Stuar Broad retirement : 6 ಸಿಕ್ಸರ್’ಗಳಿಂದ 600 ವಿಕೆಟ್’ಗಳವರೆಗೆ.. ಕೆಚ್ಚೆದೆಯ ಸೈನಿಕನ ಕ್ರಿಕೆಟ್ ಬದುಕಿಗೆ ಇಂದು ತೆರೆ

ಲಂಡನ್ : 2007ರ ಐಸಿಸಿ ಟಿ20 ವಿಶ್ವಕಪ್. ಭಾರತ Vs ಇಂಗ್ಲೆಂಡ್ ಪಂದ್ಯ. ಯಂಗ್ ಇಂಡಿಯಾ ಕ್ಯಾಪ್ಟನ್ ಎಂ.ಎಸ್ ಧೋನಿ ಜೊತೆ ಕ್ರೀಸ್’ನಲ್ಲಿದ್ದ (Stuar Broad retirement) ಪಂಜಾಬ್ ಸಿಂಹ ಯುವರಾಜ್ ಸಿಂಗ್, ಒಂದೇ ಓವರ್’ನಲ್ಲಿ ಸತತ ಆರು ಸಿಕ್ಸರ್’ಗಳನ್ನು ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಅಂದು ಯುವಿ ಕೈಯಲ್ಲಿ ಆರು ಸಿಕ್ಸರ್’ಗಳನ್ನು ಚಚ್ಚಿಸಿಕೊಂಡಿದ್ದ ಬೌಲರ್, ಇಂದು 600 ಟೆಸ್ಟ್ ವಿಕೆಟ್’ಗಳ ಸರದಾರ. ಆರು ಸಿಕ್ಸರ್’ಗಳಿಂದ 600 ಟೆಸ್ಟ್ ವಿಕೆಟ್’ಗಳವರೆಗೆ ಸಾಗಿ ಬಂದಿರುವ ಇಂಗ್ಲೆಂಡ್’ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ (Stuart Broad) ಅವರ ಮಹೋನ್ನತ ಟೆಸ್ಟ್ ವೃತ್ತಿಜೀವನಕ್ಕೆ ಇಂದು ತೆರೆ ಬೀಳಲಿದೆ

ಲಂಡನ್’ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರು ಆಶಸ್ ಟೆಸ್ಟ್ (The Ashes test) ಸರಣಿಯ 5ನೇ ಟೆಸ್ಟ್ ಪಂದ್ಯದ ಅಂತಿಮ ದಿನವಾದ ಸೋಮವಾರ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಸ್ಟುವರ್ಟ್ ಬ್ರಾಡ್ ಅವರ ಕಟ್ಟ ಕಡೆಯ ದಿನ. ಹೀಗಾಗಿ ಎಲ್ಲರ ಚಿತ್ತವೀಗ ಓವಲ್ ಮೈದಾನದತ್ತ ನೆಟ್ಟಿದೆ.


ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವಾಡುತ್ತಿರುವ 37 ವರ್ಷದ ಸ್ಟುವರ್ಟ್ ಬ್ರಾಡ್, ಇಂಗ್ಲೆಂಡ್ ತಂಡವನ್ನು ಗೆಲ್ಲಿಸಿ ವಿದಾಯದ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಗೆಲ್ಲಲು 384 ರನ್’ಗಳ ಗುರಿ ಬೆನ್ನಟ್ಟಿರುವ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ, 4ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 135 ರನ್ ಗಳಿಸಿದ್ದು, ಇಂಗ್ಲೆಂಡ್ ಸವಾಲಿಗೆ ದಿಟ್ಟ ಉತ್ತರ ನೀಡಿದೆ. ಪಂದ್ಯದ ಕೊನೆಯದಿನವಾದ ಸೋಮವಾರ ಆಸೀಸ್ ಗೆಲುವಿಗೆ 249 ರನ್’ಗಳ ಅವಶ್ಯಕತೆಯಿದು, ಎಡಗೈ ಆರಂಭಿಕರಾದ ಡೇವಿಡ್ ವಾರ್ನರ್ ಅಜೇಯ 58 ಮತ್ತು ಉಸ್ಮಾನ್ ಖವಾಜ ಅಜೇಯ 69 ರನ್’ಗಳೊಂದಿಗೆ ಕ್ರೀಸ್’ನಲ್ಲಿದ್ದಾರೆ.


ಇಂಗ್ಲೆಂಡ್’ನ ಮಾಜಿ ಕ್ರಿಕೆಟಿಗ, ಹಾಲಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಅವರ ಪುತ್ರನಾಗಿರುವ ಸ್ವುವರ್ಟ್ ಬ್ರಾಡ್, 2006ರಲ್ಲಿ ಚೊಚ್ಚಲ ಏಕದಿನ ಪಂದ್ಯವಾಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರ. 2007ರಲ್ಲಿ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಬಲಗೈ ವೇಗಿ ಸ್ಟುವರ್ಟ್ ಬ್ರಾಡ್, ಕಳೆದ 16 ವರ್ಷಗಳಲ್ಲಿ 167 ಟೆಸ್ಟ್ ಪಂದ್ಯಗಳನ್ನಾಡಿದ್ದು, 602 ವಿಕೆಟ್ ಪಡೆದಿದ್ದಾರೆ. ಇನ್ನಿಂಗ್ಸ್ ಒಂದರಲ್ಲಿ 15 ರನ್ನಿಗೆ 8 ವಿಕೆಟ್ ಪಡೆದಿರುವುದು ಸ್ಟುವರ್ಟ್ ಬ್ರಾಡ್ ಅವರ ಬೆಸ್ಟ್ ಬೌಲಿಂಗ್ ಪರ್ಫಾಮೆನ್ಸ್. ಇಂಗ್ಲೆಂಡ್ ಪರ 121 ಏಕದಿನ ಪಂದ್ಯಗಳನ್ನಾಡಿರುವ ಬ್ರಾಡ್, 178 ವಿಕೆಟ್ ಕಬಳಿಸಿದ್ದಾರೆ. 56 ಟಿ20 ಪಂದ್ಯಗಳಿಂದ 65 ವಿಕೆಟ್ ಸಹಿತ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 845 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ : India vs West Indies 2nd ODI : ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿಗೆ ರೆಸ್ಟ್‌, ಅಕ್ಷರ್‌ ಪಟೇಲ್‌, ಸಂಜು ಸ್ಯಾಮ್ಸನ್‌ ಇನ್‌

ಇದನ್ನೂ ಓದಿ : Yusuf Pathan : ಪಾಕ್ ಬೌಲರ್ ಮೊಹಮ್ಮದ್ ಆಮೀರ್’ಗೆ ಹಿಗ್ಗಾಮಗ್ಗ ಚಚ್ಚಿದ ಯೂಸುಫ್ ಪಠಾಣ್

Stuart Broad retirement: From 6 sixes to 600 wickets.. Today opens the cricket life of a brave soldier.

Comments are closed.