ಸೋಮವಾರ, ಏಪ್ರಿಲ್ 28, 2025
HomeSportsCricketಪಾಕಿಸ್ತಾನದ ವಿರುದ್ದ ಕೊನೆಗೂ ಕಣಕ್ಕಿಳಿದ ಶುಭಮನ್‌ ಗಿಲ್‌ : ಡೆಂಗ್ಯೂ ಗೆಲುವಿನ ಹಿಂದಿದೆ ಗಿಲ್‌ ರೋಚಕ...

ಪಾಕಿಸ್ತಾನದ ವಿರುದ್ದ ಕೊನೆಗೂ ಕಣಕ್ಕಿಳಿದ ಶುಭಮನ್‌ ಗಿಲ್‌ : ಡೆಂಗ್ಯೂ ಗೆಲುವಿನ ಹಿಂದಿದೆ ಗಿಲ್‌ ರೋಚಕ ಸ್ಟೋರಿ

- Advertisement -

ಭಾರತ – ಪಾಕಿಸ್ತಾನ (India vs Pakistan) ವಿರುದ್ದ ಪಂದ್ಯದಲ್ಲಿ ಕೊನೆಗೂ ಟೀಂ ಇಂಡಿಯಾದ (indian Cricket Team) ಆರಂಭಿಕ ಆಟಗಾರ ಶುಭಮನ್‌ ಗಿಲ್‌ (Shubman Gill) ವಿಶ್ವಕಪ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ. ಡೆಂಗ್ಯೂನಿಂದ ಬಳಲುತ್ತಿದ್ದ ಭಾರತದ ಯುವ ಕ್ರಿಕೆಟಿಗ ಕೇವಲ 16 ರನ್‌ ಗಳಿಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಆದರೆ ಶುಭಮನ್‌ ಗಿಲ್‌ ಪಾಕಿಸ್ತಾನ ವಿರುದ್ದ ಪಂದ್ಯಕ್ಕೆ ಸಿದ್ದವಾಗಿದ್ದೇ ರೋಚಕ.

Subman gill Finally Played india vs Pakistan, how made Ready for Big Game, Exciting story behind dengue victory
Image Credit : BCCI

ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಶುಭಮನ್‌ ಗಿಲ್‌ ಆಡುವುದೇ ಅನುಮಾನವಾಗಿತ್ತು. ಶುಭಮನ್‌ ಗಿಲ್‌ ವಿಶ್ವಕಪ್‌ನಿಂದಲೇ ಹೊರಬೀಳಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು. ಆದರೆ ವಿಶ್ವಕಪ್‌ನ ಮೂರನೇ ಪಂದ್ಯದಲ್ಲಿ ಅವರು ಆಡುತ್ತಾರೆ ಅಂತಾ ರೋಹಿತ್‌ ಶರ್ಮಾ ಹೇಳಿದಾಗ ಬಹುತೇಕ ಕ್ರಿಕೆಟ್‌ ಅಭಿಮಾನಿಗಳು ನಂಬಿರಲಿಲ್ಲ.

ಇದನ್ನೂ ಓದಿ : ಭಾರತ – ಪಾಕಿಸ್ತಾನ ವಿರುದ್ದ ಪಂದ್ಯದ ವೇಳೆ ಎಡವಟ್ಟು : ತಪ್ಪಾದ ಜರ್ಸಿ ತೊಟ್ಟು ಮೈದಾನಕ್ಕೆ ಬಂದ ವಿರಾಟ್‌ ಕೊಹ್ಲಿ

ರೋಹಿತ್‌ ಶರ್ಮಾ ಅವರು ಶುಭಮನ್‌ ಗಿಲ್‌ ಶೇ.90 ರಷ್ಟು ಫಿಟ್‌ ಆಗಿದ್ದಾರೆ ಅಂತಾ ಹೇಳಿದ್ದರು. ಆದರೆ ಅದಾಗಲೇ ಗಿಲ್‌ ಶೇ.100 ರಷ್ಟು ಫಿಟ್‌ ಆಗಿದ್ದರಂತೆ. ಈ ಕುರಿತು ಕ್ರಿಕ್‌ ಬುಜ್‌ ವರದಿ ಪ್ರಕಟಿಸಿದೆ. ಅವರು ಅಹಮದಾಬಾದ್‌ಗೆ ಆಗಮಿಸಿ ಎರಡು ದಿನಗಳ ಕಾಲ ಅಭ್ಯಾಸವನ್ನು ನಡೆಸಿದ್ದರು.

ಆಸ್ಟ್ರೇಲಿಯಾ ವಿರುದ್ದದ ಸರಣಿಯ ಹೊತ್ತಲ್ಲೇ ಶುಭಮನ್‌ ಗಿಲ್‌ ಅವರಿಗೆ ಡೆಂಗ್ಯೂ ಕಾಣಿಸಿಕೊಂಡಿತ್ತು. ಅಲ್ಲಿಂದಲೇ ಅವರಿಗೆ ಚಿಕಿತ್ಸೆ ಶುರುವಾಗಿತ್ತು. ವಿಶ್ವಕಪ್‌ನ ಆರಂಭಿಕ ಎರಡು ಪಂದ್ಯಗಳನ್ನು ಅವರು ತಪ್ಪಿಸಿಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ದದ ಪಂದ್ಯದ ವೇಳೆಯಲ್ಲಿ ಅವರಿಗೆ ಡ್ಯೆಂಗ್ಯೂವಿನಿಂದ ಆರೋಗ್ಯ ಸಂಪೂರ್ಣವಾಗಿ ಕೆಟ್ಟು ಹೋಗಿತ್ತು.

Subman gill Finally Played india vs Pakistan, how made Ready for Big Game, Exciting story behind dengue victory
Image Credit : BCCI

ಶುಭಮನ್‌ ಗಿಲ್‌ ಅವರ ಪ್ಲೇಟ್‌ ಲೆಟ್ಲ್‌ 50000 ಕ್ಕಿಂತಲೂ ಕಡಿಮೆಯಾಗಿತ್ತು. ಈ ವೇಳೆಯಲ್ಲಿ ಭಾರತ ತಂಡ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ದ ಪಂದ್ಯವನ್ನು ಆಡುತ್ತಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗತ್ತು. ಆದರೆ ನಂತರದಲ್ಲಿ ಅವರ ಪ್ಲೇಟ್‌ಲೆಟ್ಸ್‌ 1 ಲಕ್ಷಕ್ಕಿಂತಲೂ ಅಧಿಕವಾದ ನಂತರದಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.

ಇದನ್ನೂ ಓದಿ : ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯ : 3.5 ಕೋಟಿ Realtime ವೀಕ್ಷಣೆ : ಜಾಗತಿಕ ಸ್ಟ್ರೀಮಿಂಗ್‌ ದಾಖಲೆ ಬರೆದ ಡಿಸ್ನಿ ಹಾಟ್‌ಸ್ಟಾರ್‌

ಶುಭಮನ್‌ ಗಿಲ್‌ ಪ್ರಯಾಣಿಸುವಷ್ಟು ಆರೋಗ್ಯವಾಗಿದ್ದಾರೆ ಅನ್ನೋದನ್ನು ವೈದ್ಯರು ತಿಳಿಸುತ್ತಿದ್ದಂತೆಯೇ ಅವರು ಅಹಮದಾಬಾದ್‌ಗೆ ಪ್ರಯಾಣ ಬೆಳೆಸಿದ್ದರು. ಆದರೆ ಅಹಮದಾಬಾದ್‌ನಲ್ಲಿಯೂ ಅವರು ಪಾಕ್‌ ವಿರುದ್ದ ಕಣಕ್ಕೆ ಇಳಿಯುತ್ತಾರೆ ಅನ್ನೋ ಭರವಸೆ ಯಾರಿಗೂ ಇರಲಿಲ್ಲ. ಆದರೆ ಅವರು ಅಭ್ಯಾಸಕ್ಕೆ ಇಳಿಯುತ್ತಿದ್ದಂತೆಯೇ ಭರವಸೆ ಮೂಡುತ್ತಾ ಸಾಗಿತ್ತು.

Subman gill Finally Played india vs Pakistan, how made Ready for Big Game, Exciting story behind dengue victory
Image credit to Original Source

ಆದರೆ ನೂರು ಓವರ್‌ಗಳ ಪಂದ್ಯವನ್ನು ಡೆಂಗ್ಯೂವಿನಿಂದ ಚೇತರಿಸಿಕೊಂಡಿದ್ದ ಆಟಗಾರ ಆಡುವುದು ಅಷ್ಟು ಸುಲಭವಲ್ಲ. ಇದಕ್ಕಾಗಿಯೇ ಅವರ ಆರೋಗ್ಯದ ಬಗ್ಗೆ ಬಿಸಿಸಿಐ ವೈದ್ಯಾಧಿಕಾರಿಗಳು ಹೆಚ್ಚು ಕಾಳಜಿಯನ್ನ ವಹಿಸಿದ್ದರು. ಪಂದ್ಯದ ಆರಂಭಕ್ಕೂ ಮುನ್ನ ದಿನವೇ ಅವರನ್ನು ಪಾಕ್‌ ವಿರುದ್ದ ಕಣಕ್ಕೆ ಇಳಿಸುವ ಬಗ್ಗೆ ನಾಯಕ ರೋಹಿತ್‌ ಶರ್ಮಾ ಹಾಗೂ ಕೋಚ್‌ ರಾಹುಲ್‌ ದ್ರಾವಿಡ್‌ ನಿರ್ಧರಿಸಿದ್ದರು.

ಇದನ್ನೂ ಓದಿ : ಮನೆ ಸುಟ್ಟು ಕರಕಲಾಯ್ತು, ನೆರವೂ ಸಿಗುತ್ತಿಲ್ಲ : ಭಾರತ ಪುಟ್ಬಾಲ್‌ ಆಟಗಾರರ ಕಣ್ಣಿರ ಕಥೆ

ಆದರೆ ಪಂದ್ಯ ಆರಂಭಕ್ಕೂ ಕೆಲವೇ ಗಂಟೆಗಳ ಮೊದಲು ಶುಭಮನ್‌ ಗಿಲ್‌ ಅವರ ಆರೋಗ್ಯದ ತಪಾಸಣೆಯನ್ನು ನಡೆಸಿ ಅವರು ಸಂಪೂರ್ಣವಾಗಿ ಫಿಟ್‌ ಆಗಿದ್ದಾರೆ ಅನ್ನೋದನ್ನು ಖಚಿತ ಪಡಿಸಿಕೊಂಡೇ ತಂಡಕ್ಕೆ ಸೇರಿಸಿ ಕೊಳ್ಳಲಾಗಿತ್ತು. ಕೊನೆಗೂ ಶುಭಮನ್‌ ಗಿಲ್‌ ಪಾಕಿಸ್ತಾನದ ವಿರುದ್ದ ಕಣಕ್ಕೆ ಇಳಿದಿದ್ದರು. ಇದೀಗ ಭಾರತಕ್ಕೆ ಗಿಲ್‌ ಆಗಮನ ಅನೆಬಲ ತಂದಂತೆ ಆಗಿದೆ.

Subman gill Finally Played india vs Pakistan, how made Ready for Big Game, Exciting story behind dengue victory

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular