ಮಂಗಳವಾರ, ಏಪ್ರಿಲ್ 29, 2025
HomeSportsCricketT20 World cup Super 12 : ಅರ್ಹತಾ ಸುತ್ತು ಮುಕ್ತಾಯ, ಸೂಪರ್-12ಗೆ 4 ತಂಡಗಳು,...

T20 World cup Super 12 : ಅರ್ಹತಾ ಸುತ್ತು ಮುಕ್ತಾಯ, ಸೂಪರ್-12ಗೆ 4 ತಂಡಗಳು, ಇಲ್ಲಿದೆ ಹೊಸ ವೇಳಾಪಟ್ಟಿ

- Advertisement -

ಮೆಲ್ಬೋರ್ನ್: T20 World cup Super 12 : ಟಿ20 ವಿಶ್ವಕಪ್ 2022 ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡಿದ್ದು; ಶ್ರೀಲಂಕಾ, ನೆದರ್ಲೆಂಡ್ಸ್, ಜಿಂಬಾಬ್ವೆ ಮತ್ತು ಐರ್ಲೆಂಡ್ ತಂಡಗಳು ಪ್ರಧಾನ ಸುತ್ತಿಗೆ (ಸೂಪರ್-12) ಅರ್ಹತೆ ಪಡೆದಿವೆ. ಅರ್ಹತಾ ಸುತ್ತಿನ ‘ಎ’ ಗುಂಪಿನಿಂದ ಶ್ರೀಲಂಕಾ ಹಾಗೂ ನೆದರ್ಲೆಂಡ್ಸ್, ‘ಬಿ’ ಗುಂಪಿನಿಂದ ಜಿಂಬಾಬ್ವೆ ಮತ್ತು ಐರ್ಲೆಂಡ್ ತಂಡಗಳು ಸೂಪರ್-12 ಹಂತಕ್ಕೆ ಲಗ್ಗೆ ಇಟ್ಟಿವೆ. ಇದರೊಂದಿಗೆ ಸೂಪರ್-12 ಹಂತದಲ್ಲಿ ಯಾವ ಯಾವ ತಂಡಗಳು ಯಾವ ಗ್ರೂಪ್’ನಲ್ಲಿವೆ..? ಯಾರಿಗೆ ಯಾರು ಎದುರಾಳಿಗಳು ಎಂಬ ಬಗ್ಗೆ ಸ್ಪಷ್ಟತೆ ಸಿಕ್ಕಿದೆ.

ಗ್ರೂಪ್-1: ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ಶ್ರೀಲಂಕಾ.

ಗ್ರೂಪ್-2: ಭಾರತ, ಬಾಂಗ್ಲಾದೇಶ, ನೆದರ್ಲೆಂಡ್ಸ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ.

ಎರಡೂ ಗ್ರೂಪ್’ಗಳಲ್ಲಿ ತಲಾ ಆರು ತಂಡಗಳಂತೆ, ಒಟ್ಟು 12 ತಂಡಗಳು ಸೂಪರ್-12 ಹಂತದಲ್ಲಿ ಸೆಣಸಲಿವೆ. ಪ್ರತೀ ಗ್ರೂಪ್’ನಲ್ಲಿ ಅಗ್ರ ಎರಡು ಸ್ಥಾನಗಳ ಪಡೆಯುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಅರ್ಹತಾ ಸುತ್ತಿನ ಪಂದ್ಯಗಳ ಮುಕ್ತಾಯದ ನಂತರ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ.

T20 World cup Super 12 : ಟಿ20 ವಿಶ್ವಕಪ್ ಟೂರ್ನಿಯ ಪರಿಷ್ಕೃತ ವೇಳಾಪಟ್ಟಿ

ಅಕ್ಟೋಬರ್ 22: ಆಸ್ಟ್ರೇಲಿಯಾ Vs ನ್ಯೂಜಿಲೆಂಡ್ (ಸಿಡ್ನಿ, 12.30 pm)
ಅಕ್ಟೋಬರ್ 22: ಇಂಗ್ಲೆಂಡ್ Vs ಅಫ್ಘಾನಿಸ್ತಾನ(ಪರ್ತ್, 4.30 pm)
ಅಕ್ಟೋಬರ್ 23: ಐರ್ಲೆಂಡ್ Vs ಶ್ರೀಲಂಕಾ (ಹೊಬಾರ್ಟ್, 9.30 am)
ಅಕ್ಟೋಬರ್ 23: ಭಾರತ Vs ಪಾಕಿಸ್ತಾನ (ಮೆಲ್ಬೋರ್ನ್, 1.30 pm)
ಅಕ್ಟೋಬರ್ 24: ಬಾಂಗ್ಲಾದೇಶ Vs ನೆದರ್ಲೆಂಡ್ಸ್ (ಹೊಬಾರ್ಟ್, 9.30 am)
ಅಕ್ಟೋಬರ್ 24: ದಕ್ಷಿಣ ಆಫ್ರಿಕಾ Vs ಜಿಂಬಾಬ್ವೆ (ಹೊಬಾರ್ಟ್, 1.30 pm)
ಅಕ್ಟೋಬರ್ 25: ಆಸ್ಟ್ರೇಲಿಯಾ Vs ಶ್ರೀಲಂಕಾ (ಪರ್ತ್, 4.30 pm)
ಅಕ್ಟೋಬರ್ 26: ಇಂಗ್ಲೆಂಡ್ Vs ಐರ್ಲೆಂಡ್ (ಮೆಲ್ಬೋರ್ನ್, 9.30 am)
ಅಕ್ಟೋಬರ್ 26: ಅಫ್ಘಾನಿಸ್ತಾನ Vs ನ್ಯೂಜಿಲೆಂಡ್ (ಮೆಲ್ಬೋರ್ನ್, 1.30 pm)
ಅಕ್ಟೋಬರ್ 27: ಬಾಂಗ್ಲಾದೇಶ Vs ದಕ್ಷಿಣ ಆಫ್ರಿಕಾ (ಸಿಡ್ನಿ, 8.30 am)
ಅಕ್ಟೋಬರ್ 27: ಭಾರತ Vs ನೆದರ್ಲೆಂಡ್ಸ್ (ಸಿಡ್ನಿ, 12.30 pm)
ಅಕ್ಟೋಬರ್ 27: ಪಾಕಿಸ್ತಾನ Vs ಜಿಂಬಾಬ್ವೆ (ಪರ್ತ್, 4.30 pm)
ಅಕ್ಟೋಬರ್ 28: ಅಫ್ಘಾನಿಸ್ತಾನ Vs ಐರ್ಲೆಂಡ್ (ಮೆಲ್ಬೋರ್ನ್, 9.30 am)
ಅಕ್ಟೋಬರ್ 28: ಆಸ್ಟ್ರೇಲಿಯಾ Vs ಇಂಗ್ಲೆಂಡ್ (ಮೆಲ್ಬೋರ್ನ್, 1.30 pm)
ಅಕ್ಟೋಬರ್ 29: ನ್ಯೂಜಿಲೆಂಡ್ Vs ಶ್ರೀಲಂಕಾ (ಸಿಡ್ನಿ, 1.30 pm)
ಅಕ್ಟೋಬರ್ 30: ಬಾಂಗ್ಲಾದೇಶ Vs ಜಿಂಬಾಬ್ವೆ (ಬ್ರಿಸ್ಬೇನ್, 8.30 am)
ಅಕ್ಟೋಬರ್ 30: ಪಾಕಿಸ್ತಾನ Vs ನೆದರ್ಲೆಂಡ್ಸ್ (ಪರ್ತ್, 12.30 pm)
ಅಕ್ಟೋಬರ್ 30: ಭಾರತ Vs ದಕ್ಷಿಣ ಆಫ್ರಿಕಾ (ಪರ್ತ್, 4.30 pm)
ಅಕ್ಟೋಬರ್ 31: ಆಸ್ಟ್ರೇಲಿಯಾ Vs ಐರ್ಲೆಂಡ್ (ಬ್ರಿಸ್ಬೇನ್, 1.30 pm)
ನವೆಂಬರ್ 01: ಅಫ್ಘಾನಿಸ್ತಾನ Vs ಶ್ರೀಲಂಕಾ (ಬ್ರಿಸ್ಬೇನ್, 9.30 am)
ನವೆಂಬರ್ 01: ಇಂಗ್ಲೆಂಡ್ Vs ನ್ಯೂಜಿಲೆಂಡ್ (ಬ್ರಿಸ್ಬೇನ್, 1.30 pm)
ನವೆಂಬರ್ 02: ನೆದರ್ಲೆಂಡ್ಸ್ Vs ಜಿಂಬಾಬ್ವೆ (ಅಡಿಲೇಡ್, 9.30 am)
ನವೆಂಬರ್ 02: ಭಾರತ Vs ಬಾಂಗ್ಲಾದೇಶ (ಅಡಿಲೇಡ್, 1.30 pm)
ನವೆಂಬರ್ 03: ಪಾಕಿಸ್ತಾನ Vs ದಕ್ಷಿಣ ಆಫ್ರಿಕಾ (ಸಿಡ್ನಿ, 1.30 pm)
ನವೆಂಬರ್ 04: ನ್ಯೂಜಿಲೆಂಡ್ Vs ಐರ್ಲೆಂಡ್ (ಅಡಿಲೇಡ್, 9.30 am)
ನವೆಂಬರ್ 04: ಆಸ್ಟ್ರೇಲಿಯಾ Vs ಅಫ್ಘಾನಿಸ್ತಾನ (ಅಡಿಲೇಡ್, 1.30 pm)
ನವೆಂಬರ್ 05: ಇಂಗ್ಲೆಂಡ್ Vs ಶ್ರೀಲಂಕಾ (ಸಿಡ್ನಿ, 1.30 pm)
ನವೆಂಬರ್ 06: ದಕ್ಷಿಣ ಆಫ್ರಿಕಾ Vs ನೆದರ್ಲೆಂಡ್ಸ್ (ಅಡಿಲೇಡ್, 5.30 am)
ನವೆಂಬರ್ 06: ಬಾಂಗ್ಲಾದೇಶ Vs ಪಾಕಿಸ್ತಾನ (ಅಡಿಲೇಡ್, 9.30 am)
ನವೆಂಬರ್ 06: ಭಾರತ Vs ಜಿಂಬಾಬ್ವೆ (ಮೆಲ್ಬೋರ್ನ್, 1.30 pm)
ನವೆಂಬರ್ 09: ಮೊದಲ ಸೆಮಿಫೈನಲ್ (ಸಿಡ್ನಿ, 1.30 pm)
ನವೆಂಬರ್ 10: 2ನೇ ಸೆಮಿಫೈನಲ್ (ಅಡಿಲೇಡ್, 1.30 pm)
ನವೆಂಬರ್ 13: ಫೈನಲ್ (ಮೆಲ್ಬೋರ್ನ್, 1.30 pm)
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್’ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್
(ಎಲ್ಲಾ ಪಂದ್ಯಗಳ ಆರಂಭ: ಭಾರತೀಯ ಕಾಲಮಾನ

ಇದನ್ನೂ ಓದಿ : T20 Blind Cricket World Cup : ಅಂಧರ ಟಿ20 ವಿಶ್ವಕಪ್ 2022 ಗೆ ಯುವರಾಜ್ ಸಿಂಗ್ ಬ್ರ್ಯಾಂಡ್ ಅಂಬಾಸಿಡರ್

ಇದನ್ನೂ ಓದಿ : Exclusive : ಟೀಮ್ ಇಂಡಿಯಾ ವಿಶ್ವಕಪ್ ಪಡೆಯಲ್ಲಿ ಮೂವರು ಕನ್ನಡಿಗರು, ಒಬ್ಬ ರಾಹುಲ್, ಇನ್ನೊಬ್ಬ ದ್ರಾವಿಡ್, ಮೂರನೆಯವರು ಯಾರು?

T20 World cup 2022 Super 12 Schedule Groups After Qualifier Team Selection

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular