಾರ್ಚ್’ನಲ್ಲಿ ಖರೀದಿಸಿದ್ದರು. ಈ ಕಾರ್’ನ ಬೆಲೆ ಬರೋಬ್ಬರಿ 4.2 ಕೋಟಿ ರೂಪಾಯಿ. ಏಷ್ಯಾ ಕಪ್ ಟೂರ್ನಿಗೂ ಮುನ್ನ ರೋಹಿತ್ ಶರ್ಮಾ ಅವರಿಗೆ ಕ್ರಿಕೆಟ್’ನಿಂದ ಬಿಡುವು ಸಿಕ್ಕಿದೆ. ಏಷ್ಯಾ ಕಪ್ ಟೂರ್ನಿಗಾಗಿ (Asia Cup 2023) ಭಾರತ ತಂಡ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಒಂದು ವಾರದ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದೆ. ಈ ಅಭ್ಯಾಸ ಶಿಬರಕ್ಕೆ ಏಷ್ಯಾ ಕಪ್’ನಲ್ಲಿ ಆಡಲಿರುವ ಎಲ್ಲಾ ಆಟಗಾರರು ಹಾಜರಾಗಲಿದ್ದಾರೆ. ಎನ್’ಸಿಎ ಟ್ರೈನಿಂಗ್ ಕ್ಯಾಂಪ್’ಗಾಗಿ ಆಗಸ್ಟ್ 24ರಂದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬೆಂಗಳೂರಿಗೆ ಆಗಮಿಸಲಿದ್ದಾರೆ.

ವೆಸ್ಟ್ ಇಂಡೀಸ್’ನಲ್ಲಿ ನಡೆದ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಭಾರತ ತಂಡ ರೋಹಿತ್ ಶರ್ಮಾ ನಾಯಕತ್ವದಲ್ಲಿ ಗೆದ್ದುಕೊಂಡಿತ್ತು. ಇದೀಗ ರೋಹಿತ್ ಏಷ್ಯಾ ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಪ್ರತಿಷ್ಠಿತ ಏಷ್ಯಾ ಕಪ್ ಏಕದಿನ ಟೂರ್ನಿ ಆಗಸ್ಟ್ 31ರಂದು ಆರಂಭವಾಗಲಿದ್ದು, ಪಂದ್ಯಗಳು ಶ್ರೀಲಂಕಾ ಹಾಗೂ ಪಾಕಿಸ್ತಾನದಲ್ಲಿ ನಡೆಯಲಿವೆ. ಭಾರತ ತಂಡ ತನ್ನ ಎಲ್ಲಾ ಲೀಗ್ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಇದನ್ನೂ ಓದಿ : KL Rahul comeback plan : 50 ಓವರ್ ಕೀಪಿಂಗ್, 30 ಓವರ್ ಬ್ಯಾಟಿಂಗ್; ರಾಹುಲ್ ಕಂಬ್ಯಾಕ್’ಗೆ ಬಿಸಿಸಿಐ ಪ್ಲಾನ್

ಏಷ್ಯಾ ಕಪ್ 2023 ಟೂರ್ನಿಯ ಲೀಗ್ ಪಂದ್ಯಗಳ ವೇಳಾಪಟ್ಟಿ (Asia Cup 2023 schedule)
ಆಗಸ್ಟ್ 30: ಪಾಕಿಸ್ತಾನ Vs ನೇಪಾಳ (ಬೆಳಗ್ಗೆ 10ಕ್ಕೆ, ಮುಲ್ತಾನ್)
ಆಗಸ್ಟ್ 31: ಶ್ರೀಲಂಕಾ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 2: ಭಾರತ Vs ಪಾಕಿಸ್ತಾನ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 3: ಅಫ್ಘಾನಿಸ್ತಾನ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಲಾಹೋರ್)
ಸೆಪ್ಟೆಂಬರ್ 4: ಭಾರತ Vs ನೇಪಾಳ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 5: ಅಫ್ಘಾನಿಸ್ತಾನ Vs ಶ್ರೀಲಂಕಾ (ಬೆಳಗ್ಗೆ 9.30ಕ್ಕೆ, ಲಾಹೋರ್)

Rohit Sharma Lamborghini Urus: Rohit Sharma made a dham dhoom entry in the Lamborghini Urus car.

Comments are closed.