Success Story of Deepak Hooda : ಪಾಂಡ್ಯ ಅಣ್ಣನೊಂದಿಗೆ ಕಿರಿಕ್.. ಸ್ವಂತ ರಾಜ್ಯಕ್ಕೆ ಗುಡ್‌ಬೈ.. ಟೀಮ್ ಇಂಡಿಯಾಗೆ ಎಂಟ್ರಿ.. ಟಿ20 ಸೆಂಚುರಿ.. ಇದು ಹೂಡ ಸಕ್ಸಸ್ ಸ್ಟೋರಿ

ಬೆಂಗಳೂರು: (Success Story of Deepak Hooda ) ಐರ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಭಾರತಕ್ಕೆ ಸರಣಿ ಗೆದ್ದುಕೊಟ್ಟ ದೀಪಕ್ ಹೂಡ (Deepak Hooda) ಈಗ ಟಾಕ್ ಆಫ್ ದಿ ಟೌನ್. ಕ್ರಿಕೆಟ್ ಶಿಶು ಐರ್ಲೆಂಡ್”ನಂತಹ (India Vs Ireland T20 series) ತಂಡದ ವಿರುದ್ಧ ಶತಕ ಬಾರಿಸುವುದು ದೊಡ್ಡ ವಿಚಾರವೇ ಎಂದು ಜನ ಪ್ರಶ್ನಿಸ ಬಹುದು. ದೊಡ್ಡ ವಿಚಾರವಲ್ಲ ನಿಜ. ಆದರೆ ಟಿ20 ಕ್ರಿಕೆಟ್”ನಲ್ಲಿ ಶತಕ ಬಾರಿಸುವುದೇ ಒಂದು ದೊಡ್ಡ ಸಾಧನೆ. ಅದು ಯಾವುದೇ ತಂಡವಾಗಿರಲಿ. ಅಂತಹ ಒಂದು ಸಾಧನೆಯನ್ನು ದೀಪಕ್ ಹೂಡ ಮಾಡಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಶತಕ ಬಾರಿಸಿದ ರೋಹಿತ್ ಶರ್ಮಾ(4), ಕೆ.ಎಲ್ ರಾಹುಲ್(2) ಮತ್ತು ಸುರೇಶ್ ರೈನಾ(1) ಸಾಲಿಗೆ ಸೇರಿದ್ದಾರೆ.

ದೀಪಕ್ ಹೂಡ ಹಿಂದೆ ಒಂದು ಇಂಟ್ರೆಸ್ಟಿಂಗ್ ಸಕ್ಸಸ್ ಸ್ಟೋರಿಯಿದೆ. ದೇಶೀಯ ಕ್ರಿಕೆಟ್”ನಲ್ಲಿ ಬರೋಡ ತಂಡವನ್ನು ಪ್ರತಿನಿಧಿಸುತ್ತಿದ್ದ ಹೂಡ, ಅಲ್ಲಿಂದ ರಾಜಸ್ಥಾನಕ್ಕೆ ವಲಸೆ ಹೋದವರು. ಕಾರಣ ಬರೋಡ ತಂಡದ ನಾಯಕ ಕೃಣಾಲ್ ಪಾಂಡ್ಯ ಜೊತೆಗಿನ ಜಟಾಪಟಿ. 2 ವರ್ಷಗಳ ಹಿಂದೆ ನಡೆದಿದ್ದ ಆ ಘಟನೆ ದೇಶೀಯ ಕ್ರಿಕೆಟ್’ನಲ್ಲಿ ಭಾರೀ ಸದ್ದು ಮಾಡಿತ್ತು. ಇದೇ ಕಾರಣದಿಂದ ಬರೋಡ ತಂಡವನ್ನು ತೊರೆದಿದ್ದ ಹೂಡ, ರಾಜಸ್ಥಾನ ತಂಡವನ್ನು ಸೇರಿ ತಂಡದ ನಾಯಕನೂ ಆಗಿದ್ದಾರೆ.

ದೀಪಕ್ ಹೂಡ ಬಿಗ್ ಹಿಟ್ಟಿಂಗ್ ಆಲ್ರೌಂಡರ್. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಅಬ್ಬರಿಸಿ 15 ಪಂದ್ಯಗಳಿಂದ 4 ಅರ್ಧಶತಕಗಳ ಸಹಿತ 451 ರನ್ ಕಲೆ ಹಾಕಿದ್ದ ಹೂಡ, ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅಜೇಯ 47 ರನ್ ಗಳಿಸಿದ್ದ ಹೂಡ, 2ನೇ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಬಾರಿಸಿ ತಮ್ಮ ಸಾಮರ್ಥ್ಯವನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ್ದಾರೆ. ಹೂಡ ತಾಕತ್ತಿಗೆ ಮಾಜಿ ಕ್ರಿಕೆಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಸೈ ಎನಿಸಿಕೊಂಡಿರುವುದು 27 ವರ್ಷದ ದೀಪಕ್ ಹೂಡ ವಿಶೇಷತೆ. ಐರ್ಲೆಂಡ್ ವಿರುದ್ಧದ ಮೊದಲ ಟಿ20ಯಲ್ಲಿ ಇನ್ನಿಂಗ್ಸ್ ಆರಂಭಿಸಿ ಸ್ಫೋಟಕ 47 ರನ್ ಸಿಡಿಸಿದ್ದ ಹೂಡ, 2ನೇ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು ಅಮೋಘ ಶತಕ ಬಾರಿಸಿದ್ದಾರೆ. 57 ಎಸೆತಗಳನ್ನು ಎದುರಿಸಿದ ಹೂಡ 9 ಬೌಂಡರಿ ಮತ್ತು 6 ಸಿಡಿಲ ಸಿಕ್ಸರ್’ಗಳ ನೆರವಿನಿಂದ 104 ರನ್ ಸಿಡಿಸಿ, ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸರಣಿ ಶ್ರೇಷ್ಠರಾಗಿ ಮೂಡಿ ಬಂದಿದ್ದಾರೆ.

ಇದನ್ನೂ ಓದಿ : ಮತ್ತೆ ಶುರುವಾಗಲಿದೆ ಕರ್ನಾಟಕ ಪ್ರೀಮಿಯರ್ ಲೀಗ್… ಹೊಸ ಟಿ20 ಲೀಗ್‌ನ ಹೆಸರೇನು ಗೊತ್ತಾ ?

ಇದನ್ನೂ ಓದಿ : Eoin Morgan : ಇಂಗ್ಲಿಷ್ ಕ್ರಿಕೆಟ್ ದಿಕ್ಕನ್ನೇ ಬದಲಿಸಿದ ಐರಿಷ್ ಆಟಗಾರ ; ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂಗ್ಲೆಂಡ್ ದಿಗ್ಗಜನ ವಿದಾಯ

Indian Famous cricketer Success Story of Deepak Hooda

Comments are closed.