Eoin Morgan : ಇಂಗ್ಲಿಷ್ ಕ್ರಿಕೆಟ್ ದಿಕ್ಕನ್ನೇ ಬದಲಿಸಿದ ಐರಿಷ್ ಆಟಗಾರ ; ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂಗ್ಲೆಂಡ್ ದಿಗ್ಗಜನ ವಿದಾಯ

ಲಂಡನ್: ಆತ ಜನಿಸಿದ್ದು ಐರ್ಲೆಂಡ್”ನಲ್ಲಿ. ಕ್ರಿಕೆಟ್ ಶುರು ಮಾಡಿದ್ದು ಐರ್ಲೆಂಡ್”ನಲ್ಲೇ. ಆದರೆ ವಿಶ್ವಕಪ್ ಗೆಲ್ಲಿಸಿಕೊಟ್ಟದ್ದು ಇಂಗ್ಲೆಂಡ್”ಗೆ. ನಾವು ಹೇಳ ಹೊರಟಿರುವುದು ಕ್ರಿಕೆಟ್ ಜನಕರಿಗೆ ಮೊಟ್ಟದ ಮೊದಲ ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಇಯಾನ್ ಮಾರ್ಗನ್ (Eoin Morgan) ಬಗ್ಗೆ.

35 ವರ್ಷದ ಇಯಾನ್ ಮಾರ್ಗನ್ ಅಂತಾರಾಷ್ಟ್ರೀಯ ಕ್ರಿಕೆಟ್”ಗೆ ನಿವೃತ್ತಿ ಘೋಷಿಸಿದ್ದಾರೆ. ಕ್ರಿಕೆಟ್ ಜನಕ ಇಂಗ್ಲೆಂಡ್ 1975ರಿಂದಲೂ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿದ್ರೂ, ವಿಶ್ವಕಪ್ ಗೆಲ್ಲಲು 44 ವರ್ಷಗಳ ಕಾಲ ಕಾಯಬೇಕಾಯಿತು. 2019ರಲ್ಲಿ ಐಸಿಸಿ ವಿಶ್ವಕಪ್ ಗೆದ್ದು ಬೀಗಿದ ಇಂಗ್ಲೆಂಡ್”ಗೆ ವಿಶ್ವಕಪ್ ಬರ ನೀಗಿಸಿದ್ದು ಐರ್ಲೆಂಡ್ ಮೂಲದ ಇಯಾನ್ ಮಾರ್ಗನ್.

2010ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿದ್ದ ಮಾರ್ಗನ್, 2019ರ ಏಕದಿನ ವಿಶ್ವಕಪ್”ನಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಇಂಗ್ಲೆಂಡ್ ಪರ ಒಟ್ಟು 225 ಏಕದಿನ ಪಂದ್ಯಗಳನ್ನಾಡಿರುವ ಮಾರ್ಗನ್, 13 ಶತಕಗಳ ಸಹಿತ 6,957 ರನ್ ಗಳಿಸಿದ್ದಾರೆ. ಅದಕ್ಕೂ ಮೊದಲು ಐರ್ಲೆಂಡ್ ಪರ ಮಾರ್ಗನ್ 23 ಏಕದಿನ ಪಂದ್ಯಗಳಿಂದ 744 ರನ್ ಕಲೆ ಹಾಕಿದ್ದರು. ಇಂಗ್ಲೆಂಡ್ ಮತ್ತು ಐರ್ಲೆಂಡ್ ಪರ ಒಟ್ಟಾರೆ 248 ಏಕದಿನ ಪಂದ್ಯಗಳನ್ನಾಡಿ 14 ಶತಕಗಳ ನೆರವಿನಿಂದ 39ರ ಸರಾಸರಿಯಲ್ಲಿ 7,701 ರನ್ ಕಲೆ ಹಾಕಿದ್ದಾರೆ. ಇಂಗ್ಲೆಂಡ್ ಪರ 16 ಟೆಸ್ಟ್ ಪಂದ್ಯಗಳನ್ನೂ ಆಡಿರುವ ಮಾರ್ಗನ್ 2 ಶತಕಗಳೊಂದಿಗೆ 700 ರನ್ ಗಳಿಸಿದ್ದಾರೆ. 115 ಟಿ20 ಅಂತರಾಷ್ಟ್ರೀಯ ಪಂದ್ಯಗಳಿಂದ 14 ಅರ್ಧಶತಕಗಳ ಸಹಿತ 2,458 ರನ್ ಕಲೆ ಹಾಕಿದ್ದಾರೆ.

ಒಟ್ಟು 126 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿರುವ ಮಾರ್ಗನ್ 76 ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಮಾರ್ಗನ್ ನಾಯಕತ್ವದಲ್ಲಿ 40 ಪಂದ್ಯಗಳಲ್ಲಿ ಇಂಗ್ಲೆಂಡ್ ಸೋತಿದೆ.

ಇಯಾನ್ ಮಾರ್ಗನ್ ಅಂತರಾಷ್ಟ್ರೀಯ ಕ್ರಿಕೆಟ್ ಸಾಧನೆ
ಏಕದಿನ ಕ್ರಿಕೆಟ್
ಪಂದ್ಯ: 248
ರನ್: 7,701
ಸರಾಸರಿ: 39.29
100/50: 14/47

ಟೆಸ್ಟ್ ಕ್ರಿಕೆಟ್
ಪಂದ್ಯ: 16
ರನ್: 700
ಸರಾಸರಿ: 30.43
100/50: 02/03

ಟಿ20 ಕ್ರಿಕೆಟ್
ಪಂದ್ಯ: 115
ರನ್: 2,458
ಸರಾಸರಿ: 28.58
100/50: 00/14
ಸ್ಟ್ರೈಕ್”ರೇಟ್: 136.17

ಇದನ್ನೂ ಓದಿ : India Vs England test : ರೋಹಿತ್ ಶರ್ಮಾ ಔಟ್, ಟೀಮ್ ಇಂಡಿಯಾಗೆ ಬುಮ್ರಾ ಕ್ಯಾಪ್ಟನ್

ಇದನ್ನೂ ಓದಿ : ಮತ್ತೆ ಶುರುವಾಗಲಿದೆ ಕರ್ನಾಟಕ ಪ್ರೀಮಿಯರ್ ಲೀಗ್… ಹೊಸ ಟಿ20 ಲೀಗ್‌ನ ಹೆಸರೇನು ಗೊತ್ತಾ ?

Eoin Morgan announces England retirement

Comments are closed.