ಭಾರತ – ಪಾಕಿಸ್ತಾನ ವಿರುದ್ದ ಪಂದ್ಯದ ವೇಳೆ ಎಡವಟ್ಟು : ತಪ್ಪಾದ ಜರ್ಸಿ ತೊಟ್ಟು ಮೈದಾನಕ್ಕೆ ಬಂದ ವಿರಾಟ್‌ ಕೊಹ್ಲಿ

india vs Pakistan : ಪಾಕಿಸ್ತಾನ ವಿರುದ್ದದ ಪಂದ್ಯ ದಲ್ಲಿ ಕಣಕ್ಕೆ ಇಳಿಯುವ ವೇಳೆಯಲ್ಲಿ ವಿರಾಟ್‌ ಕೊಹ್ಲಿ (Virat Kohli) ಶ್ವೇತವರ್ಣದ ಜರ್ಸಿಯನ್ನು ತೊಡುವ ಬದಲು ಬಿಳಿಬಣ್ಣದ ಪಟ್ಟಿ ಇರುವ ಜೆರ್ಸಿ ತೊಟ್ಟು ಕಣಕ್ಕೆ ಇಳಿದಿದ್ದಾರೆ.

ವಿಶ್ವಕಪ್‌  (world Cup 2023) ಪಂದ್ಯಾವಳಿಯಲ್ಲಿ ಭಾರತ ಹಾಗೂ ಪಾಕಿಸ್ತಾನ (india vs Pakistan) ತಂಡಗಳು ಸೆಣೆಸಾಡುತ್ತಿವೆ. ಈ ಪಂದ್ಯದಲ್ಲಿ ಭಾರತೀಯ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ಆದರೆ ಈ ಪಂದ್ಯದ ವೇಳೆ ಟೀಂ ಇಂಡಿಯಾದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ(virat Kohli) ಎಡವಟ್ಟು ಮಾಡಿಕೊಂಡಿದ್ದಾರೆ

ind vs pak virat kohli to wear wrong jersey india vs pakistan
Image Credit : Disney Hotstar

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಪಂದ್ಯವನ್ನು ಆಡುತ್ತಿದೆ. ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್‌ ನಡೆಸಿದ್ದು, ಪಾಕಿಸ್ತಾನ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಭಾರತೀಯ ಬೌಲರ್‌ಗಳು ಸಕ್ಸಸ್‌ ಆಗಿದ್ದಾರೆ.

ಇದನ್ನೂ ಓದಿ : ಭಾರತ – ಪಾಕಿಸ್ತಾನ ಪಂದ್ಯ : ಟಾಸ್ ಗೆದ್ದ ಭಾರತ ಬೌಲಿಂಗ್‌ ಆಯ್ಕೆ, ತಂಡಕ್ಕೆ ಮರಳಿದ ಶುಭಮನ್‌ ಗಿಲ್‌

ಆದರೆ ಟೀಂ ಇಂಡಿಯಾದ ಮಾಜಿ ನಾಯಕ, ಖ್ಯಾತ ಆಟಗಾರ ವಿರಾಟ್‌ ಕೊಹ್ಲಿ ಅವರು ಎಡವಟ್ಟು ಮಾಡಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ದದ ಪಂದ್ಯ ದಲ್ಲಿ ಕಣಕ್ಕೆ ಇಳಿಯುವ ವೇಳೆಯಲಿ ಶ್ವೇತವರ್ಣದ ಜರ್ಸಿಯನ್ನು ತೊಡುವ ಬದಲು ಬಿಳಿಬಣ್ಣದ ಪಟ್ಟಿ ಇರುವ ಜೆರ್ಸಿ ತೊಟ್ಟು ಕಣಕ್ಕೆ ಇಳಿದಿದ್ದಾರೆ.

ind vs pak virat kohli to wear wrong jersey india vs pakistan
Image Credit : BCCI

ವಿಶ್ವಕಪ್‌ಗಾಗಿ ಟೀಂ ಇಂಡಿಯಾದ ಜೆರ್ಸಿಯನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಆಡಿಡಾಸ್‌ ಕಂಪೆನಿ ಜೆರ್ಸಿಯ ಭುಜದ ಮೇಲೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಪಟ್ಟಿಯನ್ನು ಅಳವಡಿಸಿದೆ. ಇದು ರಾಷ್ಟ್ರ ಲಾಂಛನದ ಸಂಕೇತವಾಗಿತ್ತು.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ 7-0 ಅಂತರ : ಭಾರತ ವಿರುದ್ದ ಇನ್ನೂ ಗೆದ್ದಿಲ್ಲ ಪಾಕಿಸ್ತಾನ : ಏನ್‌ ಹೇಳುತ್ತೆ ಪಿಚ್‌ ರಿಪೋರ್ಟ್‌, ಯಾರಿಗೆ ಗೆಲುವು ?

ಆದರೆ ತಾನು ತಪ್ಪಾದ ಜರ್ಸಿ ಧರಿಸಿಕೊಂಡು ಅಂಗಳಕ್ಕೆ ಬಂದಿದ್ದೇನೆ ಅನ್ನೋದು ವಿರಾಟ್‌ ಕೊಹ್ಲಿ ಅವರ ಗಮನಕ್ಕೆ ಬರುತ್ತಿದ್ದಂತೆಯೇ ಕೂಡಲೇ ಮೈದಾನದಿಂದ ಡ್ರೆಸ್ಸಿಂಗ್‌ ರೂಮ್‌ ಗೆ ತೆರಳಿ ತಮ್ಮ ಜೆರ್ಸಿಯನ್ನು ಬದಲಾಯಿಸಿಕೊಂಡು ಬಂದಿದ್ದಾರೆ. ಸದ್ಯ ವಿರಾಟ್‌ ಕೊಹ್ಲಿ ಅವರ ಎಡವಟ್ಟು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ind vs pak virat kohli to wear wrong jersey india vs pakistan
Image Credit : RCB Twitter

ಅಡಿಡಾಸ್‌ ಕಂಪೆನಿ ಟೀಂ ಇಂಡಿಯಾದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ. 2028ರ ವರೆಗೂ ಭಾರತ ತಂಡಕ್ಕೆ ಕಂಪೆನಿ ಕಿಟ್‌ ಪ್ರಯೋಜಕತ್ವವನ್ನು ನೀಡಲಿದೆ. ಇದಕ್ಕಾಗಿ ಬಿಸಿಸಿಐಗೆ ಬರೋಬ್ಬರಿ ೩೫೦ ಕೋಟಿ ರೂಪಾಯಿ ಬಿಡ್‌ ಸಲ್ಲಿಕೆ ಮಾಡಿದೆ. ಆಡಿಡಾಸ್‌ ಕಂಪೆನಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ ಪ್ರತೀ ಪಂದ್ಯಕ್ಕೆ 65 ಲಕ್ಷ ರೂಪಾಯಿಯಂತೆ ವಾರ್ಷಿಕವಾಗಿ ಬರೋಬ್ಬರಿ 70 ಕೋಟಿ ರೂಪಾಯಿ ಪ್ರಾಯೋಜಕತ್ವವನ್ನು ನೀಡಲಿದೆ.

ವಿಶ್ವಕಪ್‌ ಭಾರತ ಪಾಕಿಸ್ತಾನ ಪಂದ್ಯ : 191ಕ್ಕೆ ಪಾಕಿಸ್ತಾನ ಆಲೌಟ್‌‌

ಇನ್ನು ಪಾಕಿಸ್ತಾನ ತಂಡ ಭಾರತದ ವಿರುದ್ದ ಸಾಧಾರಣ ಮೊತ್ತಕ್ಕೆ ಆಲೌಟ್‌ ಆಗಿದೆ. ಜಸ್ಪ್ರಿತ್‌ ಬೂಮ್ರಾ, ಮೊಹಮ್ಮದ್‌ ಸಿರಾಜ್‌, ಹಾರ್ದಿಕ್‌ ಪಾಂಡ್ಯ, ಕುಲದೀಪ್‌ ಯಾದವ್ ಹಾಗೂ ರವೀಂದ್ರ ಜಡೇಜಾ ಅವರ ದಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡದ ಕೇವಲ 191 ರನ್‌ ಗಳಿಗೆ ಆಲೌಟ್‌ ಆಗಿದೆ.

ಪಾಕ್‌ ನಾಯಕ ಬಾಬರ್‌ ಅಜಂ ಅರ್ಧ ಶತಕ ಸಿಡಿಸಿದ್ರೆ, ಮೊಹಮ್ಮದ್‌ ರಿಜ್ವಾನ್‌ 49 ರನ್‌ ಗಳಿಗೆ ಔಟಾದ್ರು. ಉಳಿದಂತೆ ಅಬ್ದುಲ್ಲಾ ಶಫೀಕ್‌ 20, ಇಮಾಮ್‌ ಉಲ್‌ ಹಲ್‌ 36 ರನ್‌ ಗಳಿಗೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ರು. ಉಳಿದಂತೆ ಹಸನ್‌ ಆಲಿ ಹೊರತು ಪಡಿಸಿ ಉಳಿದ ಯಾವ ಆಟಗಾರರು ಕೂಡ ಎರಡಂಕಿ ಮೊತ್ತವನ್ನು ದಾಟಲೇ ಇಲ್ಲ.

ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರಿತ್‌ ಬೂಮ್ರಾ, ಹಾರ್ದಿಕ್‌ ಪಾಂಡ್ಯ, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸಿರಾಜ್‌ ತಲಾ 2 ವಿಕೆಟ್‌ ಪಡೆದುಕೊಂಡಿದ್ದಾರೆ. ಭಾರತ 192 ರನ್‌ ಟಾರ್ಗಟ್‌ ಅನ್ನು ಚೇಸ್‌ ಮಾಡಬೇಕಾಗಿದೆ. ಭಾರತ ಪರ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಆರಂಭಿಕರಾಗಿ ಕಣಕ್ಕೆ ಇಳಿಯಲಿದ್ದಾರೆ.

ಇದನ್ನೂ ಓದಿ : ವಿಶ್ವಕಪ್‌ನಲ್ಲಿ ವೇಗವಾಗಿ 1000 ರನ್ : ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿದ ಡೇವಿಡ್‌ ವಾರ್ನರ್‌

India vs Pakistan ತಂಡಗಳು:
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ (ನಾಯಕ ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್

ಪಾಕಿಸ್ತಾನ (ಪ್ಲೇಯಿಂಗ್ XI): ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್(ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್‌ ಕೀಪರ್), ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್

ind vs pak virat kohli to wear wrong jersey india vs pakistan

Comments are closed.