Rohith Sharma sixer injures : ಸಿಕ್ಸರ್ ಬಡಿದು ಗಾಯಗೊಂಡಿದ್ದ ಹುಡುಗಿಯನ್ನು ಸಂತೈಸಿದ ರೋಹಿತ್ ಶರ್ಮಾ

ಲಂಡನ್: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅದ್ಭುತ ಆಟಗಾರನಷ್ಟೇ ಅಲ್ಲ, ಮಾನವೀಯ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಯೂ ಹೌದು. ರೋಹಿತ್ ಶರ್ಮಾ ವ್ಯಕ್ತಿತ್ವ ಎಂಥದ್ದು ಎಂಬುದಕ್ಕೆ ಇದು ಮತ್ತೊಂದು ನಿದರ್ಶನ. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಮಂಗಳವಾರ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಏಕದಿನ ಪಂದ್ಯದ ವೇಳೆ ಸಣ್ಣ ದುರ್ಘಟನೆಯೊಂದು ನಡೆದಿತ್ತು. ನಾಯಕ ರೋಹಿತ್ ಶರ್ಮಾ ಬಾರಿಸಿದ ಸಿಕ್ಸರ್, ಪುಟ್ಟ ಹುಡುಗಿಯೊಬ್ಬಳಿಗೆ ಬಡಿದು ಆಕೆಗೆ ಸಣ್ಣ ಗಾಯವಾಗಿತ್ತು (Rohith Sharma sixer injures ).

ಭಾರತದ ಇನ್ನಿಂಗ್ಸ್ ವೇಳೆ 5ನೇ ಓವರ್”ನಲ್ಲಿ ಇಂಗ್ಲೆಂಡ್ ವೇಗಿ ಡೇವಿಡ್ ವಿಲ್ಲೀ ಅವರ ಎಸೆತವನ್ನು ರೋಹಿತ್ ಶರ್ಮಾ ಆಕರ್ಷಕ ಪುಲ್ ಶಾಟ್ ಮೂಲಕ ಫೈನ್ ಲೆಗ್ ಏರಿಯಾದಲ್ಲಿ ಸಿಕ್ಸರ್’ಗಟ್ಟಿದ್ದರು. ಆ ಸಿಕ್ಸರ್ ಪೆವಿಲಿಯನ್”ನಲ್ಲಿದ್ದ ಪ್ರೇಕ್ಷಕರ ಮಧ್ಯೆ ಬಂದು ಬಿದ್ದಿತ್ತು. ಅಷ್ಟೇ ಅಲ್ಲ, ತಂದೆಯೊಂದಿಗೆ ಪಂದ್ಯ ನೋಡುತ್ತಿದ್ದ 6 ವರ್ಷದ ಮೀರಾ ಸಾಳ್ವಿ ಎಂಬ ಪುಟ್ಟ ಹುಡುಗಿಯ ಬೆನ್ನಿಗೆ ಬಡಿದಿತ್ತು. ಮಗಳನ್ನು ಎತ್ತಿಕೊಂಡು ಚೆಂಡಿನ ಹೊಡೆತದಿಂದ ತಪ್ಪಿಸಿಕೊಳ್ಳಲು ತಂದೆ ಪ್ರಯತ್ನಿಸಿದರೂ, ಕ್ಷಣಮಾತ್ರದಲ್ಲಿ ನುಗ್ಗಿ ಬಂದಿದ್ದ ಚೆಂಡು ಆ ಹುಡುಗಿಯ ಬೆನ್ನನ್ನು ಸವರಿಕೊಂಡು ಹೋಗಿತ್ತು. ಈ ಸಂದರ್ಭದಲ್ಲಿ ಪಂದ್ಯ ಕೆಲ ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು.

https://twitter.com/KohramLive/status/1547058909260591105?s=20&t=y5f2MinjYTCRiqb-KUGtYw

ಚೆಂಡು ಹುಡುಗಿಯ ಬೆನ್ನಿಗೆ ಬಡಿದ ಬೆನ್ನಲ್ಲೇ ಇಂಗ್ಲೆಂಡ್ ತಂಡದ ಫಿಸಿಯೋಗಳು ಪೆವಿಲಿಯನ್”ನತ್ತ ಧಾವಿಸಿ, ಹುಡುಗಿಗೆ ಪ್ರಥಮ ಚಿಕಿತ್ಸೆ ನೀಡಿದ್ದರು.

ಪಂದ್ಯ ಮುಗಿದ ನಂತರ ಪೆವಿಲಿಯನ್”ಗೆ ಮರಳುವ ವೇಳೆ ನೇರವಾಗಿ ಪ್ರೇಕ್ಷಕರ ಗ್ಯಾಲರಿಯತ್ತ ತೆರಳಿದ ರೋಹಿತ್ ಶರ್ಮಾ, ಆ ಹುಡುಗಿಯನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ (Rohit Sharma meets the little girl). ರೋಹಿತ್ ಶರ್ಮಾ ಅವರ ಈ ನಡವಳಿಕೆ ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯವನ್ನು ಭಾರತ 10 ವಿಕೆಟ್’ಗಳಿಂದ ಭರ್ಜರಿಯಾಗಿ ಗೆದ್ದು, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್, ವೇಗಿ ಜಸ್ಪ್ರೀತ್ ಬುಮ್ರಾ ಅವರ ಮಾರಕ ದಾಳಿಗೆ ತತ್ತರಿಸಿ 25.2 ಓವರ್”ಗಳಲ್ಲಿ ಕೇವಲ 110 ರನ್ನಿಗೆ ಆಲೌಟಾಗಿತ್ತು. ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದ್ದ ಬುಮ್ರಾ, 19 ರನ್ನಿತ್ತು 6 ವಿಕೆಟ್ ಪಡೆದಿದ್ದರು.

https://twitter.com/cricketapna1/status/1547080336869171201?s=20&t=y5f2MinjYTCRiqb-KUGtYw

ನಂತರ 111 ರನ್”ಗಳ ಗುರಿ ಬೆನ್ನಟ್ಟಿದ್ದ ಭಾರತ, 18.4 ಓವರ್’ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 114 ರನ್ ಗಳಿಸಿ ಅಮೋಘ ಜಯಭೇರಿ ಬಾರಿಸಿತ್ತು. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಭಾರತಕ್ಕೆ 10 ವಿಕೆಟ್”ಗಳ ಸುಲಭ ಜಯ ತಂದುಕೊಟ್ಟಿದ್ದರು. ಅಬ್ಬರದ ಆಟವಾಡಿದ್ದ ನಾಯಕ ರೋಹಿತ್ ಕೇವಲ 58 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ ಅಜೇಯ 76 ರನ್ ಸಿಡಿದ್ರೆ, ತಾಳ್ಮೆಯ ಆಟವಾಡಿದ್ದ ಶಿಖರ್ ಧವನ್ 54 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ ಅಜೇಯ 31 ರನ್ ಗಳಿಸಿದ್ದರು. 3 ಪಂದ್ಯಗಳ ಸರಣಿಯ 2ನೇ ಪಂದ್ಯ ಗುರುವಾರ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದ್ದು, ಈ ಪಂದ್ಯವನ್ನು ಗೆದ್ದರೆ ಭಾರತ ಸರಣಿಯನ್ನು ಕೈವಶ ಮಾಡಿಕೊಳ್ಳಲಿದೆ.

ಇದನ್ನೂ ಓದಿ : Rohit Sharma 250 Sixes : ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಸಿಕ್ಸರ್ ಬಾರಿಸಿದ್ದು ಯಾರು ಗೊತ್ತಾ?

ಇದನ್ನೂ ಓದಿ : Virat Kohli doubtful : ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯಕ್ಕೂ ಕೊಹ್ಲಿ ಡೌಟ್ !

ಇದನ್ನೂ ಓದಿ : ಭಾರತೀಯ ಕ್ರಿಕೆಟ್‌ನ ಮತ್ತೊಂದು ಭಲೇ ಜೋಡಿ, ಸಚಿನ್ -ದಾದಾ ದಾಖಲೆ ಮುರೀತಾರ ರೋಹಿತ್-ಶಿಖರ್ ?

Rohith Sharma sixer injures 6 -year-old girl in stands, Rohith meets the little girl

Comments are closed.